Saturday, December 10, 2022
spot_img
Homeಸುದ್ದಿಸಲ್ಮಾನ್‌ ರಶ್ದಿಗೆ ಒಂದು ಕಣ್ಣಿನ ದೃಷ್ಟಿ ಶಾಶ್ವತ ನಷ್ಟ

ಸಲ್ಮಾನ್‌ ರಶ್ದಿಗೆ ಒಂದು ಕಣ್ಣಿನ ದೃಷ್ಟಿ ಶಾಶ್ವತ ನಷ್ಟ

ವೇದಿಕೆಯ ಮೇಲೆ ದುಷ್ಕರ್ಮಿಯ ದಾಳಿಗೆ ತುತ್ತಾಗಿದ್ದ ಲೇಖಕ

ಮ್ಯಾಡ್ರಿಡ್: ಕೆಲ ಸಮಯದ ಹಿಂದೆ ವೇದಿಕೆಯ ಮೇಲೆಯೇ ದುಷ್ಕರ್ಮಿಯೊಬ್ಬನಿಂದ ಮಾರಣಾಂತಿಕ ದಾಳಿಗೆ ಗುರಿಯಾಗಿದ್ದ ಖಯಾತ ಲೇಖಕ ಸಲ್ಮಾನ್‌ ರಶ್ದಿ ಒಂದು ಕಣ್ಣಿನ ದೃಷ್ಟಿ ಹಾಗೂ ಒಂದು ಕೈಯ ಸ್ವಾಧೀನವನ್ನು ಶಾಶ್ವತವಾಗಿ ಕಳೆದುಕೊಂಡಿದ್ದಾರೆ.
ಆ.12 ರಂದು ಅಮೆರಿಕದ ನ್ಯೂಯಾರ್ಕ್‌ನ ಚೌಟಕ್ವಾ ಸಂಸ್ಥೆಯಲ್ಲಿ ಉಪನ್ಯಾಸ ನೀಡುತ್ತಿದ್ದ ರಶ್ದಿ ಅವರ ಮೇಲೆ ವೇದಿಕೆಯಲ್ಲೇ ಮಾರಣಾಂತಿಕ ದಾಳಿ ನಡೆದಿತ್ತು. 1980ರಲ್ಲಿ ಸೆಟಾನಿಕ್ ವರ್ಸಸ್ ಪುಸ್ತಕ ಬರೆದಿದ್ದ ರಶ್ದಿ ಅವರಿಗೆ ಇರಾನ್‌ನಿಂದ ಆಗಾಗ್ಗೆ ಬೆದರಿಕೆ ಕರೆಗಳು ಬರುತ್ತಿದ್ದವು.
ರಶ್ದಿ ಅವರಿಗೆ ಉಂಟಾಗಿರುವ ಗಾಯದ ಪ್ರಮಾಣ ಸ್ಪಷ್ಟವಾಗಿಲ್ಲ ಎಂದು ತಿಳಿದುಬಂದಿದೆ. ರಶ್ದಿ ಅವರಿಗೆ ಆಳವಾದ ಗಾಯಗಳಾಗಿದ್ದು, ತೋಳುಗಳಲ್ಲಿನ ನರಗಳು ಕತ್ತರಿಸಿಹೋಗಿವೆ. ಎದೆಯ ಭಾಗದಲ್ಲೇ 15 ಗಾಯಗಳಾಗಿವೆ.

LEAVE A REPLY

Please enter your comment!
Please enter your name here

Most Popular

error: Content is protected !!