Saturday, December 10, 2022
spot_img
HomeUncategorizedಭಗವದ್ಗೀತೆಯಲ್ಲೂ ಇದೆ ಜಿಹಾದ್‌ ಬೋಧನೆ : ಕಾಂಗ್ರೆಸ್‌ ಹಿರಿಯ ನಾಯಕನ ವಿವಾದಾತ್ಮಕ ಹೇಳಿಕೆ

ಭಗವದ್ಗೀತೆಯಲ್ಲೂ ಇದೆ ಜಿಹಾದ್‌ ಬೋಧನೆ : ಕಾಂಗ್ರೆಸ್‌ ಹಿರಿಯ ನಾಯಕನ ವಿವಾದಾತ್ಮಕ ಹೇಳಿಕೆ

ಶ್ರೀಕೃಷ್ಣ ಜಿಹಾದ್‌ ಬೋಧಿಸಿದ್ದ ಎಂದ ಕೇಂದ್ರದ ಮಾಜಿ ಗೃಹ ಸಚಿವ ಶಿವರಾಜ್‌ ಪಾಟೀಲ್‌

ಹೊಸದಿಲ್ಲಿ: ಕುರಾನ್‌ ಮಾತ್ರವಲ್ಲ ಭಗವದ್ಗೀತೆಯಲ್ಲೂ ಜಿಹಾದ್‌ ಬೋಧನೆಯಿದೆ ಎನ್ನುವ ಮೂಲಕ ಕೇಂದ್ರದ ಮಾಜಿ ಗೃಹ ಸಚಿವ , ಕಾಂಗ್ರೆಸಿನ ಹಿರಿಯ ನಾಯಕ ಶಿವರಾಜ್‌ ಪಾಟೀಲ್‌ ವಿವಾದದ ಕಿಡಿಯೆಬ್ಬಿಸಿದ್ದಾರೆ.
ದಿಲ್ಲಿಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಶಿವರಾಜ್‌ ಪಾಟೀಲ್‌ ಜಿಹಾದ್‌ ಪರಿಕಲ್ಪನೆ ಭಗವದ್ಗೀತೆಯಲ್ಲೂ ಇದೆ. ಮಹಾಭಾರತ ಯುದ್ಧದ ಸಂದರ್ಭದಲ್ಲಿ ಅರ್ಜುನನಿಗೆ ಶ್ರೀಕೃಷ್ಣ ಬೋಧಿಸಿದ್ದು ಜಿಹಾದ್‌ ಎಂದಿದ್ದಾರೆ.
ಕಾಂಗ್ರೆಸಿನ ಹಿರಿಯ ನಾಯಕಿ ಹಾಗೂ ಕೇಂದ್ರದ ಮಾಜಿ ಸಚಿವೆ ಮೊಹ್ಸಿನಾ ಕಿದ್ವಾಯಿ ಅವರ ಜೀವನಚರಿತ್ರೆ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಟೀಲ್‌ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇಸ್ಲಾಮ್‌ನಲ್ಲಿ ಜಿಹಾದ್‌ ಬಗ್ಗೆ ಬಹಳ ವಿಚಾರಗಳಿವೆ ಎನ್ನುತ್ತಾರೆ. ಸಾಕಷ್ಟು ಮನವರಿಕೆ ಮಾಡಿಕೊಟ್ಟ ಬಳಿಕವೂ ನಮ್ಮ ವಿಚಾರ ಅರ್ಥವಾಗದಿದ್ದರೆ ಅಂಥವರ ವಿರುದ್ಧ ಬಲ ಪ್ರಯೋಗ ಮಾಡಬಹುದು ಎಂಬ ಅಂಶ ಕುರಾನ್‌ ಮತ್ತು ಭಗವದ್ಗೀತೆಯಲ್ಲಿದೆ ಎಂದಿದ್ದಾರೆ.
ಶಿವರಾಜ್‌ ಪಾಟೀಲ್‌ 2004ರಿಂದ 2008ರ ತನಕ ಕೇಂದ್ರ ಗೃಹ ಸಚಿವರಾಗಿದ್ದರು. ಇದಕ್ಕೂ ಮೊದಲು 1991 ರಿಂದ 1996ರ ತನಕ 10ನೇ ಲೋಕಸಭೆಯಲ್ಲಿ ಸಭಾಪತಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ನಾಯಕರಾದ ಶಶಿ ತರೂರು, ದಿಗ್ವಿಜಯ ಸಿಂಗ್‌,ಸುಶೀಲ್‌ಕುಮಾರ್‌ ಶಿಂಧೆ, ನ್ಯಾಶನಲ್‌ ಕಾನ್ಫರೆನ್ಸಿನ ಫಾರೋಕ್‌ ಅಬ್ದುಲ್ಲ ಮತ್ತಿತತರರಿದ್ದರು.
ಬಿಜೆಪಿ ಕಟು ಟೀಕೆ
ಶಿವರಾಜ್‌ ಪಾಟೀಲ್‌ ಹೇಳಿಕೆಯನ್ನು ಬಿಜೆಪಿ ಕಟುವಾಗಿ ಟೀಕಿಸಿದೆ. ರಾಮನನ್ನು ದ್ವೇಷಿಸುತ್ತಿದ್ದ ಕಾಂಗ್ರೆಸಿಗರು ಈಗ ಕೃಷ್ಣನನ್ನೂ ದ್ವೇಷಿಸಲಾರಂಭಿಸಿದ್ದಾರೆ. ಹಿಂದು ದ್ವೇಷ ಕಾಂಗ್ರೆಸಿಗರ ನರನಾಡಿಗಳಲ್ಲಿ ಹರಿಯುತ್ತಿದೆ ಎಂದು ಬಿಜೆಪಿ ವಕ್ತಾರ ಶೆಹಜಾದ್‌ ಜೈಹಿಂದ್‌ ಹೇಳಿದ್ದಾರೆ.
ರಾಹುಲ್‌ ಗಾಂಧಿ ಕೂಡ ಹಿಂದು ದ್ವೇಷಿ ಹೇಳಿಕೆಗಳನ್ನು ನೀಡಿದ್ದಾರೆ. ಲಷ್ಕರ್‌ ಎ ತಯ್ಯಬ ಉಗ್ರರ ಸಂಘಟನೆ ಹಿಂದು ಸಂಘಟನೆಗಳಿಗಿಂತ ಕಡಿಮೆ ಅಪಾಯಕಾರಿ ಎಂದಿದ್ದರು. ಗುಜರಾತ್‌ ಚುನಾವಣೆಯಲ್ಲಿ ಮತಗಳನ್ನು ಧ್ರುವೀಕರಿಸುವ ಸಲುವಾಗಿ ಕಾಂಗ್ರೆಸಿಗರು ಈಗ ಉದ್ದೇಪೂರ್ವಕವಾಗಿ ಹಿಂದು ದ್ವೇಷ ಹರಡಲು ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!