Thursday, December 1, 2022
spot_img
Homeಸುದ್ದಿಬಾಲಕಿಯನ್ನು ಐಟಂ ಎಂದು ಕರೆದ ಉದ್ಯಮಿಗೆ ಜೈಲು ಶಿಕ್ಷೆ

ಬಾಲಕಿಯನ್ನು ಐಟಂ ಎಂದು ಕರೆದ ಉದ್ಯಮಿಗೆ ಜೈಲು ಶಿಕ್ಷೆ

ಪೋಕ್ಸೊ ಕಾಯಿದೆಯಡಿ ಬರುವ ಪ್ರಕರಣ ಎಂದ ನ್ಯಾಯಾಲಯ

ಮುಂಬಯಿ : ಶಾಲಾ ವಿದ್ಯಾರ್ಥಿನಿಯೊಬ್ಬಳನ್ನು ಐಟಂ ಎಂದು ಕರೆದು ಕಿರುಕುಳ ನೀಡಿದ ಉದ್ಯಮಿಗೆ ಮುಂಬಯಿ ನ್ಯಾಯಾಲಯ ಒಂದೂವರೆ ವರ್ಷದ ಜೈಲು ಶಿಕ್ಷೆ ವಿಧಿಸಿದೆ.
ಆಗ 16 ವರ್ಷದವಾಗಿದ್ದ ಬಾಲಕಿಯನ್ನು ‘ಕ್ಯಾ ಐಟಂ, ಕಿದರ್ ಜಾ ರಹೀ ಹೋ’ ಎಂದು ಕರೆದು ಆರೋಪಿ ಕಿರುಕುಳ ನೀಡಿದ್ದ. ಪ್ರಕಣದಲ್ಲಿ ತಪ್ಪಿತಸ್ಥನೆಂದು ಸಾಬೀತಾದ ಹಿನ್ನೆಲೆ ಆತನಿಗೆ ಜೈಲುಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿದೆ.
ಹುಡುಗಿಯನ್ನು ಸಂಬೋಧಿಸಲು ‘ಐಟಂ’ ಎಂಬ ಪದವನ್ನು ಲೈಂಗಿಕವಾಗಿ ಬಳಸಲಾಗಿದೆ ಪೋಕ್ಸೊ ಕೋರ್ಟ್ ತೀರ್ಪಿನಲ್ಲಿ ಹೇಳಿದೆ.
ಈ ಘಟನೆಯು 2015ರಲ್ಲಿ ನಡೆದಿದ್ದು, ಅಪ್ರಾಪ್ತ ಬಾಲಕಿ ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದಾಗ ಆಕೆಗೆ ಕಿರುಕುಳ ನೀಡಲಾಗಿತ್ತು. ಆಗ 26 ವರ್ಷದವನಾಗಿದ್ದ ಆರೋಪಿ ಬಾಲಕಿಯ ಕೂದಲನ್ನು ಎಳೆದು ಆಕೆಗೆ ‘ಕ್ಯಾ ಐಟಂ, ಕಿದರ್ ಜಾ ರಹೀ ಹೋ?’ ಅಂತಾ ಕೇಳಿದ್ದ. ಬೈಕ್‍ನಲ್ಲಿ ಬಂದಿದ್ದ ಆರೋಪಿಯು ಮಧ್ಯಾಹ್ನ 2.15ಕ್ಕೆ ಅಪ್ರಾಪ್ತ ಬಾಲಕಿ ಶಾಲೆಯಿಂದ ಮನೆಗೆ ಬರುತ್ತಿದ್ದಾಗ ಹಿಂಬಾಲಿಸಿ ಕಿರುಕುಳ ನೀಡಿದ್ದ. ಆಕೆಯನ್ನು ನೋಡಿದ ಕೂಡಲೇ ಹಿಂದೆ ಬಂದ ಆರೋಪಿ ಕೂದಲು ಹಿಡಿದು ಎಳೆದಾಡಿದ್ದಾನೆ. ಈ ವೇಳೆ ಬಾಲಕಿ ಆತನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಆತನನ್ನು ದೂರ ತಳ್ಳಲು ಯತ್ನಿಸಿ ತನ್ನನ್ನು ಬಿಟ್ಟುಬಿಡುವಂತೆ ಅಂಗಲಾಚಿದ್ದಾಳೆ. ಆದರೆ ಆರೋಪಿ ಆಕೆಯ ಮೇಲೆ ದೌರ್ಜನ್ಯ ಎಸಗಿದ್ದಾನೆ. ಅಪ್ರಾಪ್ತೆ ಕೂಡಲೇ 100ಕ್ಕೆ ಡಯಲ್ ಮಾಡಿ ವಿಷಯ ತಿಳಿಸಿದ್ದಳು. ಆದರೆ ಸ್ಥಳಕ್ಕೆ ಪೊಲೀಸರು ಬರುವಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದ.

LEAVE A REPLY

Please enter your comment!
Please enter your name here

Most Popular

error: Content is protected !!