Thursday, December 1, 2022
spot_img
Homeಸುದ್ದಿಮುಂದಿನ ತಿಂಗಳು ಸೌದಿ ಯುವರಾಜ ಭಾರತಕ್ಕೆ

ಮುಂದಿನ ತಿಂಗಳು ಸೌದಿ ಯುವರಾಜ ಭಾರತಕ್ಕೆ

ಮೋದಿ ಆಹ್ವಾನದ ಮೇರೆಗೆ ಒಂದು ದಿನದ ಭೇಟಿ

ಹೊಸದಿಲ್ಲಿ : ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡಲಿದ್ದಾರೆ. ನವೆಂಬರ್ ಮಧ್ಯದಲ್ಲಿ ಇಂಡೋನೇಷ್ಯಾದಲ್ಲಿ ನಡೆಯಲಿರುವ ಜಿ-20 ಶೃಂಗಸಭೆಗೆ ತೆರಳುವಾಗ ಬಿನ್ ಸಲ್ಮಾನ್ ಭಾರತದಲ್ಲಿ ಒಂದು ದಿನ ಇರಲಿದ್ದಾರೆ. ನ.14ರಂದು ಭಾರತ ತಲುಪಿ ಸಂಜೆ ಇಂಡೋನೇಷ್ಯಾಕ್ಕೆ ತೆರಳಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್‌ನಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮೂಲಕ ಭಾರತಕ್ಕೆ ಭೇಟಿ ನೀಡುವಂತೆ ಬಿನ್ ಸಲ್ಮಾನ್ ಅವರಿಗೆ ಆಹ್ವಾನ ಕಳುಹಿಸಿದ್ದರು. ಆಹ್ವಾನವನ್ನು ಅವರು ಸ್ವೀಕರಿಸಿದ್ದಾರೆ.
ಪ್ರಧಾನಿ ಮೋದಿಯವರ ಅಧಿಕಾರಾವಧಿಯಲ್ಲಿ ಭಾರತ ಮತ್ತು ಸೌದಿ ಅರೇಬಿಯಾ ನಡುವಿನ ಸಂಬಂಧಗಳು ತುಂಬಾ ಗಟ್ಟಿಯಾಗಿದೆ ಮತ್ತು ಅವರು ಅವರ ಆಪ್ತ ಮಿತ್ರರಲ್ಲಿ ಒಬ್ಬರು. ಮೋದಿ ಸರ್ಕಾರ ಸೌದಿ ಅರೇಬಿಯಾ ಮತ್ತು ಮುಸ್ಲಿಂ ಪ್ರಪಂಚದೊಂದಿಗೆ ಉತ್ತಮ ಸಂಬಂಧವನ್ನು ತನ್ನ ಸಾಧನೆ ಎಂದು ಪರಿಗಣಿಸುತ್ತಿದೆ.

LEAVE A REPLY

Please enter your comment!
Please enter your name here

Most Popular

error: Content is protected !!