ಬಜಗೋಳಿ : ಹಿಂದೂ ಸಂಘಟಕ ರವೀಂದ್ರ ಶೆಟ್ಟಿ ಬಜಗೋಳಿ ಮತ್ತು ರೂಪಾ ರವೀಂದ್ರ ಶೆಟ್ಟಿಯವರು ದೀಪಾವಳಿಯಂದು ಸ್ವಗೃಹದಲ್ಲಿ ಶಾಸ್ತ್ರೋಕ್ತವಾಗಿ ಗೋಪೂಜೆ ನೆರವೇರಿಸಿ ಎರಡನೇ ವರುಷದ ಗೋ ದಾನಕ್ಕೆ ಚಾಲನೆ ನೀಡಿದರು. ಹಿಂದೂ ಅಶಕ್ತ ಕುಟುಂಬಗಳು ಆರ್ಥಿಕ ಸ್ವಾವಲಂಬಿಯಾಗಬೇಕು. ಗೋ ಕಳ್ಳರಿಂದ ಸಂತೃಸ್ತರಾಗಿರುವ ಕುಟುಂಬಗಳ ಕಣ್ಣೀರು ಒರೆಸಬೇಕು ಎಂಬ ಸದುದ್ದೇಶದಿಂದ ಕಾರ್ಕಳ ತಾಲೂಕಿನ ವಿವಿಧ ಗ್ರಾಮಗಳ ಐದು ಅಶಕ್ತ ಕುಟುಂಬಗಳನ್ನು ಗುರುತಿಸಿ, ಆ ಕುಟುಂಬದ ಆರ್ಥಿಕ ಮತ್ತು ಶ್ರೇಯೋಭಿವೃದ್ಧಿಗೆ ರವೀಂದ್ರ ಶೆಟ್ಟಿ ಬಜಗೋಳಿಯವರ ನೇತೃತ್ವದಲ್ಲಿ ತಳಿಯ ಹಸುಗಳನ್ನು ದಾನ ಮಾಡುವ ಮೂಲಕ ಗೋ ದಾನವು ಯಶಸ್ವಿಯಾಗಿ ಜರುಗಿತು.
ತನ್ನ ದುಡಿಮೆಯ ಬಹುಪಾಲನ್ನು ಅಶಕ್ತರ ಶಿಕ್ಷಣ, ದೈವ-ದೇವಸ್ಥಾನಗಳ ಜೀರ್ಣೋದ್ಧಾರ, ಹಿಂದೂ ಧಾರ್ಮಿಕ ಕಾರ್ಯಕ್ರಮಗಳಿಗಾಗಿ ವಿನಿಯೋಗಿಸುತ್ತಿರುವ ರವೀಂದ್ರ ಶೆಟ್ಟಿ ಬಜಗೋಳಿಯವರು ಕಾರ್ಕಳದ ವಿವಿಧೆಡೆಯ ನಾಲ್ಕು ಅಶಕ್ತ, ಸಂತ್ರಸ್ತ ಕುಟುಂಬದ ಕಣ್ಣೀರೊರೆಸುವ ಮೂಲಕ ನಿಜಾರ್ಥದಲ್ಲಿ ಜನನಾಯಕರಾಗಿ ಮೂಡಿಬಂದಿದ್ದರು. ಆ ನಾಲ್ಕು ಕುಟುಂಬಗಳೂ ಸಹ ರವೀಂದ್ರ ಶೆಟ್ಟಿಯವರ ಗೋ ದಾನದಿಂದ ನೆಮ್ಮದಿಯ ಬದುಕು ನಡೆಸಿಕೊಂಡು ಬರುತ್ತಿವೆ.
ಈ ಬಾರಿಯೂ ಸಹ ರವೀಂದ್ರ ಶೆಟ್ಟಿ ಬಜಗೋಳಿಯವರು ಹೆಬ್ರಿ, ಬೆಳ್ಮಣ್, ಮಿಯ್ಯಾರು, ಮಾಳ, ಈದು ಪರಿಸರದಲ್ಲಿ ಗೋ ಕಳ್ಳತನವಾಗಿರುವ ಮನೆಗಳನ್ನು ಮತ್ತು ತೀರಾ ಬಡ ಕುಟುಂಬಗಳನ್ನು ಗುರುತಿಸಿದ್ದು, ಅಂತಹ ಐದು ಮನೆಗಳಿಗೆ ತೆರಳಿ ಮಂಗಳವಾರ ಮುಂಜಾನೆ ಗೋ ದಾನ ಮಾಡಿ ಅವರ ಕುಟುಂಬಗಳಿಗೆ ನೆರವಾಗಿದ್ದಾರೆ.
ಬಜಗೋಳಿ : ರವೀಂದ್ರ ಶೆಟ್ಟಿಯವರಿಂದ ಐದು ಕುಟುಂಬಗಳಿಗೆ ಗೋ ದಾನ
