ಕಲ್ಲು ತೂರಾಟದಲ್ಲಿ ಓರ್ವ ಗಾಯ
ಶಿವಮೊಗ್ಗ: ಹಿಂದು ಕಾರ್ಯಕರ್ತ ಹರ್ಷ ಹತ್ಯೆಯ ಬಳಿಕ ಸಾಮರಸ್ಯ ಕದಡಿರುವ ಶಿವಮೊಗ್ಗದಲ್ಲಿ ಮತ್ತೆ ಪ್ರಕ್ಷುಬ್ಧ ಪರಿಸ್ಥಿತಿ ನೆಲೆಯಾಗುತ್ತಿದೆ. ಸೋಮವಾರ ರಾತ್ರಿ ಕೆಲವು ರೌಡಿಗಳು ದಿ.ಹರ್ಷ ಅವರ ಮನೆ ಮುಂದೆ ತಲವಾರು, ಲಾಂಗ್ ಮುಂತಾದ ಮಾರಕಾಯುಧಗಳನ್ನು ಹಿಡಿದುಕೊಂಡು ಪುಂಡಾಟಿಕೆ ಮೆರೆದು ಮನೆಯವರನ್ನು ಬೆದರಿಸಿದ್ದಾರೆ.
ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು ಲಾಂಗು ಮಚ್ಚುಗಳನ್ನು ತೋರಿಸಿ ಬೆದರಿಕೆಯೊಡ್ಡಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಹಿಂದು ಕಾರ್ಯಕರ್ತರು ದೌಡಾಯಿಸಿದ್ದಾರೆ. ಅವರನ್ನು ನೋಡಿ ಪಲಾಯನ ಮಾಡುತ್ತಿರುವಾಗ ದುಷ್ಕರ್ಮಿಗಳು ಕಲ್ಲೆಸೆದಿದ್ದು ಓರ್ವ ಹಿಂದು ಕಾರ್ಯಕರ್ತ ಗಾಯಗೊಂಡಿದ್ದಾರೆ.
ಮೂರು ದಿನಗಳ ಹಿಂದೆಯಷ್ಟೇ ಮುಸ್ಲಿಂ ವ್ಯಕ್ತಿಯೊಬ್ಬರು ಹರ್ಷ ಅವರ ಸಹೋದರಿ ಅಶ್ವಿನಿ ಹಾಗೂ ಇತರ 15 ಮಂದಿ ವಿರುದ್ಧ ಕಾರಿಗೆ ಹಾನಿ ಮಾಡಿದ ದೂರು ದಾಖಲಿಸಿದ್ದರು.