ಕಾರ್ಕಳ: ಪ್ರಪಂಚದ ಅತಿ ಮುಂದುವರಿದ ದೇಶ ಎಂದೆನಿಸಿಕೊಂಡಿರುವ ಇಂಗ್ಲೆಂಡಿನ, ಪ್ರಧಾನಿ ಪಟ್ಟವನ್ನು ಕರ್ನಾಟಕದ ಅಳಿಯ, ಭಾರತ ಸಂಜಾತ, ರಿಷಿ ಸುನಾಕ್ ಅಲಂಕರಿಸುವುದು ಅತೀವ ಸಂತಸ ತಂದಿದೆ. ಭಾರತ ಮೂಲದ ಅಪ್ರತಿಮ ಪ್ರತಿಭೆ ಹಾಗೂ ಇಂಗ್ಲೆಂಡ್ನ ಪ್ರಜೆಯಾಗಿರುವ ಸುನಾಕ್, ಕ್ರೈಸ್ತ ರಾಷ್ಟ್ರದ ಪ್ರಧಾನಿ ಆಗುವುದರೊಂದಿಗೆ ರಾಷ್ಟ್ರದ ಘನತೆ ಹೆಚ್ಚಿದೆ. ಪಂಚಾಯತ್ ಸದಸ್ಯನಿಂದ ಪ್ರಧಾನಿಯವರೆಗೆ ಸ್ವದೇಶಿ, ವಿದೇಶಿ, ಜಾತಿ ಮತ ಎನ್ನುವ ರಾಷ್ಟ್ರಗಳಿಗೆ ಇದು ಜ್ವಲಂತ ಉದಾಹರಣೆಯಾಗಿದೆ. ರಿಷಿ ಸುನಾಕ್ ಅವಧಿಯಲ್ಲಿ ಇಂಗ್ಲೆಂಡ್ ಇನ್ನೂ ಅಭಿವೃದ್ಧಿ ಹೊಂದುವುದರೊಂದಿಗೆ ಭಾರತದ ಕೀರ್ತಿ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಕಾರ್ಕಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿಕಟಪೂರ್ವ ಉಪಾಧ್ಯಕ್ಷ ಜೆರಾಲ್ಡ್ ಡಿ’ಸಿಲ್ವಾ ಮಿಯ್ಯಾರು ತಿಳಿಸಿದರು