Saturday, December 10, 2022
spot_img
HomeUncategorizedರೈಲ್ವೆ ಮಾರ್ಗಕ್ಕೆ ಸಮೀಕ್ಷೆ ನಡೆಸುವಂತೆ ಕಥೋಲಿಕ್‌ ಸಭಾ ವತಿಯಿಂದ ಮನವಿ

ರೈಲ್ವೆ ಮಾರ್ಗಕ್ಕೆ ಸಮೀಕ್ಷೆ ನಡೆಸುವಂತೆ ಕಥೋಲಿಕ್‌ ಸಭಾ ವತಿಯಿಂದ ಮನವಿ

ಕಾರ್ಕಳ : ನಂದಿಕೂರು, ಕಾರ್ಕಳ, ಬೆಳ್ತಂಗಡಿ, ಉಜಿರೆ, ಚಾರ್ಮಾಡಿಯಾಗಿ ಹಳೇ ಮೂಡಿಗೆರೆಗೆ ರೈಲ್ವೇ ಮಾರ್ಗ ನಿರ್ಮಾಣ ನಿಟ್ಟಿನಲ್ಲಿ ಸರ್ವೇ ಕಾರ್ಯ ನಡೆಸುವಂತೆ ಸರಕಾರವನ್ನು ಒತ್ತಾಯಿಸುವಂತೆ ಕಥೋಲಿಕ್‌ ಸಭಾ ವತಿಯಿಂದ ಸಚಿವ ಸುನೀಲ್‌ ಕುಮಾರ್‌ ಅವರಿಗೆ ಮನವಿ ಮಾಡಲಾಯಿತು. ಯೋಜನೆ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ರೈಲ್ವೆ ಇಲಾಖೆಯು ಸಮೀಕ್ಷೆ ನಡೆಸಿದಿದೆ. ಸರಕಾರ ಸರ್ವೇ ಕಾರ್ಯಕ್ಕೆ ಚಾಲನೆ ನೀಡುವಂತೆ ನಿಯೋಗವು ಸುನೀಲ್‌ ಅವರಲ್ಲಿ ಮನವಿ ಸಲ್ಲಿಸಿತು. ಕಥೊಲಿಕ್ ಸಭಾ ವಲಯ ಮಾಜಿ ಅಧ್ಯಕ್ಷ ಪ್ರಕಾಶ್ ಡಿ’ಸೋಜ ಅಜೆಕಾರು, ಕಥೊಲಿಕ್ ಸಭಾ ವಲಯ ಸದಸ್ಯ ಹೆನ್ರಿ ಸಾಂತ್ ಮಯೋರ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

error: Content is protected !!