Thursday, December 1, 2022
spot_img
Homeಸುದ್ದಿ15 ಲಕ್ಷ ದೀಪ ಪ್ರಜ್ವಲನೆ: ಅಯೋಧ್ಯೆಯಲ್ಲಿ ಗಿನ್ನೆಸ್‌ ದಾಖಲೆ

15 ಲಕ್ಷ ದೀಪ ಪ್ರಜ್ವಲನೆ: ಅಯೋಧ್ಯೆಯಲ್ಲಿ ಗಿನ್ನೆಸ್‌ ದಾಖಲೆ

ಪ್ರಧಾನಿ ಮೋದಿ, ಸಿಎಂ ಆದಿತ್ಯನಾಥ್‌ ಭಾಗಿ

ಅಯೋಧ್ಯೆ: ದೀಪಾವಳಿ ಅಂಗವಾಗಿ ಅಯೋಧ್ಯೆಯ ಸರಯೂ ನದಿ ತೀರದಲ್ಲಿ 15 ಲಕ್ಷಕ್ಕೂ ಹೆಚ್ಚು ಹಣತೆಗಳನ್ನು ಏಕಕಾಲದಲ್ಲಿ ಬೆಳಗುವ ಮೂಲಕ ಗಿನ್ನೆಸ್‌ ದಾಖಲೆ ಸ್ಥಾಪನೆಯಾಗಿದೆ. ಅವಧ್‌ ವಿಶ್ವವಿದ್ಯಾಲಯದ ಸ್ವಯಂಸೇವಕರು ಭಾನುವಾರ ರಾತ್ರಿ 15 ಲಕ್ಷ ಹಣತೆಗಳನ್ನು ಏಕಕಾಲದಲ್ಲಿ ಬೆಳಗಿಸಿದರು.
ಲೇಸರ್‌ ಶೋ, ಸುಡುಮದ್ದು ಪ್ರದರ್ಶನ ಇತ್ಯಾದಿಗಳಿದ್ದ ಈ ಸಲದ ಅಯೋಧ್ಯೆಯ ದೀಪಾವಳಿ ಅತ್ಯಂತ ಅದ್ದೂರಿಯಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮತ್ತಿತತರರು ಈ ಅದ್ಭುತ ಕ್ಷಣಗಳಿಗೆ ಸಾಕ್ಷಿಯಾದರು.
20 ಸಾವಿರಕ್ಕೂ ಅಧಿಕ ಸ್ವಯಂಸೇವಕರು ಏಕಕಾಲದಲ್ಲಿ 15,76,000 ಹಣತೆಗಳನ್ನು ಬೆಳಗಿಸಿದ್ದಾರೆ. ಗಿನ್ನೆಸ್‌ ಸಂಸ್ಥೆಯ ಪ್ರತಿನಿಧಿಗಳು ನಿನ್ನೆಯೇ ದಾಖಲೆಯ ಪ್ರಮಾಣ ಪತ್ರವನ್ನು ಆದಿತ್ಯನಾಥ್‌ ಅವರಿಗೆ ಹಸ್ತಾಂತರಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!