ಚಿತ್ರಗಳಲ್ಲಿ ಅವಕಾಶ ಕೊಡುವುದಾಗಿ ನಂಬಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪ
ಮುಂಬಯಿ: ಬಾಲಿವುಡ್‌ನಲ್ಲಿ ಮತ್ತೆ ಮೀ ಟೂ ಆರೋಪ ಜೋರಾಗಿದೆ. ನಿರ್ದೇಶಕ ಸಾಜಿದ್ ಖಾನ್ ವಿರುದ್ಧ ನಟಿ ಶೆರ್ಲಿನ್ ಚೋಪ್ರಾ ಅವರು ಲೈಂಗಿಕ ಕಿರುಕುಳ ನೀಡಿದ ಕುರಿತು ಪೊಲೀಸ್ ದೂರು ದಾಖಲಿಸಿದ್ದಾರೆ.
ಸಾಜಿದ್ ಖಾನ್ ಬಿಗ್‌ಬಾಸ್ ರಿಯಾಲಿಟಿ ಶೋದಲ್ಲಿ ಸ್ಪರ್ಧಿಯಾದಂದಿನಿಂದಲೂ ಅವರ ವಿರುದ್ಧ ಒಂದಲ್ಲ ಒಂದು ಆರೋಪ ಕೇಳಿಬರುತ್ತಿದೆ. ಹಲವು ನಟಿಯರು ಸಾಜಿದ್ ಕಿರುಕುಳ ನೀಡಲು ಪ್ರಯತ್ನಿಸಿದ ಕುರಿತು ಆರೋಪಿಸಿದ್ದಾರೆ. ಸಾಜಿದ್ ವಿರುದ್ಧ ನೇರ ಆರೋಪ ಮಾಡಿರುವ ಶೆರ್ಲಿನ್ ಚೋಪ್ರಾ ನಿರ್ದೇಶಕನನ್ನು ಬಿಗ್‌ಬಾಸ್ ಮನೆಯಿಂದ ಹೊರ ಹಾಕಬೇಕೆಂದು ಒತ್ತಾಯಿಸಿದ್ದಾರೆ.
ಈ ಮೊದಲು ಸಾಜಿದ್ ವಿರುದ್ಧ ದೂರು ನೀಡಲು ನನಗೆ ಧೈರ್ಯ ಇರಲಿಲ್ಲ. ಅವರು ನನ್ನ ಜತೆ ಬಹಳ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಇಂಥ ನಿರ್ದೇಶಕರಿಂದಲೇ ಬಾಲಿವುಡ್‌ಗೆ ಕಳಂಕ ಬಂದಿದೆ. ಅವರನ್ನು ಜೈಲಿಗೆ ಹಾಕಬೇಕೆಂದು ಶೆರ್ಲಿನ್ ಕಿಡಿಕಾರಿದ್ದಾರೆ.
2005ರಲ್ಲಿ ನಡೆದ ಘಟನೆಯೊಂದನ್ನು ಉಲ್ಲೇಖಿಸಿರುವ ಶೆರ್ಲಿನ್ ಮನೆಗೆ ಅವಕಾಶ ಕೊಡುವುದಾಗಿ ನಂಬಿಸಿ ಕರೆಸಿಕೊಂಡು ಕಿರುಕುಳ ನೀಡಿದ್ದಾರೆ. 2018ರಲ್ಲಿ ಮೀ ಟೂ ಅಭಿಯಾನ ನಡೆದ ಬಳಿಕ ನನಗೆ ಆ ಕುರಿತು ಮಾತನಾಡಲು ಧೈರ್ಯ ಬಂದಿದೆ ಎಂದಿದ್ದಾರೆ.