ಹಲಾಲ್‌ ಮುಕ್ತ ದೀಪಾವಳಿ : ಜನಜಾಗೃತಿ ಯಶಸ್ವಿ

ಕಾಂಗ್ರೆಸ್‌ ಅವಧಿಗಿಂತ ಬಿಜೆಪಿ ಅವಧಿಯಲ್ಲಿಯೇ ನನ್ನ ಮೇಲೆ ಅಧಿಕ ಕೇಸುಗಳು : ಪ್ರಮೋದ್‌ ಮುತಾಲಿಕ್‌

ಕಾರ್ಕಳ : ಹಲಾಲ್‌ ಮುಕ್ತ ದೀಪಾವಳಿ ಆಚರಣೆ ಆಗಬೇಕೆಂಬ ಅಭಿಯಾನವನ್ನು ಕಳೆದ ಒಂದು ತಿಂಗಳಿಂದ ನಡೆಸುತ್ತಿದ್ದೇವೆ ಮತ್ತು ಅದು ಅತ್ಯಂತ ಯಶಸ್ವಿಯಾಗಿದೆ. ಜನರಲ್ಲಿ ಜಾಗೃತಿ ಮೂಡಿಸುವಂತಹ ಹಿನ್ನೆಲೆಯಲ್ಲಿ ಮತ್ತು ಹಲಾಲ್‌ ಎಂದರೆ ಏನು? ಹಲಾಲ್ ದೇಶಕ್ಕೆ ಆಘಾತಕಾರಿಯಾದುದು ಯಾಕೆ? ಎಂಬ ಅರಿವು ಜನರಿಗೆ ಬಂದಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಲಾಲ್‌ನ್ನು ಸಂಪೂರ್ಣ ನಿಷೇಧ ಮಾಡಿದರೆ ಮಾತ್ರ ತಡೆಗಟ್ಟಲು ಸಾಧ್ಯ ಎಂದು ಶ್ರೀರಾಮ ಸೇನೆಯ ಸ್ಥಾಪಕಾಧ್ಯಕ್ಷ ಪ್ರಮೋದ್‌ ಮುತಾಲಿಕ್‌ ತಿಳಿಸಿದರು. ಅವರು ಅ.25ರ ಬೆಳಿಗ್ಗೆ ಕಾರ್ಕಳದ ಹೊಟೇಲ್‌ ಪ್ರಕಾಶ್‌ನಲ್ಲಿ ಜರುಗಿದ ಪತ್ರಕಾ ಗೋಷ್ಠಿಯನ್ನದ್ಧೇಶಿಸಿ ಮಾತನಾಡಿದರು. ಮಾಂಸಾಹಾರದಲ್ಲಿ ಮಾತ್ರ ಇದ್ದ ಹಲಾಲ್‌, ಪ್ರಸ್ತುತ ಎಲ್ಲ ವಸ್ತುಗಳ ಮೇಲೆ ಹಲಾಲ್‌ ಸರ್ಟಿಫಿಕೇಟ್‌ ಮಾಡಬೇಕೆಂಬ ಪ್ರಕ್ರಿಯೆ ಜಾರಿಗೊಳಿಸಿದರಿಂದ ಈ ಕುರಿತು ಸಾಕಷ್ಟು ಜನರಿಗೆ ಗೊತ್ತೆ ಇರಲಿಲ್ಲ. ವಸ್ತುಗಳನ್ನು ಕೊಳ್ಳುವಾಗ ಅದರಲ್ಲಿ ಹಲಾಲ್‌ ಗುರುತು ಇದೆಯಾ ಎಂದು ನೋಡುವಷ್ಟು ಪ್ರಜ್ಞೆ ಪ್ರಸ್ತುತ ಜನರಲ್ಲಿ ಮೂಡಿದೆ. ಒಂದು ಹಲಾಲ್‌ ಸರ್ಟಿಫಿಕೇಟ್‌ಗೆ ವರ್ಷಕ್ಕೆ ರೂ. 60 ಸಾವಿರ ನೀಡಬೇಕು. ದೇಶದಲ್ಲಿ ವ್ಯವಸ್ಥಿತವಾದಂತಹ ದೇಶದ ಆರ್ಥಿಕತೆ ಮತ್ತು ಹಲಾಲ್‌ ಆರ್ಥಿಕತೆಗೆ ಪೈಪೋಟಿ ಮೂಡಿಸುವಂತಹ ಪರಿಸ್ಥಿತಿ ಉಂಟಾಗಿದೆ. ಹಲಾಲ್‌ನ ಮೂಲಕ ಬರಂದಂತಹ ಹಣವು, ಹಲಾಲ್‌ ಟ್ರಸ್ಟ್‌ನವರು ಭಯೋತ್ಪಾದನೆ, ಮುಸ್ಲಿಂ ಗಲಭೆಕೋರರಿಗೆ ಮತ್ತು ಕೊಲೆಗಡುಕರನ್ನು ಬಿಡಿಸಲು ಈ ದುಡ್ಡು ಬಳಕೆಯಾಗುತ್ತಿದೆ. ಸಿಎಎ ಪ್ರತಿಭಟನೆ ಸಮಯದಲ್ಲಿ ಈ ಹಣವು ವಿನಿಯೋಗವಾಗಿತ್ತು. ಕರ್ನಾಟಕದಲ್ಲಿ ಹಿಜಾಬ್‌ ಸಂದರ್ಭದಲ್ಲಿಯೂ ಮತ್ತು ಮಂಡ್ಯದಲ್ಲಿ ಮುಸ್ಕಾನ್‌ ಎನ್ನುವ ಹುಡುಗಿಯು ಪ್ರತಿಭಟನೆ ನಡೆಸಿದ್ದಕ್ಕೆ ರೂ.5 ಲಕ್ಷ ಹಣವನ್ನು ನೀಡಲಾಗಿತ್ತು. ಹಲಾಲ್‌ ಮುಕ್ತ ದೀಪಾವಳಿ ಮಾತ್ರವಲ್ಲ ಹಲಾಲ್‌ ಮುಕ್ತ ಭಾರತದ ನಿರ್ಮಾಣವಾಗಬೇಕು ಎಂದು ಆಗ್ರಹಿಸಿದರು.
ಅಜಾನ್‌ಗೆ ಸಂಬಂಧಪಟ್ಟಂತೆ ಬಂದ ಅರ್ಜಿಗಳಲ್ಲಿ 10 ಸಾವಿರ ಮಸೀದಿಗೆ, 3 ಸಾವಿರ ದೇವಸ್ಥಾನಗಳಿಗೆ ಮತ್ತು 1400 ಚರ್ಚ್‌ಗಳಿಗೆ ಧ್ವನಿವರ್ಧಕ ಬಳಕೆಗೆ ಅನುಮತಿ ನೀಡಲಾಗಿದೆ ಎಂದು ಸರಕಾರವು ಘೋಷಿಸಿದೆ. ಇದು ಸರಕಾರದ ಮೂರ್ಖತನ, ಸುಪ್ರೀಂ ಕೋರ್ಟ್‌ನ ಆಜ್ಞೆ ಏನಿರುವುದು? ಇವರು ಅನುಮತಿ ಏನು ಕೊಡುತ್ತಿರುವುದು? ಮುಂಜಾನೆ 5 ಗಂಟೆಗೆ ಮಸೀದಿಯ ಧ್ವನಿವರ್ಧಕ ಇಂದಿಗೂ ಕೇಳುತ್ತಿದೆ. ಅದನ್ನು ನಿಲ್ಲಿಸುವ ತಾಕತ್ತು ಸರಕಾರಕ್ಕಿಲ್ಲ. ಹೈಕೋರ್ಟ್‌ ಛೀಮಾರಿ ಹಾಕಿದಾಗ ನಾವು ಪ್ರಕ್ರಿಯೆ ಮಾಡಿದ್ದೇವೆ ಎಂಬ ನಾಟಕ ಮಾಡುತ್ತಿದ್ದಾರೆ. ಬೂಟಾಟಿಕೆ ಬಿಟ್ಟು ಬೆಳಗ್ಗಿನ 5 ಗಂಟೆಗೆ ಅಜಾನ್‌ ಕೂಗುವ ಧ್ವನಿವರ್ಧಕವನ್ನು ನಿಲ್ಲಿಸಲಿ. ರಾತ್ರಿ 10ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಧ್ವನಿರ್ಧಕ ಹಾಕುವಂತಿಲ್ಲ ಎನ್ನುವುದು ಸರಕಾರಕ್ಕೆ ತಿಳಿದಿಲ್ಲವೆ? ಪೊಲೀಸ್‌ ಇಲಾಖೆಗೆ ಕೇಳಿಸುತ್ತಿಲ್ಲವಾ? ಕಿವಿಯಲ್ಲಿ ಏನು ಹಾಕಿಕೊಂಡಿದ್ದೀರಿ? ಎಂದು ಸರಕಾರದ ವಿರುದ್ಧ ಗುಡುಗಿದರು.
ಹಿಂದು ಹಬ್ಬಗಳ ಸಂದರ್ಭದಲ್ಲಿ, ಗಣೇಶೋತ್ಸವದ ಸಂದರ್ಭದಲ್ಲಿ ಸುಪ್ರಿಂ ಕೋರ್ಟ್‌ ಆಜ್ಞೆ ನಿಮಗೆ ನೆನಪಾಗುತ್ತದೆ. ದಿನಕ್ಕೆ 5 ಬಾರಿ ನಮಾಜ್‌ ಮಾಡುವಾಗ ಈ ಆದೇಶ ನೆನೆಪಾಗುವುದಿಲ್ಲವೆ? ಸಾರ್ವಜನಿಕರಿಗೆ ಸಾರ್ವಜನಿಕ ಸ್ಥಳದಲ್ಲಿ ತೊಂದರೆಯಾಗುತ್ತಿರುವುದನ್ನು ಸರಕಾರ ತಡೆಯಬೇಕು.‌ ಮುಂದಿನ ದಿನದಲ್ಲಿ ಮತ್ತೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದರು. ದೇವಸ್ಥಾನದ ಘಂಟೆ, ನಗಾರಿ ಮತ್ತು ಪೂಜೆ ಯಾರಿಗೂ ತೊಂದರೆ ಕೊಟ್ಟಿಲ್ಲ. ಶಬ್ದಮಾಲಿನ್ಯ ಆಗದಂತೆ ಎಲ್ಲರೂ ನಿಯಮ ಪಾಲಿಸಬೇಕು ಎಂಬುದನ್ನು ನಾನು ಈ ಸಂದರ್ಭದಲ್ಲಿ ಹೇಳುತ್ತೇನೆ.
ಇತ್ತೀಚೆಗೆ ರಾಮನಗರ ಜಿಲ್ಲೆಯಲ್ಲಿ ಸರಕಾರದ ಪಡೀತರ ಚೀಟಿಯನ್ನು ಮಾಡಿ ಎಲ್ಲ ಮನೆಗಳಿಗೆ ಏನೂ ಕೊಡುತ್ತಿದ್ದಾರೆ? ಪಡಿತರ ಚೀಟಿಯ ಹಿಂದೆ ಏಸು ಕ್ರಿಸ್ತನ ಫೋಟೋ ಹಾಕಿದ್ದಾರೆ. ಕರ್ನಾಟಕದ ಕಾಂಗ್ರೆಸ್‌ನ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್‌ ಅವರು ಏಸು ಕ್ರಿಸ್ತನ ಫೋಟೋ ಹಾಕಿ ಸಾವಿರಾರು ಪಡಿತರ ಚೀಟಿಗಳನ್ನು ವಿತರಣೆ ಮಾಡಿದ್ದಾರೆ. ಡಿಕೆಶಿಯವರೆ ಯಾವ ವ್ಯಾಟಿಕನ್‌ ಸಿಟಿಯಲ್ಲಿದ್ದೀರ? ಇಂಗ್ಲೆಂಡ್‌ನಲ್ಲಿದ್ದೀರೋ? ಸೆಕ್ಯುಲರ್‌ ಎನ್ನುವ ದೇಶದಲ್ಲಿ ಈ ಏಸು ಕ್ರಿಸ್ತನ ಫೋಟೋವನ್ನು ಸೋನಿಯಾ ಗಾಂಧಿಯನ್ನು ಮೆಚ್ಚಿಸಲು ಹಾಕುವಂತಿಲ್ಲ. ಅಧ್ಯಕ್ಷರಾದವರೆ ಈ ರೀತಿ ಮಾಡುತ್ತಾರೆ ಎಂದರೆ ಸೆಕ್ಯುಲರ್‌ ಹಿಂದು ವಿರೋಧಿ. ಇಂದು ದೇಶದಲ್ಲಿ ಕಾಂಗ್ರೆಸ್‌ ಈ ಮಟ್ಟಕ್ಕೆ ಬರಲು ಇದೇ ಕಾರಣ ಎಂಬ ಪ್ರಜ್ಞೆ ಬಂದಿಲ್ವಾ. ಪಡಿತರ ಚೀಟಿ ಏಸು ಕ್ರಿಸ್ತನ ಪ್ರಚಾರ ಮಾಡಲಿಕ್ಕಿರುವುದಲ್ಲ, ವೈಯಕ್ತಿಕವಾಗಿ ಬೇಕಾದುದನ್ನೆ ಮಾಡಿಕೊಳ್ಳಿ ಎಂದರು.
ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು
ಚುನಾವಣೆಯಲ್ಲಿ ಸ್ಪರ್ಧಿಸಲು ಬಹಳ ವರ್ಷಗಳಿಂದ ಪ್ರಯತ್ತಿಸಿದ್ದೇನೆ. ರಾಜಕೀಯ ಶಕ್ತಿಯಿಲ್ಲದೆ ಯಾವುದನ್ನು ಬದಲಾಯಿಸಲು ಸಾಧ್ಯವಿಲ್ಲ. ಪ್ರಖರ ಹಿಂದುತ್ವದಿಂದಾಗಿ ಬಿಜೆಪಿಯವರು ನನ್ನನ್ನು ಹತ್ತಿರ ಸೇರಿಸಿಕೊಳ್ಳಲಿಲ್ಲ. ಇವತ್ತು ಬಿಜೆಪಿಯವರಿಗೆ ಪ್ರಖರ ಹಿಂದುತ್ವವಾದಿಗಳು ಬೇಡವಾಗಿದ್ದಾರೇನೋ? ಚುನಾವಣೆಗೆ ನಿಲ್ಲುವಂತೆ ಎಲ್ಲರೂ ಒತ್ತಾಯ ಮಾಡುತ್ತಿದ್ದಾರೆ. ವಿಧಾನಸಭೆ ಪ್ರವೇಶಿಸಿ ಹಿಂದುತ್ವ ವಿಚಾರ ಧಾರೆಯನ್ನು ತರಬೇಕೆನ್ನುವುದು ಇವರ ಆಶಯವಾಗಿದೆ. ಸಾವಿರಾರು ಕಾರ್ಯಕರ್ತರು ಇಂದಿಗೂ ಕೋರ್ಟ್‌ಗೆ ಅಲೆದಾಡುತ್ತಿದ್ದಾರೆ. ಅಧಿಕಾರಕ್ಕೆ ಬಂದು 24ಗಂಟೆಯೊಳಗೆ ನಮ್ಮ ಹಿಂದೂ ಕಾರ್ಯಕರ್ತರ ಮೇಲಿನ ಕೇಸು ವಾಪಾಸ್ಸು ಪಡೆದುಕೊಳ್ಳುತ್ತೇವೆ ಎಂದು ಹೇಳಿ ಇವತ್ತಿಗೆ ಮೂರು ವರ್ಷವಾದರೂ ಒಂದೇ ಒಂದು ಕೇಸನ್ನೂ ವಾಪಾಸ್ಸು ಪಡೆದಿಲ್ಲ. ಹಸುವನ್ನು ರಕ್ಷಣೆ ಮಾಡಿದವರು ರೌಡಿ ಶೀಟರ್‌. ಲವ್‌ ಜಿಹಾದ್‌ ಗೆ ಸಿಲುಕಿದ ಹೆಣ್ಣು ಮಗಳನ್ನು ರಕ್ಷಣೆ ಮಾಡಿದರೆ ಗೂಂಡಾ ಕಾಯ್ದೆ. ಹಿಂದೂ ಕಾರ್ಯಕರ್ತರು ಗೂಂಡಾಗಳಾದದ್ದು, ರೌಡಿಗಳಾಗಿದ್ದು ಬಿಜೆಪಿಯವರಿಗೆ ಕೇಳಿಸಿಲ್ವಾ, ಕಾಣಿಸಿಲ್ವಾ? ಹಿಂದೂ ಕಾಳಜಿ ಇರುವ ಪ್ರಮೋದ್‌ ಮುತಾಲಿಕ್‌ ರಾಜಕೀಯ ಪ್ರವೇಶ ಮಾಡಬೇಕೆನ್ನುವ ಒತ್ತಡ ಇದೆ. ಇನ್ನೂ ಈ ಬಗ್ಗೆ ಅವಕಾಶ, ಅವಧಿ ಇದ್ದು ನಿರ್ಣಯ ತೆಗೆದುಕೊಂಡಿಲ್ಲ. ಮುಂದಿನ ದಿನಗಳಲ್ಲಿ ಪ್ರಕಟಿಸುತ್ತೇನೆಎಂದರು. ಕಾರ್ಕಳ, ಉಡುಪಿ, ಪುತ್ತೂರು ಹೀಗೆ ಕರ್ನಾಟಕದ ಯಾವ ಕ್ಷೇತ್ರದಲ್ಲೂ ಚುನಾವಣೆಗೆ ಸ್ಪರ್ಧಿಸಬಹುದು. ಕಳೆದ ಸಲ ಉಡುಪಿಗೆ ಬಂದಾಗ ಕಾರ್ಕಳ, ಉಜಿರೆ ಬೆಳ್ತಂಗಡಿ ಹೀಗೆ ಕಾರ್ಯಕರ್ತರು ಕರೆದ ಕಡೆಗಳಲ್ಲಿ ಓಡಾಟ ನಡೆಸಿದ್ದೇನೆ. ಕಾರ್ಕಳವನ್ನು ಕೇಂದ್ರೀಕರಿಸಿದ್ದೇನೆ ಎನ್ನುವುದು ಸುಳ್ಳು. ಮುಂದಿನ ದಿನಗಳಲ್ಲಿ ಹಿಂದೂ ಕಾರ್ಯಕರ್ತರಿಗೆ ಆಶ್ರಯ, ಧೈರ್ಯ ತೆಗೆದುಕೊಳ್ಳುವಂತಹ ನಿರ್ಣಯವನ್ನು ತೆಗೆದುಕೊಳ್ಳುತ್ತೇನೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಖಚಿತ ಎಂದರು.
ಕಾಂಗ್ರೆಸ್ಸಿನ ಬಿ ಟೀಂ
ಶೇಕಡಾ 70ಕ್ಕಿಂತಲೂ ಅಧಿಕ ಕಾಂಗ್ರೆಸಿಗರು ಬಿಜೆಪಿಯಲ್ಲಿದ್ದಾರೆ. ನನಗೆ ಕಾಂಗ್ರೆಸ್ಸಿನ ಬಿ ಟೀಂ ಎನ್ನುವವರ ನಾಲಿಗೆ ಸೀಳಿ ಬಿಡ್ತೇನೆಂಬ ಎಚ್ಚರಿಕೆ ನೀಡ್ತಾ ಇದ್ದೇನೆ. ಇಡೀ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಬರಲು ನನ್ನ ಪಾತ್ರವು ಇದೆ. ನನ್ನದು ಮಾತ್ರವಲ್ಲದೇ ಲಕ್ಷಾಂತರ ಹಿಂದೂ ಕಾರ್ಯಕರ್ತರ ಪರಿಶ್ರಮದಿಂದ ಬಿಜೆಪಿ ಸರಕಾರ ಆಡಳಿತ ನಡೆಸುತ್ತಿದೆ.
ಇತ್ತೀಚಿನ ಕೆಲವು ಬೆಳವಣಿಗೆ ನೋವು ತರುವಂತದ್ದು, ಪ್ರವೀಣ್‌ ನೆಟ್ಟಾರ್‌ ಕೊಲೆಯ ಸಮಯದಲ್ಲಿ ನಡೆದಂತಹಾ ಘಟನೆ, ಪರೇಶ್‌ ಮೇಸ್ತಾ ಸಾವಿನ ಸಮಯದಲ್ಲಿ ರಾಜಕೀಯವಾಗಿ ಪಡೆದ ಲಾಭ, ಸಿಬಿಐ ತನಿಖೆಯಿಂದ ಕ್ಲೀನ್‌ ಚಿಟ್‌ ಬಂದುಬಿಟ್ಟಿದೆ. ಕಾಂಗ್ರೆಸ್‌ನವರು ಸಾಕ್ಷಿಗಳನ್ನು ಹೊಸಕಿ ಹಾಕಿದ್ರು, ಇವರು ಅದಕ್ಕೆ ಕೈ ಜೋಡಿಸಿದರು. ಪರೇಶ್‌ ಮೇಸ್ತಾ ನೂರಕ್ಕೆ ನೂರು ಕೊಲೆ. ಇದರ ಬಗ್ಗೆ ಬಿಜೆಪಿಯವರು ಧ್ವನಿ ಎತ್ತುತ್ತಾ ಇಲ್ಲ. ಸಿಬಿಐ ತನಿಖೆ ಪುನಃ ನಡೆಸಲು ಅವರ ತಂದೆ ಹೇಳಬೇಕಾ?ಸಿದ್ದರಾಮಯ್ಯನವರ ಮೇಲೆ 2012 ರ ಹಗರಣಗಳ ಮೇಲೆ ತನಿಖೆ ನಡೆಸಲು ಈಗ ನೆನಪಾಯ್ತಾ?
ಶ್ರೀರಾಮ ಸೇನೆ ರಾಜಕೀಯ ಸಂಘಟನೆ, ರಾಜಕೀಯ ಪಕ್ಷವಲ್ಲ ಹಾಗಾಗಿ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಪ್ರಶ್ನೆ ಇಲ್ಲ. ಹಿಂದೂ ಕಾರ್ಯಕರ್ತರಿಗೆ 25 ಸೀಟು ನೀಡಬೇಕೆಂದು ಬಿಜೆಪಿಯವರಿಗೆ ಹೇಳಿದ್ದೇವೆ.
ಕಾಂಗ್ರೆಸ್‌ ಅವಧಿಗಿಂತ ಬಿಜೆಪಿ ಅವಧಿಯಲ್ಲಿಯೇ ನನ್ನ ಮೇಲೆ ಹೆಚ್ಚು ಕೇಸುಗಳು ಬಿದ್ದಿದ್ದಾವೆ. ಗಡೀಪಾರು ಮಾಡಿದ್ದಾರೆ. ದೀರ್ಘವಾಗಿ ಸುದೀರ್ಘ ಏಳು ವರ್ಷಗಳ ಅವಧಿಯವರೆಗೆ ಗಡೀಪಾರು ಮಾಡಿದ್ದೇ ಬಿಜೆಪಿಯವರು. ಆದ್ದರಿಂದ ನಾನು ಗೋವಾ ಪ್ರವೇಶ ಮಾಡಲು ಆಗ್ತಾ ಇಲ್ಲ. ಕೇಂದ್ರ ಸರಕಾರ ಗೋಮಾಂಸ ರಫ್ತು ಮಾಡುವುದನ್ನು ನಿಲ್ಲಿಸಬೇಕು. ಅದರ ಬಗ್ಗೆ ಸಾಕಷ್ಟು ಸಲ ಪ್ರತಿಭಟನೆ ಮಾಡಿದ್ದೇನೆ. ರಾಜ್ಯದಲ್ಲಿ ಗೋ ಹತ್ಯಾ ನಿಷೇಧ ಕಾನೂನು ಪತ್ರಿಕೆಗಳಿಗೆ ಮಾತ್ರ ಸೀಮಿತವಾಗಿದೆ. ಕೇವಲ ಕಾನೂನು ಮಾಡಿ ಸೀಮಿತಗೊಳಿಸಿದಲ್ಲಿ ಗೋ ಹತ್ಯೆ ತಡೆಯಲು ಸಾಧ್ಯವಿಲ್ಲ ಸಾಧ್ಯವಿಲ್ಲ.

Latest Articles

error: Content is protected !!