Thursday, December 1, 2022
spot_img
Homeಸ್ಥಳೀಯ ಸುದ್ದಿಕಣಂಜಾರು (ಅ.26) : ಬ್ರಹ್ಮಲಿಂಗೇಶ್ವರ ಫ್ರೆಂಡ್ಸ್‌ನ 21 ನೇ ವರ್ಷದ ಸಾಮೂಹಿಕ ದೀಪಾವಳಿ ಆಚರಣೆ

ಕಣಂಜಾರು (ಅ.26) : ಬ್ರಹ್ಮಲಿಂಗೇಶ್ವರ ಫ್ರೆಂಡ್ಸ್‌ನ 21 ನೇ ವರ್ಷದ ಸಾಮೂಹಿಕ ದೀಪಾವಳಿ ಆಚರಣೆ

ನಾಯಿದ ಬೀಲ ಹಾಸ್ಯಮಯ ನಾಟಕ ಪ್ರದರ್ಶನ

ಕಣಂಜಾರು : ಶ್ರೀ ಬ್ರಹ್ಮಲಿಂಗೇಶ್ವರ ಫ್ರೆಂಡ್ಸ್‌ನ 21 ನೇ ವರ್ಷದ ಸಾಮೂಹಿಕ ದೀಪಾವಳಿ ಆಚರಣೆ ಪ್ರಯುಕ್ತ ಅ. 26 ರ ಸಂಜೆ 6.30ಕ್ಕೆ ಪರಾಡಿ ಕೊಪ್ಪಲದಲ್ಲಿ ಕಾಪಿಕಾಡ್‌, ಬೋಳಾರ್‌, ವಾಮಂಜೂರು ಅಭಿನಯದ ನಾಯಿದ ಬೀಲ ಎಂಬ ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮವನ್ನು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್‌ ಕುಮಾರ್‌ ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ಚಾರ್ಟೆಡ್‌ ಎಕೌಂಟೆಂಟ್ಸ್‌ ಅಸೋಸಿಯೇಶನ್‌ನ ಅಧ್ಯಕ್ಷ ಕಣಜಾರು ಚಂದನ್‌ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದು, ಜೆ.ಸಿ. ರಾಜೇಂದ್ರ ಭಟ್‌ ಮಾರ್ಗದರ್ಶನ ನೀಡಲಿರುವರು. ನ್ಯಾಯವಾದಿ, ಕಾಂತನಮಜಲು ಭೋಜ ಎನ್‌. ಪೂಜಾರಿ, ನೀರೆ ಗ್ರಾ. ಪಂ. ಸದಸ್ಯ ಸಚ್ಚಿದಾನಂದ ಪ್ರಭು, ಕೌಡೂರು ಗ್ರಾ. ಪಂ. ಮಾಜಿ ಉಪಾಧ್ಯಕ್ಷೆ ವನಜ ಅಂಚನ್‌, ಬ್ರಹ್ಮಲಿಂಗೇಶ್ವರ ದೇವಸ್ಥಾನ ಕಣಂಜಾರು ಆಡಳಿತ ಮೊಕ್ತೇಸರ ಸುಧೀರ್‌ ಹೆಗ್ಡೆ, ಕಣಂಜಾರು ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಹರಿದಾಸ್‌ ಹೆಗ್ಡೆ ಮತ್ತು ದೇವಸ್ಥಾನದ ಪ್ರಧಾನ ಅರ್ಚಕ ಗುರುರಾಜ ಮಂಜಿತ್ತಾಯ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಸಂಘದ ಅಧ್ಯಕ್ಷರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!