Thursday, December 1, 2022
spot_img
HomeUncategorizedದೈವನರ್ತಕರಿಗೆ ಮಾಶಾಸನ ಸರಕಾರದ ಮಹತ್ವದ ಹೆಜ್ಜೆ - ಮಹಾವೀರ ಹೆಗ್ಡೆ

ದೈವನರ್ತಕರಿಗೆ ಮಾಶಾಸನ ಸರಕಾರದ ಮಹತ್ವದ ಹೆಜ್ಜೆ – ಮಹಾವೀರ ಹೆಗ್ಡೆ

ಕಾರ್ಕಳ : 60 ವರ್ಷ ತುಂಬಿದ ಕಲಾವಿದರಿಗೆ ಪ್ರತಿ ತಿಂಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 2 ಸಾವಿರ ರೂ. ಮಾಶಾಸನ ಕೊಡುವ ವ್ಯವಸ್ಥೆಯಂತೆ ದೈವರಾದನೆಯಲ್ಲಿ ತೊಡಗಿಸಿಕೊಂಡವರಿಗೂ ಮಾಶಾಸನ ನೀಡಲು ಸರಕಾರ ಮುಂದಾಗಿದ್ದು ಸರಕಾರದ ಮಹತ್ವದ ಹೆಜ್ಜೆಯಾಗಿದೆ. ಸಚಿವ ಸುನೀಲ್ ಕುಮಾರ್ ಅವರ ಮುತುವರ್ಜಿಯಲ್ಲಿ ಸರಕಾರ ಈ ತೀರ್ಮಾನ ಕೈಗೊಂಡಿರುವುದು ರಾಜ್ಯ ಬಿಜೆಪಿ ಸರಕಾರಕ್ಕೆ ಹಾಗೂ ಕಾರ್ಕಳ ಜನತೆಗೆ ಹೆಮ್ಮೆಯ ವಿಚಾರವೆಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಹೆಚ್ಚಳ, ಅಮೃತ ಯೋಜನೆಯ ಮುಖಾಂತರ 75 ಯೂನಿಟ್ ಉಚಿತ ವಿದ್ಯುತ್, ದೈವ ನರ್ತಕರಿಗೆ ಮಾಶಾಸನ ಹೀಗೆ ದೀನದಲಿತರ ಬಗ್ಗೆ ಹಲವಾರು ಮಹತ್ವದ ಯೋಜನೆಗಳು ಜಾರಿಗೊಳಿಸಿದ ಸಚಿವ ವಿ. ಸುನಿಲ್ ಕುಮಾರ್ ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ತುಳುನಾಡಿನ ಜನತೆಯ ಹಾಗೂ ಕಾರ್ಕಳ ಬಿಜೆಪಿ ಪಕ್ಷದ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಮಹಾವೀರ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here

Most Popular

error: Content is protected !!