ಹೆಬ್ರಿ : ಹೆಬ್ರಿ ಅಮೃತ ಭಾರತಿ ಮಾತೃಮಂಡಳಿ ವತಿಯಿಂದ ಕಳೆದ ವರ್ಷ ಮಾತೆಯರಿಗೆ ಹಾಗೂ ಸಾವ೯ಜನಿಕರಿಗೆ ನೀಡಿದ ಗೋಗ್ರಾಸ ನಿಧಿ ಹುಂಡಿಗಳಿಂದ ಸಂಗ್ರಹವಾದ ಸುಮಾರು ಅರವತ್ತು ಸಾವಿರ ರೂಪಾಯಿ ಮೊಬಲಗನ್ನು ಮಂಗಳವಾರ ದೀಪಾವಳಿ ಗೋ ಪೂಜೆಯ ಸಂದಭ೯ದಲ್ಲಿ ಪೇಜಾವರ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಸಮ್ಮುಖದಲ್ಲಿ ಗಿಲ್ಲಾಳಿ ಶ್ರೀ ವಿಶ್ವೇಶ ಕೃಷ್ಣ ಗೋಶಾಲೆಯ ಪ್ರಮುಖರಾದ ವಿದ್ವಾನ್ ಗಿಲ್ಲಾಳಿ ಪದ್ಮನಾಭ ಆಚಾರ್ಯ ಇವರಿಗೆ ಹಸ್ತಾಂತರಿಸಿದರು.
ಈ ಸಂದಭ೯ದಲ್ಲಿ ಡಾ. ಭಾಗ೯ವಿ ಐತಾಳ್, ಆರತಿ ರವಿರಾವ್, ಶಿಕ್ಷಕಿ ವಿಮಲ ಭಂಡಾರಿ, ಮಾತೃಮಂಡಳಿ ಅಧ್ಯಕ್ಷೆ ವೀಣಾ ಆರ್. ಭಟ್, ಕಾಯ೯ದಶಿ೯ ಸುಪ್ರೀತ ಪಿ. ಶೆಟ್ಟಿ, ವಸಂತಿ ಹೆಬ್ಬಾರ್, ಪ್ರತಿಭ ರಾವ್, ಭಾರತಿ ರಾವ್, ಶೃತಿ ಭಟ್, ರೂಪ ಪಿ.ಭಟ್, ಸುಧಾ ಭಟ್, ಪ್ರಜ್ಞ ಶೆಟ್ಟಿ, ಪೂಣಿ೯ಮ ಅಡಿಗ, ಲಲಿತ ಶೆಟ್ಟಿ ಮತ್ತು ಸುಮನ ಉಪಸ್ಥಿತರಿದ್ದರು.
ಹೆಬ್ರಿ ಅಮೃತ ಭಾರತಿ ಮಾತೃಮಂಡಳಿ : ಗೋಶಾಲೆಗೆ ಸಹಾಯಹಸ್ತ
