Thursday, December 1, 2022
spot_img
Homeಸುದ್ದಿಇಂದು ಭಾರತ-ಪಾಕಿಸ್ಥಾನ ಮುಖಾಮುಖಿ

ಇಂದು ಭಾರತ-ಪಾಕಿಸ್ಥಾನ ಮುಖಾಮುಖಿ

ಹೈವೋಲ್ಟೇಜ್‌ ಪಂದ್ಯದಿಂದ ಕ್ರಿಕೆಟ್‌ ಜ್ವರ ಏರಿಕೆ

ಮೆಲ್ಬೋರ್ನ್‌: ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ 2022ರ ಟಿ20 ವಿಶ್ವಕಪ್‌ನಲ್ಲಿ ಇಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ಥಾನ ಮುಖಾಮುಖಿಯಾಗಲಿವೆ. ಬದ್ಧ ವೈರಿಗಳಂತೆ ಆಡುವ ನೆರೆಹೊರೆಯ ಎರಡು ರಾಷ್ಟ್ರಗಳ ಈ ಪಂದ್ಯ ಜಗತ್ತಿನಾದ್ಯಂತ ಕ್ರಿಕೆಟ್‌ ಪ್ರೇಮಿಗಳ ಕುತೂಹಲ ಕೆರಳಿಸಿದೆ.
ಮೆಲ್ಬೋರ್ನ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಭಾರತ ಪಾಕಿಸ್ತಾನವನ್ನು ಎದುರಿಸಲಿದೆ. ಏಷ್ಯಾಕಪ್ ಪಂದ್ಯದಲ್ಲಿ ಪಾಕ್ ವಿರುದ್ಧ ಸೋಲು ಕಂಡಿದ್ದ ಟೀಂ ಇಂಡಿಯಾ, ಇದೀಗ ಸೇಡು ತೀರಿಸಲು ಕಾತುರದಿಂದ ಕಾಯುತ್ತಿದೆ.
ಇಂಡೋ-ಪಾಕ್ ಹೈವೋಲ್ಟೇಜ್ ಪಂದ್ಯ ಮಧ್ಯಾಹ್ನ 1.30ಕ್ಕೆ ಆರಂಭವಾಗಲಿದೆ. ಗೆಲುವಿಗಾಗಿ ಎರಡೂ ತಂಡಗಳು ಬಹಳ ಕಠಿಣವಾಗಿ ಶ್ರಮಿಸುವ ನಿರೀಕ್ಷೆಯಿದೆ.
ಟಿ20 ವಿಶ್ವಕಪ್ ಟೀಮ್ ಇಂಡಿಯಾ ವೇಳಾಪಟ್ಟಿ
ಅಕ್ಟೋಬರ್-23 : ಭಾರತ vs ಪಾಕಿಸ್ತಾನ- ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ (ಸಮಯ: ಮಧ್ಯಾಹ್ನ 1.30 ಕ್ಕೆ ಶುರು)
ಅಕ್ಟೋಬರ್-27: ಭಾರತ vs ನೆದರ್​ಲ್ಯಾಂಡ್ಸ್​- ಸಿಡ್ನಿ ಕ್ರಿಕೆಟ್ ಸ್ಟೇಡಿಯಂ (ಸಮಯ: ಮಧ್ಯಾಹ್ನ 12.30 ಕ್ಕೆ ಶುರು)
ಅಕ್ಟೋಬರ್-30: ಭಾರತ vs ದಕ್ಷಿಣ ಆಫ್ರಿಕಾ- ಪರ್ತ್ ಸ್ಟೇಡಿಯಂ (ಸಮಯ: ಸಂಜೆ 4.30 ಕ್ಕೆ ಶುರು)
ನವೆಂಬರ್-2: ಭಾರತ vs ಬಾಂಗ್ಲಾದೇಶ -ಅಡಿಲೇಡ್ ಓವಲ್ (ಸಮಯ: ಮಧ್ಯಾಹ್ನ 1.30 ಕ್ಕೆ ಶುರು)
ನವೆಂಬರ್-6: ಭಾರತ vs ಜಿಂಬಾಬ್ವೆ – ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ (ಸಮಯ: ಮಧ್ಯಾಹ್ನ 1.30 ಕ್ಕೆ ಶುರು)

LEAVE A REPLY

Please enter your comment!
Please enter your name here

Most Popular

error: Content is protected !!