Tuesday, December 6, 2022
spot_img
Homeಸುದ್ದಿಕಾರ್ಕಳ ಬಸ್‌ಸ್ಟ್ಯಾಂಡಿನಲ್ಲೇ ಮಟ್ಕಾ ದಂಧೆ: ಓರ್ವ ಸೆರೆ

ಕಾರ್ಕಳ ಬಸ್‌ಸ್ಟ್ಯಾಂಡಿನಲ್ಲೇ ಮಟ್ಕಾ ದಂಧೆ: ಓರ್ವ ಸೆರೆ

ಕಾರ್ಕಳ: ಕಾರ್ಕಳ ಬಸ್‌ಸ್ಟ್ಯಾಂಡ್‌ ಬಳಿ ಮಟ್ಕಾ ದಂಧೆ ನಡೆಸುತ್ತಿದ್ದ ನಿತೇಶ್‌ ಎಂಬಾತನನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ.
ನಿತೇಶ್‌ ಬಸ್‌ಸ್ಟ್ಯಾಂಡ್‌ ಪಕ್ಕ ಮಟ್ಕಾ ಜೂಜಿಗೆ ಹಣ ಸಂಗ್ರಹಿಸುತ್ತಿರುವ ಕುರಿತು ಮಾಹಿತಿ ಲಭಿಸಿ ನಗರ ಠಾಣೆ ಪೊಲೀಸರು ಸಂಜೆ ಹೊಂಚು ಹಾಕಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಒಂದು ರೂಪಾಯಿಗೆ 70 ರೂ. ಕೊಡುವುದಾಗಿ ಕೂಗಿ ಹೇಳಿ ಮಟ್ಕಾ ಚೀಟಿ ಬರೆದುಕೊಳ್ಳುತ್ತಿದ್ದ. ಅವನಿಂದ 1150 ರೂ. ಹಾಗೂ ಮಟ್ಕಾ ದಂಧೆಗೆ ಬಳಸುತ್ತಿದ್ದ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!