Saturday, December 10, 2022
spot_img
Homeಸುದ್ದಿದೈವಾರಾಧನೆಗೆ ಅಪಚಾರ: ನಟ ಚೇತನ್‌ ವಿರುದ್ಧ ಮಡಿಕೇರಿಯಲ್ಲೂ ದೂರು ದಾಖಲು

ದೈವಾರಾಧನೆಗೆ ಅಪಚಾರ: ನಟ ಚೇತನ್‌ ವಿರುದ್ಧ ಮಡಿಕೇರಿಯಲ್ಲೂ ದೂರು ದಾಖಲು

ಕಾಂತಾರ ಚಿತ್ರದ ಹಿನ್ನೆಲೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿರುವ ಅನಿವಾಸಿ ನಟ

ಮಡಿಕೇರಿ: ಕಾಂತಾರ ಚಿತ್ರದ ಹಿನ್ನೆಲೆಯಲ್ಲಿ ಕರಾವಳಿಯ ದೈವಾರಾಧನೆ ಹಿಂದು ಧರ್ಮಕ್ಕೆ ಸೇರಿಲ್ಲ ಎಂದು ಹೇಳಿ ವಿವಾದ ಸೃಷ್ಟಿಸಿರುವ ನಟ ಚೇತನ್‌ ವಿರುದ್ಧ ಮಡಿಕೇರಿಯಲ್ಲೂ ದೂರು ದಾಖಲಾಗಿದೆ.
ಚೇತನ್‌ ಸಮಾಜದಲ್ಲಿ ಗೊಂದಲ ಸೃಷ್ಟಿಸಿ ಶಾಂತಿ ಕದಡಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಕೊಡಗು ಯುವಸೇನೆ ಜಿಲ್ಲಾ ಘಟಕ ದೂರು ದಾಖಲಿಸಿದೆ. ಉಡುಪಿಯಲ್ಲೂ ಚೇತನ್‌ ವಿರುದ್ಧ ದೂರು ದಾಖಲಾಗಿದೆ. ಅಲ್ಲದೆ ಪಂಜುರ್ಲಿ ದೈವಕ್ಕೆ ಅವರ ಕುರಿತು ದೂರು ನೀಡಲಾಗಿದೆ.
ಕಾಂತಾರ ಚಿತ್ರದಲ್ಲಿ ಹೇಳಿರುವಂತೆ ದೈವಾರಾಧನೆ ಹಿಂದು ಸಂಸ್ಕೃತಿಯ ಆಚರಣೆಯಲ್ಲ. ಅದು ಮೂಲ ನಿವಾಸಿಗಳ ಅವೈದಿಕ ಆಚರಣೆ ಎಂದು ಚೇತನ್‌ ಹೇಳಿರುವುದಕ್ಕೆ ಭಾರಿ ಪ್ರತಿಭಟನೆ ವ್ಯಕ್ತವಾಗುತ್ತಿದೆ. ಅವರು ಕರಾವಳಿಯ ಪವಿತ್ರವಾದ ದೈವಾರಾಧನೆಗೆ ಅವಮಾನ ಮಾಡಿದ್ದಾರೆ ಎಂದು ಹಿಂದು ಸಂಘಟನೆಗಳು ಆರೋಪಿಸಿವೆ.

LEAVE A REPLY

Please enter your comment!
Please enter your name here

Most Popular

error: Content is protected !!