ಮನೆಯಲ್ಲಿ ನೇಣುಹಾಕಿಕೊಂಡ ಖಯಾತ ಕಿರುತೆರೆ ಅಭಿನೇತ್ರಿ
ಇಂದೋರ್: ಹಿಂದಿ ಕಿರುತೆರೆ ನಟಿ ವೈಶಾಲಿ ಟಕ್ಕರ್ ಅವರು ಭಾನುವಾರ ಶವವಾಗಿ ಪತ್ತೆಯಾಗಿದ್ದಾರೆ. ಸಸುರಾಲ್ ಸಿಮರ್ ಕಾ ಮತ್ತು ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ಪಾತ್ರಗಳಿಂದ ಹೆಸರುವಾಸಿಯಾಗಿದ್ದ ವೈಶಾಲಿ ಟಕ್ಕರ್ ಅವರು ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ತಮ್ಮ ಮನೆಯಲ್ಲಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 26 ವರ್ಷದ ನಟಿಯ ಅಕಾಲಿಕ ಸಾವು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಪೊಲೀಸರು ಅವರು ಡೆತ್‌ನೋಟ್ ವಶಪಡಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ನಟಿ ಒತ್ತಡಕ್ಕೊಳಗಾಗಿದ್ದರು ಮತ್ತು ಪಕ್ಕದ ಮನೆಯ ಉದ್ಯಮಿಯೊಬ್ಬನಿಂದ ಕಿರುಕೊಳಗಾಗಿದ್ದರು. ಮಾಜಿ ಗೆಳೆಯನಿಂದ ಕಿರುಕುಳಕ್ಕೊಳಗಾಗಿದ್ದರು.ರಾಹುಲ್ ನವ್ಲಾನಿ ಎಂಬ ಈ ಉದ್ಯಮಿ ಕೆಲ ವರ್ಷದ ಹಿಂದೆ ವೈಶಾಲಿಯ ಗೆಳೆಯನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ವೈಶಾಲಿ ಟಕ್ಕರ್ ಅವರು 2015 ರಲ್ಲಿ ‘ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ’ ಸೀರಿಯಲ್ ಮೂಲಕ ನಟನೆಗೆ ಪದಾರ್ಪಣೆ ಮಾಡಿದ್ದರು. ಇತ್ತೀಚೆಗೆ ಬಿಗ್‌ಬಾಸ್ ಖ್ಯಾತಿಯ ನಿಶಾಂತ್ ಮಲ್ಕಾನಿ ಅವರೊಂದಿಗೆ ‘ರಕ್ಷಾಬಂಧನ್’ನಲ್ಲಿ ಕಾಣಿಸಿಕೊಂಡಿದ್ದರು.
ಮೂಲತಃ ಉಜ್ಜಯಿನಿಯ ಮಹಿದ್‌ಪುರದವರಾದ ಇಂದೋರ್‌ನ ತೇಜಾಜಿ ನಗರ ಪೊಲೀಸ್ ಠಾಣೆಯ ಸಾಯಿಬಾಗ್ ಕಾಲೋನಿಯಲ್ಲಿ ಕಳೆದ ವರ್ಷದಿಂದ ಕಿರಿಯ ಸಹೋದರ ಮತ್ತು ತಂದೆಯೊಂದಿಗೆ ನೆಲೆಸಿದ್ದರು.
ಬೆಳಗ್ಗೆ ವೈಶಾಲಿ ಟಕ್ಕರ್ ತಮ್ಮ ಕೊಠಡಿಯಿಂದ ಹೊರಗೆ ಬಾರದೆ ಇದ್ದಾಗ ತಂದೆ ಒಳಗೆ ಹೋಗಿ ನೋಡಿದಾಗ ನಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.