Saturday, December 10, 2022
spot_img
Homeಸ್ಥಳೀಯ ಸುದ್ದಿಮುಂಡ್ಕೂರು _ ಜಾರಿಗೆಕಟ್ಟೆ ಪಾಡಿತಾರ್ ಸೇತುವೆ ಪೂರ್ಣ ಶಿಥಿಲ : ಕುಸಿತದ ಭೀತಿ, ಸಂಪರ್ಕ ಕಡಿತಗೊಂಡರೆ...

ಮುಂಡ್ಕೂರು _ ಜಾರಿಗೆಕಟ್ಟೆ ಪಾಡಿತಾರ್ ಸೇತುವೆ ಪೂರ್ಣ ಶಿಥಿಲ : ಕುಸಿತದ ಭೀತಿ, ಸಂಪರ್ಕ ಕಡಿತಗೊಂಡರೆ ಸಂಕಷ್ಟ

ಕಾರ್ಕಳ: ಮುಂಡ್ಕೂರು ಮತ್ತು ಜಾರಿಗೆ ಕಟ್ಟೆ ನಡುವೆ ಇರುವ ಪಾಡಿತಾರ್ ಸೇತುವೆ ಸಂಪೂರ್ಣ ಶಿಥಿಲವಾಗಿದ್ದು, ಘನ ವಾಹನಗಳು ಸಂಚರಿಸುವಾಗ ಸೇತುವೆ ನಡುಗುತ್ತಿದೆ. ಸ್ಥಳೀಯ ನಿವಾಸಿ ಇಂಜಿನಿಯರ್ ಉಮೇಶ್ ಕಾಮತ್ ಎಂಬವರ ಮನೆ ತನಕ ಸೇತುವೆ ಕಂಪಿಸುವ ಅನುಭವವಾಗುತ್ತದೆ. ಈ ಸೇತುವೆ ಕುಸಿದರೆ ಜಾರಿಗೆಕಟ್ಟೆಗೆ ಸಂಪರ್ಕ ಕಡಿತಗೊಂಡು ಅಕ್ಕಪಕ್ಕದ ಗ್ರಾಮಸ್ಥರಿಗೆ ಬಹಳ ತೊಂದರೆಯಾಗುತ್ತದೆ. ಪಕ್ಕದ ಕಿನ್ನಿಗೋಳಿ _ ಮೂಡಬಿದ್ರೆ ಹೋಗುವ ರಸ್ತೆ ಸಂಪರ್ಕ ಕಡಿತಗೊಳ್ಳುತ್ತದೆ. ಇದರಿಂದ ವಾಹನಗಳು ಸುತ್ತುಬಳಸಿ ಹೋಗಬೇಕಾಗುತ್ತದೆ. ಇದರಿಂದ ಜನಸಾಮಾನ್ಯರೂ ಪರದಾಡುವಂತಾಗುತ್ತದೆ. ಸಂಬಂಧಪಟ್ಟ ಇಲಾಖೆಯವರು ಈ ಸೇತುವೆಯತ್ತ ಗಮನಹರಿಸಿ ಹೊಸ ಸೇತುವೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕೆಂದು ಸಾಣೂರು ನರಸಿಂಹ ಕಾಮತ್ ಆಗ್ರಹಿಸಿದ್ದಾರೆ.

ಸೇತುವೆಯ ತಳಭಾಗದ ಕಾಂಕ್ರೀಟ್‌ ಹಾನಿಯಾಗಿರುವ ದೃಶ್ಯ

LEAVE A REPLY

Please enter your comment!
Please enter your name here

Most Popular

error: Content is protected !!