ಕಾರ್ಕಳ : ನಿತ್ಯ ನಿರಂತರ ಗೋ ಕಳ್ಳತನ : ಮಿಯ್ಯಾರು ಗ್ರಾಮದಲ್ಲಿ ಹೆಚ್ಚುತ್ತಿರುವ ಗೋ ಕಳ್ಳತನ

ಕಾರ್ಕಳ: ಮಿಯ್ಯಾರು ಗ್ರಾಮದ ಸುಂದರ ದೇವಾಡಿಗ ಅವರ ಮನೆಗೆ ಅ.23ರ ರಾತ್ರಿ ಗೋ ಕಳ್ಳರು ಬಂದಿದ್ದಾರೆ ಎಂದು ಮನೆಮಂದಿ ದೂರು ದಾಖಲಿಸಿದ್ದಾರೆ. ಸುಂದರ ದೇವಾಡಿಗ ಅವರು ಕಳೆದ ಒಂದು ತಿಂಗಳ ಅವಧಿಯಲ್ಲಿ ಮೂರು ಹಸುವನ್ನು ಕಳೆದುಕೊಂಡಿರುತ್ತಾರೆ, ಎರಡೂವರೆ ವರ್ಷದಲ್ಲಿ 20 ಕ್ಕೂ ಅಧಿಕ ದನವನ್ನು ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚೆಗೆ 10 ಕ್ಕೂ ಹೆಚ್ಚು ಹಸುಗಳನ್ನು ಕಳಕೊಂಡಿದ್ದ ಮಿಯ್ಯಾರು ಯಶೋಧಾ ಆಚಾರ್ಯ ಅವರ ಮನೆಗೆ ಆರ್ಥಿಕ ನೆರವಿಗಾಗಿ ದಾನಿಗಳು, ಸಚಿವರು ಹಸುಗಳನ್ನು ದಾನವಾಗಿ ನೀಡಿದ್ದರು. ಈಗ ಆ ಮನೆಯಿಂದಲೂ ಎರಡು ಹಸುಗಳ ಕಳ್ಳತನವಾಗಿದೆ. ಕುಂಠಿಬೈಲು ಮಂಜಡ್ಕ ಮುರಳಿ ಪೂಜಾರಿಯವರ ಮನೆಯಿಂದ ಈವರೆಗೆ 7ಕ್ಕೂ ಅಧಿಕ ಹಸುಗಳ ಕಳ್ಳತನವಾಗಿದೆ, ಇತ್ತೀಚೆಗೆ ಕಬೆತ್ತಿ ಹಸುವಿನ ಕಳ್ಳತನವಾದ ಸಂದರ್ಭದಲ್ಲಿ ಕಾರ್ಕಳ ಪೋಲೀಸ್ ಸ್ಟೇಷನಲ್ಲಿ ದೂರು ದಾಖಲಿಸಿದ್ದಾರೆ.

ತಲವಾರು ಭಯದಿಂದ ದೂರು ದಾಖಲಿಸಲು ಹಿಂದೇಟು
ಈ ಪರಿಸರದ ಸುಮಾರು 7 ಮನೆಯ ದನ ಕಳ್ಳತನವಾಗಿದ್ದು , ಜನರು ತಲವಾರು ಭಯದಿಂದ ಪೋಲೀಸ್ ಕೇಸು ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ ಮತ್ತು ಕೇಸು ದಾಖಲಿಸಿದರು ಯಾವುದೇ ಪ್ರಯೋಜನವಿಲ್ಲ ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರಿಂದ ಮನೆ ಭೇಟಿ
ಕಾರ್ಕಳ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಈ ಎಲ್ಲಾ ಮನೆಗಳಿಗೆ ಭೇಟಿ ನೀಡಿದ್ದು ಆ ಸಂದರ್ಭದಲ್ಲಿ ಕಂಡು ಬಂದ ವಿಷಯವೇನೆಂದರೇ ಹಸು ಕಳ್ಳತನವಾದ ಎಲ್ಲಾ ಮನೆಗಳು ಕೇವಲ 2-3 ಕಿಲೋಮೀಟರ್ ವ್ಯಾಪ್ತಿಯಲ್ಲಿ ಬರುತ್ತಿದ್ದು. ಸ್ಥಳೀಯ ವ್ಯಕ್ತಿ ಈ ಹಸು ಕಳ್ಳರಿಗೆ ಮಾಹಿತಿ ನೀಡುತ್ತಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳೀಯ ಗೋ ದಲ್ಲಾಳಿಗಳನ್ನು ಬಂಧಿಸಿದರೆ ದನ ಕಳ್ಳರ ಇಡೀ ಗ್ಯಾಂಗ್ ಕಾನೂನಿನ ಹಿಡಿತಕ್ಕೆ ಬರುತ್ತದೆ ಎಂದು ಕಾರ್ಕಳ ಹಿಂದು ಜಾಗರಣ ವೇದಿಕೆಯ ಸಂಯೋಜಕ ಗುರುಪ್ರಸಾದ್ ನಾರಾವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Latest Articles

error: Content is protected !!