Saturday, December 10, 2022
spot_img
Homeಸುದ್ದಿಚರ್ಚಿಲ್‌ ಮಾತಲ್ಲೇ ಬ್ರಿಟಿಷರಿಗೆ ತಿರುಗೇಟು ಕೊಟ್ಟ ಆನಂದ ಮಹೀಂದ್ರ

ಚರ್ಚಿಲ್‌ ಮಾತಲ್ಲೇ ಬ್ರಿಟಿಷರಿಗೆ ತಿರುಗೇಟು ಕೊಟ್ಟ ಆನಂದ ಮಹೀಂದ್ರ

ರಿಷಿ ಸುನಾಕ್‌ ಆಯ್ಕೆ ಕುರಿತು ಉದ್ಯಮಿಯ ಟ್ವೀಟ್‌ ಆಯಿತು ಭಾರಿ ವೈರಲ್‌

ಹೊಸದಿಲ್ಲಿ : ಬ್ರಿಟನ್ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಕ್ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಉದ್ಯಮಿ ಆನಂದ್ ಮಹೀಂದ್ರ ಮಾಡಿರುವ ಟ್ವೀಟ್ ಭಾರಿ ಸಂಚಲನ ಸೃಷ್ಟಿಸಿದೆ.
1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯದ ಸಿಕ್ಕಿದ ಸಂದರ್ಭದಲ್ಲಿ ಬ್ರಿಟಿಷ್ ಪ್ರಧಾನಿಯಾಗಿದ್ದ ವಿನ್‌ಸ್ಟಂಟ್ ಚರ್ಚಿಲ್ ಹೇಳಿದ ಮಾತನ್ನೇ ಪುನರುಚ್ಚರಿಸಿ ಬ್ರಿಟಿಷರಿಗೆ ಮಹೀಂದ್ರ ತಿರುಗೇಟು ನೀಡಿದ್ದಾರೆ. ಎಲ್ಲ ಭಾರತೀಯ ನಾಯಕರು ಕಡಿಮೆ ಸಾಮರ್ಥ್ಯ ಹೊಂದಿದ್ದಾರೆ. ಇಷ್ಟೇ ಅಲ್ಲ ದೇಶ ಮುನ್ನಡೆಸುವ ಶಕ್ತಿ ಇಲ್ಲದವರಾಗಿದ್ದಾರೆ ಎಂದಿದ್ದರು. 75ನೇ ವರ್ಷದ ಸ್ವಾತಂತ್ರ್ಯೋತ್ಸವದಲ್ಲಿ ಇದೀಗ ಭಾರತೀಯ ಮೂಲದ ವ್ಯಕ್ತಿ ಬ್ರಿಟನ್ ಪ್ರಧಾನಿಯಾಗಿದ್ದಾರೆ. ಬದುಕು ಸುಂದರವಾಗಿದೆ ಎಂದು ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ ಹಿಂದೆ ಭಾರತೀಯರನ್ನು ನಿಷ್ಪ್ರಯೋಜಕ ಎಂದಿದ್ದ ಚರ್ಚಿಲ್ ಹಾಗೂ ನಂತರದ ಹಲವು ಬ್ರಿಟಿಷ್ ನಾಯಕರಿಗೆ ನೀಡಿದ ತಿರುಗೇಟು. ವಿಶ್ವದ ಪ್ರಮುಖ ಕಂಪನಿಗಳು, ಕಾರ್ಪೋರೇಟ್ ಕ್ಷೇತ್ರದ ಮುಖ್ಯಸ್ಥರು ಭಾರತೀಯರಾಗಿದ್ದಾರೆ. ಇದೀಗ ವಿಶ್ವದಲ್ಲೇ ಬಲಿಷ್ಠ ಎಂದು ಗುರುತಿಸಿಕೊಂಡಿರುವ ದೇಶಗಳ ಆಡಳಿತ ಇದೀಗ ಭಾರತೀಯರ ಕೈಗೆ ಸಿಗುತ್ತಿದೆ.
ಭಾರತದ ಮೇಲೆ ಹಲವು ದಾಳಿಗಳು ನಡೆದಿದೆ. ಹಲವರು ಇಡೀ ದೇಶವನ್ನು ತೆಕ್ಕೆಗೆ ತೆಗೆದುಕೊಂಡು ಆಡಳಿತ ನಡೆಸಿ ಭಾರತವನ್ನು ನಿರ್ನಾಮ ಮಾಡುವ ಯತ್ನ ಮಾಡಿದ್ದಾರೆ. ಆದರೆ ಅದು ಸಾಧ್ಯವಾಗಲಿಲ್ಲ. ಇದೀಗ ಭಾರತೀಯರ ಬುದ್ಧಿವಂತಿಕೆ, ಸಾಮರ್ಥ್ಯದಿಂದ ಒಂದೊಂದು ದೇಶದ ಆಡಳಿತ ಚುಕ್ಕಾಣಿ ಕೈಗೆ ಬರುತ್ತಿದೆ. ಈ ಮೂಲಕ ಆಧುನಿಕ ರೀತಿಯಲ್ಲಿ ಭಾರತ ಹಳೇ ಸೇಡನ್ನು ಯಾವುದೇ ದುರುದ್ದೇಶವಿಲ್ಲದೆ ತೀರಿಸಿಕೊಳ್ಳಲಿದೆ ಎಂದು ಟ್ವಿಟರ್‌ನಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here

Most Popular

error: Content is protected !!