ಕಾರ್ಕಳ: ಮಾಳ ಗ್ರಾಮದ ಕೂಡಬೆಟ್ಟು ಕೆರ್ವಾಶೆಯಲ್ಲಿ ಅ.15ರಂದು ಚಿದಂಬರ ಚಿಪ್ಲೂಣ್ಕರ್ ಎಂಬವರ ಮೊಪೆಡ್ಗೆ ಲಾರಿ ಡಿಕ್ಕಿಹೊಡೆದು ಚಿದಂಬರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಂಜೆ 6.45ರ ಹೊತ್ತಿಗೆ ಚಿದಂಬರ ಅವರು ಮೊಪೆಡ್ನಲ್ಲಿ ಬಜಗೋಳಿ ಕಡೆಯಿಂದ ಕೆರ್ವಾಶೆಗೆ ಹೋಗುತ್ತಿರುವಾಗ ಹಿಂದಿನಿಂದ ಅತಿವೇಗದಿಂದ ಬಂದ ಲಾರಿ ಓವರ್ಟೇಕ್ ಮಾಡುವ ಭರದಲ್ಲಿ ಮೊಪೆಡ್ಗೆ ಡಿಕ್ಕಿ ಹೊಡೆದು ನಿಲ್ಲಿಸದೆ ಪಲಾಯನ ಮಾಡಿದೆ. ರಸ್ತೆಗೆ ಬಿದ್ದ ಚಿದಂಬರ ಅವರ ತಲೆ, ಕೆನ್ನೆಗೆ ಗಾಯವಾಗಿದೆ ಹಾಗೂ ಮೊಪೆಡ್ ಜಖಂಗೊಂಡಿದೆ. ಈ ಕುರಿತು ಅವರ ಸಂಬಂಧಿಕ ಶ್ರೀಪತಿ ಭಟ್ ಎಂಬವರು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.