ಅಮೆರಿಕಾದಲ್ಲೂ ದೀಪಾವಳಿ ಸಂಭ್ರಮ: ಶೇತಭವನದಲ್ಲಿ ದೀಪ ಬೆಳಗಿದ ಅಧ್ಯಕ್ಷ ಬೈಡನ್

ವಾಷಿಂಗ್ಟನ್ : ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಅಮೆರಿಕಾದಲ್ಲೂ ಮನೆ ಮಾಡಿದ್ದು, ಶ್ವೇತಭವನದಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್​ ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್ ಅವರು ಶ್ವೇತಭವನದಲ್ಲಿ ದೀಪಾವಳಿ ಆಚರಿಸಿದರು.
ಶ್ವೇತಭವನದಲ್ಲಿ ದೀಪ ಬೆಳಕಿಸಿದ ಜೋ ಬೈಡನ್ ಅವರು, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ನೇತೃತ್ವದಲ್ಲಿ ನಾವು ಅಧಿಕೃತ ಶ್ವೇತಭವನದ ದೀಪಾವಳಿ ಆಯೋಜಿಸಿದ್ದೇವೆ. ಅಮೆರಿಕಾದ ಇತಿಹಾಸದಲ್ಲಿ ಅತ್ಯಂತ ವೈವಿಧ್ಯಮಯ ಆಡಳಿತದ ಸದಸ್ಯರಿಂದ ಸುತ್ತುವರಿದ ದೀಪವನ್ನು ಬೆಳಗಿಸಲು ನಮಗೆ ಗೌರವವಿದೆ ಎಂದು ಹೇಳಿದರು.
ಇದೇ ವೇಳೆ ಅಮೆರಿಕದಾದ್ಯಂತ ದಕ್ಷಿಣ ಏಷ್ಯಾದ ಸಮುದಾಯವು ಪ್ರದರ್ಶಿಸಿದ ಆಶಾವಾದ, ಧೈರ್ಯ ಮತ್ತು ಸಹಾನುಭೂತಿಗೆ ಬೈಡನ್‌ ಧನ್ಯವಾದ ಅರ್ಪಿಸಿದರು. ಬೈಡನ್‌ ಆಡಳಿತದ ಹಲವಾರು ಭಾರತೀಯ ಅಮೆರಿಕನ್ನರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಪ್ರಾರ್ಥನೆಗಳು, ನೃತ್ಯಗಳು, ಪಟಾಕಿಗಳು ಮತ್ತು ಸಿಹಿತಿಂಡಿಗಳೊಂದಿಗೆ, ದೀಪಾವಳಿಯನ್ನು ಆಚರಿಸುವ ಪ್ರತಿಯೊಬ್ಬರೂ ಹಬ್ಬ ಆಚರಿಸಲು ಮತ್ತು ಸಂಪರ್ಕಿಸಲು, ಸಮುದಾಯದ ಹೆಮ್ಮೆಯನ್ನು ಅನುಭವಿಸಲು ಮತ್ತು ಬೆಳಕಿನ ಕೂಟದಲ್ಲಿನ ಶಕ್ತಿಯನ್ನು ನೆನಪಿಸಿಕೊಳ್ಳುವ ಅವಕಾಶವನ್ನು ಆನಂದಿಸಲಿ ಎಂದು ಬೈಡನ್‌ ತಿಳಿಸಿದರು.
ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕೂಡ ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಶ್ವೇತಭವನದಿಂದ ಶುಭ ಕೋರಿದರು. ಶ್ವೇತಭವನವು ಜನರ ಮನೆಯಾಗಿದೆ ಮತ್ತು ನಮ್ಮ ಅಧ್ಯಕ್ಷರು ಮತ್ತು ಪ್ರಥಮ ಮಹಿಳೆ ಒಟ್ಟಾಗಿ ಪ್ರತಿ ಅಮೆರಿಕನ್ನರು ತಮ್ಮ ಗೌರವ ಮತ್ತು ಸಂಪ್ರದಾಯವನ್ನು ಆಚರಿಸಲು ಈ ಸ್ಥಳವನ್ನು ಮಾಡಿದ್ದಾರೆ ಎಂದು ಹೇಳಿದರು.
ಪ್ರಥಮ ಮಹಿಳೆ ಜಿಲ್ ಬೈಡನ್‌ ಮಾತನಾಡಿ, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಅಧ್ಯಕ್ಷೆ ಜೋ ಬೈಡನ್‌ ಆಡಳಿತವು ದೀಪವನ್ನು ಬೆಳಗಿಸಲು ಪ್ರಪಂಚದಾದ್ಯಂತ 1 ಶತಕೋಟಿ ಜನರನ್ನು ಸೇರುತ್ತದೆ ಮತ್ತು ಅಜ್ಞಾನದ ಮೇಲೆ ಜ್ಞಾನ ಮತ್ತು ಕತ್ತಲೆಯ ಮೇಲೆ ಬೆಳಕು ಚೆಲ್ಲಲು ಒಳ್ಳೆಯದಕ್ಕಾಗಿ ಹೋರಾಟವನ್ನು ಆಚರಿಸುತ್ತದೆ ಎಂದರು.





























































































































































































































error: Content is protected !!
Scroll to Top