Saturday, December 10, 2022
spot_img
Homeಸುದ್ದಿಇಲ್ಲಿ ನಾಯಿಗಳಿಗೂ ಮಾಸ್ಕ್‌ ಕಡ್ಡಾಯ!

ಇಲ್ಲಿ ನಾಯಿಗಳಿಗೂ ಮಾಸ್ಕ್‌ ಕಡ್ಡಾಯ!

ಆಕ್ರಮಣಕಾರಿ ಸ್ವಭಾವದ ನಾಯಿಗಳನ್ನು ಸಾಕುವುದು ಅಪರಾಧ

ಲಖನೌ: ಕೊರೊನಾ ಬಂದ ನಂತರ ಮನುಷ್ಯರು ಮಾಸ್ಕ್‌ ಹಾಕಿಕೊಳ್ಳುವುದು ಕಡ್ಡಯಾ ಮಾಡಲಾಗಿತ್ತು. ಈಗಲೂ ಹಲವೆಡೆ ಮಾಸ್ಕ್‌ ಕಡ್ಡಾಯ ನಿಯಮ ಜಾರಿಯಲ್ಲಿದೆ. ಆದರೆ ಉತ್ತರ ಪ್ರದೇಶದ ಗಾಜಿಯಾಬಾದ್​ ಮುನಿಸಿಪಲ್ ಕಾರ್ಪೊರೇಷನ್​ನಲ್ಲಿ ನಾಯಿಗಳಿಗೆ ಕೂಡ ಮಾಸ್ಕ್‌ ಕಡ್ಡಾಯಮಾಡಲಾಗಿದೆ. ಹಾಗೆಂದು ನಾಯೊಗಲೀಗೆ ಕೊರೊನಾ ಅಥವಾ ಬೇರೆ ಯಾವುದೇ ಸಾಂಕ್ರಾಮಿಕ ರೋಗ ಅಂಟಿಕೊಂಡಿದೆ ಎಂದು ಭಾವಿಸಬೇಡಿ. ಇಲ್ಲಿ ನಾಯಿಗಳೀಗೆ ಮಾಸ್ಕ್‌ ಕಡ್ಡಾಯ ಮಾಡಿರುವುದು ಅವುಗಳು ಮನುಷ್ಯರಿಗೆ ಕಚ್ಚಬಾರದೆಂದು.
ನಾಯಿಗಳು ಮನುಷ್ಯರ ಮೇಲೆ ದಾಳಿ ಮಾಡುವ, ಕಂಡಕಂಡವರಿಗೆ ಕಚ್ಚುವ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ನಾಯಿಗಳನ್ನು ಸಾಕುವುದಕ್ಕೆ ಸಂಬಂಧಿಸಿದಂತೆ ಹೊಸದಾಗಿ ನಿಯಮಾವಳಿಗಳನ್ನು ರೂಪಿಸಿದೆ. ಅದರಂತೆ ಆಕ್ರಮಣಕಾರಿಯಾಗಿರುವ ಪಿಟ್‌ಬುಲ್, ರೊಟ್​ವೀಲರ್ ಮತ್ತು ಡೊಗೊ ಅರ್ಜಂಟಿನೊದಂಥ ದುಬಾರಿ ಬೆಲೆಯ ನಾಯಗಳನ್ನು ಸಾಕುವುದಕ್ಕೆ ನಿಷೇಧ ಹೇರಲಾಗಿದೆ.
ಯಾರೂ ಹೆಚ್ಚು ನಾಯಿಗಳನ್ನು ಸಾಕುವಂತಿಲ್ಲ. ನಾಯಿಗಳನ್ನು ಸಾಕಲು ಕಡ್ಡಾಯವಾಗಿ ಲೈಸೆನ್ಸ್​ ಪಡೆಯಬೇಕು. ಬಹುಮಹಡಿ ವಸತಿ ಸಂಕೀರ್ಣಗಳಲ್ಲಿ ವಾಸಿಸುತ್ತಿರುವವರು ನಾಯಿಗಳನ್ನು ಮನೆಗಳಿಂದ ಹೊರಗೆ ಕರೆತರಲು ಕಡ್ಡಾಯವಾಗಿ ಲಿಫ್ಟ್ ಬಳಸಬೇಕು, ಸಾರ್ವಜನಿಕ ಸ್ಥಳಗಳಿಗೆ ನಾಯಿಗಳನ್ನು ಕರೆದೊಯ್ಯುವಾಗ ಬಲೆಯಂಥ ಮಾಸ್ಕ್​ ಅನ್ನು ನಾಯಿಗಳ ಬಾಯಿಗೆ ಕಡ್ಡಾಯವಾಗಿ ಹಾಕಬೇಕು ಎಂದು ಸೂಚಿಸಲಾಗಿದೆ.
ನಾಯಿಗಳನ್ನು ಸಾಕಿರುವವರಿಗೆ ಅದು ಮುದ್ದು. ಆದರೆ ನಾಯಿಗಳಿಂದ ಕಡಿಸಿಕೊಂಡು ಗಾಯಗೊಂಡ ಮಕ್ಕಳ ಬಗ್ಗೆಯೂ ಯೋಚಿಸಬೇಕಿದೆ. ಪಿಟ್​ಬುಲ್ ಕಡಿತದಿಂದ ಕುಶ್ ತ್ಯಾಗಿ ಎಂಬ ಮಗುವಿನ ಮುಖಕ್ಕೆ 150 ಹೊಲಿಗೆ ಬಿದ್ದಿದೆ. ಇದಾದ ಕೆಲವೇ ದಿನಗಳಲ್ಲಿ ಇದೇ ತಳಿಯ ಮತ್ತೊಂದು ನಾಯಿ ಇನ್ನೊಂದು ಮಗುವಿನ ಮೇಲೆ ದಾಳಿ ಮಾಡಿತ್ತು. ನಗರ ವ್ಯಾಪ್ತಿಯಲ್ಲಿ 10ಕ್ಕೂ ಹೆಚ್ಚು ಮಕ್ಕಳು ನಾಯಿ ಕಡಿತದಿಂದ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಗರಾಡಳಿತ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದೆ.

LEAVE A REPLY

Please enter your comment!
Please enter your name here

Most Popular

error: Content is protected !!