ಕಾರ್ಕಳ : 60 ವರ್ಷ ಮೇಲ್ಪಟ್ಟ ದೈವ ನರ್ತಕರಿಗೆ ಪ್ರತಿ ತಿಂಗಳು ರೂ. 2ಸಾವಿರ ಮಾಸಾಶನ ನೀಡಲು ರಾಜ್ಯ ಸರಕಾರ ಜಾರಿಗೊಳಿಸಿರುವ ಹಿನ್ನಲೆಯಲ್ಲಿ ಮತ್ತು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ವಿ. ಸುನೀಲ್ ಕುಮಾರ್ ಅವರ ಮುತುವರ್ಜಿಯಲ್ಲಿ ಸರಕಾರ ಈ ಕ್ರಮಕೈಗೊಂಡಿರುವುದು ಶ್ಲಾಘನೀಯ ಎಂದು ಕಾರ್ಕಳ ಎಸ್ಸಿ ಮೋರ್ಚಾದ ಉಸ್ತುವಾರಿ ಶ್ರೀನಿವಾಸ್ ಕಾರ್ಲ ತಿಳಿಸಿದ್ದಾರೆ. ಕರಾವಳಿ ನಾಡ ಸಂಸ್ಕೃತಿಯ ಪ್ರತಿಬಿಂಬ ಎಂಬಂತೆ ನಮ್ಮ ಆಚಾರ ಮತ್ತು ಧಾರ್ಮಿಕ ಹಿರಿಮೆಯನ್ನು ಸಾರುವ ದೈವ ನರ್ತಕರಿಗೆ ಈ ನಿಟ್ಟಿನಲ್ಲಿ ಭರವಸೆಯನ್ನು ಮೂಡಿಸಿದೆ. ಈಗಾಗಲೇ ಹಲವಾರು ಯೋಜನೆಗಳನ್ನು ಬೊಮ್ಮಾಯಿ ಸರಕಾರವು ಘೋಷಿಸಿದ್ದು, ದೈವ ನರ್ತಕರಿಗೆ ಮಾಸಾಶನ ಜಾರಿಗೊಳಿಸಿರುವುದು ಸಂತೋಷದಾಯಕ ವಿಚಾರ ಎಂದರು. ತನ್ಮೂಲಕ ಸಚಿವ ಸುನೀಲ್ ಕುಮಾರ್ ಮತ್ತು ಸಿಎಂ ಬೊಮ್ಮಾಯಿಯವರಿಗೆ ಕಾರ್ಕಳ ಎಸ್ಸಿ ಮೋರ್ಚಾದಿಂದ ಹಾಗೂ ತುಳುನಾಡಿನ ಸಮಸ್ತರ ಪರವಾಗಿ ಅಭಿನಂದನೆಯನ್ನು ಸಲ್ಲಿಸಿದರು.
ಕಾರ್ಕಳ : ದೈವ ನರ್ತಕರಿಗೆ ಮಾಸಾಶನ : ತುಳುನಾಡಿನ ಹೆಮ್ಮೆಯ ಕಲೆಗೆ ಸಂದ ಗೌರವ – ಶ್ರೀನಿವಾಸ್ ಕಾರ್ಲ
