ಹೆಬ್ರಿ : ಕಡ್ತಲ ಗ್ರಾ.ಪಂ. ವ್ಯಾಪ್ತಿಯ ಹೊನ್ನೆಜಡ್ಡು ಕೆರೆಗೆ 5000 ಮೀನಿನ ಮರಿಗಳನ್ನು ಗುರುವಾರ ಬಿಡಲಾಯಿತು. 3 ಎಕ್ರೆ ವಿಸ್ತೀರ್ಣವಿರುವ ಹೊನ್ನೆಜಡ್ಡು ಕೆರೆಗೆ 2,500 ಕಟ್ಲಾ ಮತ್ತು 2500 ಸಾಮಾನ್ಯ ಗೆಂಡೆ ಮೀನು ಮರಿಗಳನ್ನು ತುಂಬಲಾಯಿತು. ಕಡ್ತಲ ಗ್ರಾ.ಪಂ. ಅಧ್ಯಕ್ಷೆ ಮಾಲತಿ ದಿನೇಶ್ ಕುಲಾಲ್, ಉಪಾಧ್ಯಕ್ಷ ಸತೀಶ್ ಪೂಜಾರಿ, ಉಡುಪಿ ಜಿಲ್ಲಾ ಮೀನುಗಾರಿಕೆ ಉಪನಿರ್ದೇಶಕ ಶಿವಕುಮಾರ್ ಜಿ. ಎಂ., ಸಹಾಯಕ ನಿರ್ದೇಶಕ ಚಂದನ್ ಸಿ. ಮತ್ತು ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಸುದರ್ಶನ್ ಈ ವೇಳೆ ಉಪಸ್ಥಿತರಿದ್ದರು.
ಹೆಬ್ರಿ : ಹೊನ್ನೆಜಡ್ಡು ಕೆರೆಯಲ್ಲಿ ಮೀನು ಸಾಕಣೆ
