ಗೂಗಲ್‌ಗೆ 1,337 ಕೋಟಿ ರೂ. ದಂಡ

ನೀತಿಬಾಹಿರ ವ್ಯಾಪಾರ ತಂತ್ರ ಅನುಸರಿಸಿದ್ದಕ್ಕೆ ಈ ಜುಲ್ಮಾನೆ

ಹೊಸದಿಲ್ಲಿ: ಜಗತ್ತಿನ ಜನಪ್ರಿಯ ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಕಂಪನಿಗೆ ಭಾರತ ಭಾರಿ ಮೊತ್ತದೆ ದಂಡ ವಿಧಿಸಿದೆ. ಆಂಡ್ರಾಯ್ಡ್‌ ಮೊಬೈಲ್ ವ್ಯವಸ್ಥೆಯಲ್ಲಿ ಮಾರುಕಟ್ಟೆಗಳಲ್ಲಿ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡ ಕಾರಣಕ್ಕಾಗಿ ಗೂಗಲ್‌ ಕಂಪನಿಗೆ ಭಾರತೀಯ ಸ್ಪರ್ಧಾ ಆಯೋಗ 1,337 ಕೋಟಿ ರೂ. ದಂಡ ವಿಧಿಸಿದೆ.
ನೀತಿಬಾಹಿರ ವ್ಯಾಪಾರ ಅಭ್ಯಾಸಗಳನ್ನು ನಿಲ್ಲಿಸಲು ಹಾಗೂ ನಡವಳಿಕೆಗಳನ್ನು ಬದಲಾಯಿಸುವಂತೆ ಸಿಸಿಐ ಗೂಗಲ್‌ಗೆ ನಿರ್ದೇಶನ ನೀಡಿದೆ.
ಆಂಡ್ರಾಯ್ಡ್‌ ಫೋನ್‌ ಖರೀದಿಸಿದರೆ ಅದರಲ್ಲಿ ಒಂದಿಷ್ಟು ಅಪ್ಲಿಕೇಷನ್‌ಗಳು ಮೊದಲೇ ಇನ್‌ಸ್ಟಾಲ್‌ ಆಗಿರುತ್ತವೆ. ಅವುಗಳನ್ನು ಡಿಲೀಟ್‌ ಮಾಡುವ, ಅನ್‌ಇನ್‌ಸ್ಟಾಲ್‌ ಮಾಡುವ ಆಯ್ಕೆಗಳೂ ಇರುವುದಿಲ್ಲ. ಇಂತಹ ಹಲವು ವಿಷಯಗಳಿಗೆ ಗೂಗಲ್‌ ಕಂಪನಿಗೆ ದಂಡ ವಿಧಿಸಲಾಗಿದೆ.
ಮೊಬೈಲ್ ಅಪ್ಲಿಕೇಶನ್ ವಿತರಣಾ ಒಪ್ಪಂದದ ಅಡಿಯಲ್ಲಿ ಸಂಪೂರ್ಣ ಗೂಗಲ್ ಮೊಬೈಲ್ ಸೂಟ್ ಇನ್‌ಸ್ಟಾಲ್‌ ಮಾಡಲಾಗುತ್ತಿದೆ. ಇವುಗಳನ್ನು ಅನ್‌ಇನ್‌ಸ್ಟಾಲ್‌ ಮಾಡಲು ಯಾವುದೇ ಆಯ್ಕೆಗಳು ಇರುವುದಿಲ್ಲ. ಮೊಬೈಲ್‌ ತಯಾರಿಕಾ ಕಂಪನಿಗಳ ಮೇಲೆ ಇದಕ್ಕಾಗಿ ನಿರ್ದಿಷ್ಟ ಮೊತ್ತ ಹೇರುವುದು ಕೂಡ ನೀತಿರಹಿತ ವ್ಯಾಪಾರವಾಗಿದೆ ಮತ್ತು ಇದು ಸ್ಪರ್ಧಾ ಕಾನೂನನ್ನು ಉಲ್ಲಂಘಿಸುತ್ತದೆ ಎಂದು ಸಿಸಿಐ ತಿಳಿಸಿದೆ.
ಗೂಗಲ್‌ ಕ್ರೋಮ್‌ ಬ್ರೌಸರ್‌ ಅನ್ನು ಅನಿವಾರ್ಯವಾಗಿ ಬಹುತೇಕರು ಬಳಸುತ್ತಾರೆ. ಬೇರೆ ಅಪರೇಟಿಂಗ್‌ ಸಿಸ್ಟಮ್‌ ಇನ್‌ಸ್ಟಾಲ್‌ ಮಾಡುವುದು ಕಠಿಣವಾಗಿ ಪರಿಣಮಿಸುತ್ತದೆ. ಬೇರೆ ಬ್ರೌಸರ್‌ಗಳ ಬಳಕೆಗೆ ಸರಿಯಾದ ವ್ಯವಸ್ಥೆಯೂ ಇರುವುದಿಲ್ಲ. ಈ ಮೂಲಕ ಬೇರೆ ಬ್ರೌಸರ್‌ಗಳು ಮಾರುಕಟ್ಟೆಗೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ. ಇದು ಕೂಡ ಸ್ಪರ್ಧಾ ಕಾನೂನಿನ ಉಲ್ಲಂಘನೆ ಎಂದು ಸಿಸಿಐ ತಿಳಿಸಿದೆ.
ಗೂಗಲ್‌ನ ಈ ವರ್ತನೆಯು ಸ್ಪರ್ಧಾತ್ಮಕ ಕಾಯಿದೆಯ ವಿಭಾಗ 4 ಪ್ರಬಲ ಸ್ಥಾನದ ದುರುಪಯೋಗಕ್ಕೆ ಸಂಬಂಧಿಸಿದೆ. ಇದು ಕಾಯಿದೆಯ ಸೆಕ್ಷನ್ 4(2)(d)ಗೆ ವಿರುದ್ಧವಾಗಿವೆ ಎಂದು ಸಿಸಿಐ ತಿಳಿಸಿದೆ.
ಗೂಗಲ್ ಕ್ರೋಮ್ ಅಪ್ಲಿಕೇಶನ್ ಮೂಲಕ ಒಎಸ್ ಅಲ್ಲದ ನಿರ್ದಿಷ್ಟ ವೆಬ್ ಬ್ರೌಸರ್ ಮಾರುಕಟ್ಟೆಗೆ ಪ್ರವೇಶಿಸಲು ಗೂಗಲ್‌ ಅವಕಾಶ ನೀಡುತ್ತಿಲ್ಲ. ಈ ಮೂಲಕ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಮತ್ತು ಅಪ್ಲಿಕೇಷನ್‌ ಸ್ಟೋರ್‌ ಮಾರುಕಟ್ಟೆಯಲ್ಲಿ ಗೂಗಲ್‌ ಕಂಪನಿಯು ಪ್ರಮುಖ ಸ್ಥಾನ ಪಡೆದಿದೆ ಎಂದು ಸಿಜೆಐ ತಿಳಿಸಿದೆ.
ಆನ್‌ಲೈನ್‌ ವಿಡಿಯೋ ಹೋಸ್ಟಿಂಗ್‌ ವೇದಿಕೆಗಳಿಗೂ ಗೂಗಲ್‌ ಕ್ರೋಮ್‌ ಪ್ರಮುಖ ತಡೆಯಾಗಿದೆ. ಯೂಟ್ಯೂಬ್‌ ಹೊರತುಪಡಿಸಿ ಬೇರೆ ಯಾವುದೇ ವೀಡಿಯೊ ಹೋಸ್ಟಿಂಗ್‌ ಪ್ಲಾಟ್‌ಫಾರ್ಮ್‌ಗಳು ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ.‌ ಇದು ಕೂಡ ಕಾಯಿದೆಯ ಸೆಕ್ಷನ್ 4(2)(e) ನ ನಿಬಂಧನೆಗಳನ್ನು ಉಲ್ಲಂಘಿಸಿದೆ ಎಂದು ಸಿಸಿಐ ತಿಳಿಸಿದೆ.

Latest Articles

error: Content is protected !!