ಪ್ರಪಂಚದಾದ್ಯಂತ ಕೈಕೊಟ್ಟ ವಾಟ್ಸಾಪ್ ಸಂದೇಶ ಸೇವೆ : ಹಠಾತ್ತನೆ ಸ್ಥಗಿತಗೊಂಡ ವಾಟ್ಸಾಪ್‌ನಿಂದ ಸಮಸ್ಯೆ – ಮಧ್ಯಾಹ್ನದಿಂದ ಸಂದೇಶ ಬರುತ್ತಿಲ್ಲ, ಹೋಗುತ್ತಿಲ್ಲ

ಹೊಸದಿಲ್ಲಿ: ಭಾರತದ ಅನೇಕ ಭಾಗಗಳಲ್ಲಿ ಮಂಗಳವಾರ ಮಧ್ಯಾಹ್ನ ವಾಟ್ಸಾಪ್ ಸಂದೇಶ ಸೇವೆಯಲ್ಲಿ ಸಮಸ್ಯೆ ಉಂಟಾಗಿದೆ. ದೇಶದ ಅನೇಕ ಬಳಕೆದಾರರು ವಾಟ್ಸಾಪ್ ಬಳಕೆಯಲ್ಲಿ ತೊಂದರೆ ಉಂಟಾಗಿರುವುದನ್ನು ತಿಳಿಸಿದ್ದಾರೆ. ಬೇರೆ ದೇಶಗಳಲ್ಲಿಯೂ ಇದೇ ಸಮಸ್ಯೆ ಉಂಟಾಗಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಜಗತ್ತಿನ ಅನೇಕ ದೇಶಗಳಲ್ಲಿ ವಾಟ್ಸಾಪ್ ಸಮಸ್ಯೆ ಉಂಟಾಗಿದೆ ಎಂದು ವರದಿಯಾಗಿದೆ. ವಿಶ್ವದಾದ್ಯಂತ ಬಹು ಜನಪ್ರಿಯವಾಗಿರುವ ತ್ವರಿತ ಸಂವಹನದ ಆಪ್‌ ಆಗಿರುವ ಮೆಟಾ ಒಡೆತನದ ವಾಟ್ಸಾಪ್‌ ದೈನಂದಿನ ಚಟುವಟಿಕೆಗಳು, ಉದ್ಯೋಗ ಕಚೇರಿಗಳು, ವೈಯಕ್ತಿಕ ಸಂವಹನಗಳಲ್ಲಿ ನೂರಾರು ಕೋಟಿ ಜನರು ಅವಲಂಬಿಸಿದ್ದಾರೆ. ಅದರ ದಿಢೀರ್ ಸ್ಥಗಿತದಿಂದ ಜನರು ಕಂಗಾಲಾಗಿದ್ದಾರೆ. ಮಧ್ಯಾಹ್ನ ಗಂಟೆ 12.07ಕ್ಕೆ ಅಸಹಜವಾದ ತೀವ್ರ ‘ಸಮಸ್ಯೆ ವರದಿ’ಗಳನ್ನು ಗಮನಿಸಲು ಆರಂಭಿಸಿದ್ದಾಗಿ ಪ್ರಮುಖ ಆನ್‌ಲೈನ್ ಸಾಧನ ಡೌನ್ ಡಿಟೆಕ್ಟರ್ ತಿಳಿಸಿದೆ. ಮಧ್ಯಾಹ್ನ 1 ಗಂಟೆ ವೇಳೆಗೆ ಅಂತಹ ಸಾವಿರಾರು ಪ್ರಕರಣಗಳು ವರದಿಯಾಗಿವೆ. ಮಂಗಳವಾರ ಸಂಜೆ ಖಂಡಗ್ರಾಸ ಸೂರ್ಯಗ್ರಹಣ ಸಂಭವಿಸಲಿದೆ. ಆದರೆ ಅದಕ್ಕೂ ಮುನ್ನವೇ ಜನರಿಗೆ ಅತಿ ಅನಿವಾರ್ಯ ಸಂದೇಶ ಸೇವೆಯಾಗಿರುವ ವಾಟ್ಸಾಪ್‌ಗೆ ‘ಗ್ರಹಣ’ ಹಿಡಿದಿದೆ. ಇದರಿಂದ ದೇಶಾದ್ಯಂತ ಅನೇಕ ಮಹತ್ವದ ಕಾರ್ಯ ಚಟುವಟಿಕೆಗಳಿಗೆ ತೀವ್ರ ಹಿನ್ನಡೆ ಉಂಟಾಗಿದೆ.error: Content is protected !!
Scroll to Top