ಮುಂಡ್ಕೂರು : ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ – ನಾಡದೋಣಿ ವಶಕ್ಕೆ

ಕಾರ್ಕಳ : ಮುಂಡ್ಕೂರು ಗ್ರಾಮದ ಪೊಸ್ರಾಲ್ ಶೆಟ್ಟಿಬೆಟ್ಟು ಪರಿಸರದ ಶಾಂಭವಿ ನದಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮರಳುಗಾರಿಕೆ ಅಡ್ಡೆಗೆ ಭಾನುವಾರ ಕಾರ್ಕಳ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ನಾಡದೋಣಿ ವಶಪಡಿಸಿಕೊಂಡಿರುತ್ತಾರೆ. ಸ್ಥಳೀಯರು ಪೊಲೀಸ್‌ ಠಾಣೆಗೆ ನೀಡಿದ ದೂರಿನ ಮೇರೆಗೆ ಅಪರಾಧ ವಿಭಾಗದ ಎಸ್‌ಐ ಜನಾರ್ದನ್‌ ಅವರ ನೇತೃತ್ವದಲ್ಲಿ ದಾಳಿ ನಡೆದಿದ್ದು, ನಾಡದೋಣಿ ವಶಕ್ಕೆ ಪಡೆದು ಕ್ರಮ ಕೈಗೊಳ್ಳುವಂತೆ ಗಣಿಗಾರಿಕೆ ಅಧಿಕಾರಿಗಳಿಗೆ ವರದಿ ಸಲ್ಲಿಸಿರುತ್ತಾರೆ.

error: Content is protected !!
Scroll to Top