Saturday, December 10, 2022
spot_img
Homeಸುದ್ದಿಇಂದು ಮುಂಬಯಿಯಲ್ಲಿ ಕೋಟಿ ಕಂಠ ಗಾಯನ ಪೂರ್ವಭಾವಿ ಸಭೆ

ಇಂದು ಮುಂಬಯಿಯಲ್ಲಿ ಕೋಟಿ ಕಂಠ ಗಾಯನ ಪೂರ್ವಭಾವಿ ಸಭೆ

ಕನ್ನಡ ರಾಜ್ಯೋತ್ಸವ ನಿಮಿತ್ತ ನಡೆಯಲಿರುವ ಗಾಯನದಲ್ಲಿ ಮುಂಬಯಿ ಕನ್ನಡಿಗರ ಭಾಗೀದಾರಿಕೆ

ಮುಂಬಯಿ: ಈ ಸಲ ಕನ್ನಡ ರಾಜ್ಯೋತ್ಸವವನ್ನು ಭಿನ್ನವಾಗಿ ಆಚರಿಸಲು ಇಂಧನ , ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್‌ ಕುಮಾರ್‌ ಅವರು ತೀರ್ಮಾನಿಸಿದ್ದು, ಈ ನಿಮಿತ್ತ ಅ.28 ರಂದು ಬೆಳಿಗ್ಗೆ ಗಂಟೆ 11ಕ್ಕೆ ಸರಿಯಾಗಿ ಜಗತ್ತಿನಾದ್ಯಂತ ಇರುವ ಕನ್ನಡಿಗರ ರಿಂದ “ನನ್ನ ನಾಡು ನನ್ನ ಹಾಡು” ಶೀರ್ಷಿಕೆಯಡಿಯಲ್ಲಿ ಐತಿಹಾಸಿಕ ಕಾರ್ಯಕ್ರಮ ನಡೆಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯೋಜನೆ ಹಾಕಿಕೊಂಡಿದೆ.
ಈ ಕೋಟಿ ಕಂಠ ಗಾಯನ ಅಭಿಯಾನದಲ್ಲಿ ಮುಂಬಯಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವ ಸಲುವಾಗಿ ಪೂರ್ವಭಾವಿ ಸಭೆ ಅ.20 ಸಂಜೆ 2:30ಕ್ಕೆ ಹೋಟೆಲ್ ಮಹಾರಾಜ , ದಹಿಸರ್ ಚೆಕ್‌ನಾಕ ಇಲ್ಲಿ ಕರೆಯಲಾಗಿದೆ. ಈ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತುಳು – ಕನ್ನಡಿಗರು ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕಾಗಿ ಮಹೇಶ್ ಶೆಟ್ಟಿ ತೆಳ್ಳಾರು ಮತ್ತು ಗಿರೀಶ್ ಶೆಟ್ಟಿ ತೆಳ್ಳಾರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!