ಮಲ್ಪೆ ಬೀಚ್‌ನಲ್ಲಿ ಸೂರ್ಯಗ್ರಹಣ ವೀಕ್ಷಣೆಗೆ ವ್ಯವಸ್ಥೆ

ಅ.25ರಂದು ಸಂಜೆ 5.08 ರಿಂದ 5.50 ನಿಮಿಷದವರೆಗೆ ಸೂರ್ಯಗ್ರಹಣ

ಉಡುಪಿ : ಅ.25ರಂದು ಸಂಭವಿಸಲಿರುವ ಸೂರ್ಯಗ್ರಹಣವನ್ನು ವೀಕ್ಷಿಸಲು ಉಡುಪಿಯ ಮಲ್ಪೆಬೀಚ್ ವ್ಯವಸ್ಥೆ ಮಾಡಲಾಗಿದೆ.
ಸೂರ್ಯಗ್ರಹಣ ವೀಕ್ಷಿಸುವುದಕ್ಕಾಗಿ ಮಲ್ಪೆ ಬೀಚ್‌ನಲ್ಲಿ ಅ.25 ರಂದು ಸಂಜೆ 5ರಿಂದ ಸೂರ್ಯಾಸ್ತದವರೆಗೂ ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಅವಕಾಶವಿದೆ ಎಂದು ಪೂರ್ಣಪ್ರಜ್ಞಾ ಹವ್ಯಾಸಿ ಖಗೋಳ ಶಾಸ್ತ್ರಜ್ಞರ ಕ್ಲಬ್‌ನ (ಪಿಎಎಸಿ) ಸಂಯೋಜಕ ಅತುಲ್ ಭಟ್ ಹೇಳಿದ್ದಾರೆ.
ಗ್ರಹಣ ವೀಕ್ಷಿಸುವುದಕ್ಕೆ ಉಡುಪಿ ಸೂಕ್ತ ಪ್ರದೇಶವಾಗಿದ್ದು, 5.08 ರಿಂದ 5.50 ನಿಮಿಷದವರೆಗೂ ಸೂರ್ಯ ಗ್ರಹಣ ಸಂಭವಿಸಲಿದೆ, ಮಲ್ಪೆ ಬೀಚ್‌ನಲ್ಲಿ ಬೀಚ್ ಅಭಿವೃದ್ಧಿ ಸಮಿತಿಯ ವತಿಯಿಂದ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅತುಲ್ ಭಟ್ ತಿಳಿಸಿದ್ದಾರೆ.
ಡಿಸಿ ಕೂರ್ಮ ಎಂ ರಾವ್, ಉಡುಪಿ ಶಾಸಕ ರಘುಪತಿ ಭಟ್, ಬಿಜೆಪಿ ನಾಯಕ ಯಶ್ ಪಾಲ್ ಸುವರ್ಣ, ಮುಖ್ಯ ಅತಿಥಿಗಳಾಗಿರಲಿದ್ದಾರೆ.

Latest Articles

error: Content is protected !!