ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಶಿಲ್ಪಿ ರಾಮಚಂದ್ರ ಆಚಾರ್ಯ ಪುನರಾಯ್ಕೆ

ಕಾರ್ಕಳ : ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಶಿಲ್ಪಿ ರಾಮಚಂದ್ರ ಆಚಾರ್ಯ ಅತ್ತೂರು, ಜೊತೆ ಮೊಕ್ತೇಸರರಾಗಿ ಪಿ. ರವಿ ಆಚಾರ್ಯ, ನಿಟ್ಟೆ ಸುರೇಶ್‌ ಆಚಾರ್ಯ ಅವರು ಮರು ಆಯ್ಕೆಗೊಂಡಿರುತ್ತಾರೆ. ಇತ್ತೀಚೆಗೆ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಭವಾನಿ ಬಿಲ್ಡರ್ಸ್‌ ಮಾಲಕ ಭವಾನಿ ನಾರಾಯಣ ಆಚಾರ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಅದೇ ದಿನ ಮಧ್ಯಾಹ್ನ ದೇವಸ್ಥಾನದ ಅಂಗ ಸಂಸ್ಥೆ ಭಜನಾ ಸೇವಾ ಸಮಿತಿ, ಶ್ರೀಕಾಳಿಕಾಂಬಾ ವಿಶ್ವಕರ್ಮ ಅಸೋಸಿಯೇಶನ್‌ ಮತ್ತು ಶ್ರೀ ಕಾಳಿಕಾಂಬಾ ವಿಶ್ವಕರ್ಮ ಫೈನಾನ್ಸ್‌ ಕಾರ್ಪೋರೇಶನ್‌ನ ಮಹಾಸಭೆಯು ಜರುಗಿತು. ಭಜನಾ ಸೇವಾ ಸಮಿತಿ ಅಧ್ಯಕ್ಷರಾಗಿ ಅಂಡಾರು ಅಶೋಕ್‌ ಆಚಾರ್ಯ ಹಾಗೂ ಕಾರ್ಯದರ್ಶಿಯಾಗಿ ದಿನೇಶ್‌ ಆಚಾರ್ಯ ಪುನರಾಯ್ಕೆಗೊಂಡಿದ್ದು, ಉಪಾಧ್ಯಕ್ಷರಾಗಿ ನಿಟ್ಟೆ ದಿವಾಕರ ಆಚಾರ್ಯ ಆಯ್ಕೆಯಾಗಿದ್ದಾರೆ. ಶ್ರೀ ಕಾಳಿಕಾಂಬಾ ವಿಶ್ವಕರ್ಮ ಅಸೋಸಿಯೇಶನ್‌ನ ಅಧ್ಯಕ್ಷರಾಗಿ ಕೆ, ಸುಧಾಕರ ಆಚಾರ್ಯ, ಉಪಾಧ್ಯಕ್ಷರಾಗಿ ಶಿಲ್ಪಿ ಕೆ. ಪದ್ಮನಾಭ ಆಚಾರ್ಯ ಮತ್ತು ಕಾರ್ಯದರ್ಶಿಯಾಗಿ ಕೆ. ಸುರೇಶ್‌ ಆಚಾರ್ಯ ಹಾಗೂ ಶ್ರೀ ಕಾಳಿಕಾಂಬಾ ವಿಶ್ವಕರ್ಮ ಫೈನಾನ್ಸ್‌ ಕಾರ್ಪೋರೇಶನ್‌ನ ಗೌರವಾಧ್ಯಕ್ಷರಾಗಿ ಕೆ. ದಿನೇಶ್‌ ಆಚಾರ್ಯ, ಗೌರವ ಕಾರ್ಯದರ್ಶಿಯಾಗಿ ಶಿಲ್ಪಿ ರಾಮಚಂದ್ರ ಆಚಾರ್ಯ, ಮೆನೇಜಿಂಗ್‌ ಡೈರೆಕ್ಟರ್‌ ಕೆ. ಸುಧಾಕರ ಆಚಾರ್ಯ ಅವರನ್ನು ಆಯ್ಕೆ ಮಾಡಲಾಗಿದೆ.













































error: Content is protected !!
Scroll to Top