ಮಹಿಳೆ ಕೆನ್ನೆಗೆ ಹೊಡೆದ ಸಚಿವ ಸೋಮಣ್ಣ

ದೂರು ನೀಡಲು ಬಂದ ಮಹಿಳೆ ಮೇಲೆ ಹಲ್ಲೆ ಆರೋಪ

ಗುಂಡ್ಲುಪೇಟೆ: ತಾಲೂಕಿನ ಹಂಗಳ ಎಂಬಲ್ಲಿ ವಸತಿ ಮೂಲಸೌಕರ್ಯ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವಿ.ಸೋಮಣ್ಣ ಮಹಿಳೆಯೊಬ್ಬರ ಕೆನ್ನೆಗೆ ಬಾರಿಸಿರುವ ವೀಡಿಯೊ ವೈರಲ್‌ ಆಗಿದೆ.
ಹಕ್ಕುಪತ್ರ ವಿತರಿಸುವ ಕಾರ್ಯಕ್ರಮದಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಫಲಾನುಭವಿಗಳನ್ನು ಸರಿಯಾಗಿ ಆಯ್ಕೆ ಮಾಡಿಲ್ಲ, ನಿವೇಶನ ಇದ್ದವರಿಗೆ ಮರಳಿ ನಿವೇಶನ ಕೊಡಲಾಗಿದೆ. ಕಾಂಗ್ರೆಸ್‌ ಮುಖಂಡ ನಂಜಪ್ಪ ಎಂಬವರ ಅಣತಿಯಂತೆ ಅಧಿಕಾರಿಗಳು ನಿವೇಶನ ಹಂಚಿಕೆ ಮಾಡಿದ್ದಾರೆ ಎಂದು ಮಹಿಳೆಯರ ಗುಂಪೊಂದು ಪ್ರತಿಭಟಿಸಿ ಮನವಿ ಸಲ್ಲಿಸಲು ಬಂದಿದೆ. ಈ ಸಂದರ್ಭದಲ್ಲಿ ಕೆಂಪಮ್ಮ ಎಂಬ ಮಹಿಳೆ ಏನೋ ಹೇಳಲು ಸಚಿವ ಸೋಮಣ್ಣ ಬಳಿಗೆ ಹೋದಾಗ ಅವರು ಮಹಿಳೆಯ ಕೆನ್ನೆಗೆ ಹೊಡೆದಿದ್ದಾರೆ. ಆಗ ಮಹಿಳೆ ನೆಲಕ್ಕೆ ಬಾಗಿದ್ದಾರೆ.

error: Content is protected !!
Scroll to Top