Saturday, December 10, 2022
spot_img
Homeಸುದ್ದಿಟಿ20 ಅಭ್ಯಾಸ ಪಂದ್ಯ: ಆಸ್ಟ್ರೇಲಿಯಕ್ಕೆ 187 ರನ್‌ ಗುರಿ

ಟಿ20 ಅಭ್ಯಾಸ ಪಂದ್ಯ: ಆಸ್ಟ್ರೇಲಿಯಕ್ಕೆ 187 ರನ್‌ ಗುರಿ

ಕೆ.ಎಲ್‌. ರಾಹುಲ್‌ , ಸೂರ್ಯಕುಮಾರ್‌ ಯಾದವ್‌ ಅರ್ಧಶತಕ

ಬ್ರಿಸ್ಬೇನ್‌: ಇಲ್ಲಿ ಇಂದು ನಡೆದ ಟಿ20 ವಿಶ್ವಕಪ್‌ ಅಭ್ಯಾಸ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ಕೆ.ಎಲ್‌ ರಾಹುಲ್‌ (57) ಹಾಗೂ ಸೂರ್ಯಕುಮಾರ್‌ ಯಾದವ್‌ (50) ಅವರ ಅರ್ಧಶತಕಗಳ ಬಲದಿಂದ 20 ಓವರ್‌ಗಳಿಗೆ 7 ವಿಕೆಟ್‌ ನಷ್ಟಕ್ಕೆ 186 ರನ್‌ ಗಳಿಸಿ ಎದುರಾಳಿ ಆಸ್ಟ್ರೇಲಿಯಾ ತಂಡಕ್ಕೆ 187 ರನ್‌ ಗುರಿ ನೀಡಿದೆ
ಗಬ್ಬಾ ಸ್ಟೇಡಿಯಂನಲ್ಲಿ ಟಾಸ್‌ ಗೆದ್ದು ಭಾರತವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿದ ಆಸ್ಟ್ರೇಲಿಯ ತಂಡದ ನಾಯಕ ಆರೋನ್‌ ಫಿಂಚ್‌ ಅವರ ನಿರ್ಧಾರವನ್ನು ಆರಂಭದಲ್ಲಿಯೇ ಕೆ.ಎಲ್‌. ರಾಹುಲ್‌ ತಲೆ ಕೆಳಗಾಗುವಂತೆ ಮಾಡಿದರು. ಆರಂಭದಿಂದಲೇ ಸ್ಫೋಟಕ ಬ್ಯಾಟ್‌ ಮಾಡಿದ ಕೆ.ಎಲ್‌ ರಾಹುಲ್‌, ಆಸೀಸ್‌ ಬೌಲರ್‌ಗಳಿಗೆ ಬೆವರಿಳಿಸಿದರು. ಎದುರಿಸಿದ ಕೇವಲ 33 ಎಸೆತಗಳಲ್ಲಿ ಭರ್ಜರಿ ಮೂರು ಸಿಕ್ಸರ್ ಹಾಗೂ ಆರು ಬೌಂಡರಿಗಳೊಂದಿಗೆ 57 ರನ್‌ ಚಚ್ಚಿದ್ದರು. ಆ ಮೂಲಕ ಪವರ್‌ಪ್ಲೇನಲ್ಲಿ ಭಾರತ ತಂಡದ ಮೊತ್ತವನ್ನು ಏರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
ಕೆ.ಎಲ್‌ ರಾಹುಲ್ ವಿಕೆಟ್‌ ಪತನದ ಬಳಿಕ ನಾಯಕ ರೋಹಿತ್‌ ಶರ್ಮಾ (14 ರನ್‌) ಕೂಡ ನಿರ್ಗಮಿಸಿದರು. 19 ರನ್‌ ಗಳಿಸಿ ವಿರಾಟ್‌ ಕೊಹ್ಲಿ ವಿಕೆಟ್‌ ಒಪ್ಪಿಸಿದರೆ, ಹಾರ್ದಿಕ್‌ ಪಾಂಡ್ಯ ಕೇವಲ 2 ರನ್‌ಗೆ ಔಟ್‌ ಆದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ತಮ್ಮ ಲಯವನ್ನು ಮುಂದುವರಿಸಿದ ಸೂರ್ಯಕುಮಾರ್‌ ಯಾದವ್‌ 33 ಎಸೆತಗಳಲ್ಲಿ ಒಂದು ಸಿಕ್ಸರ್‌ 6 ಬೌಂಡರಿಗಳೊಂದಿಗೆ 50 ರನ್‌ ಚಚ್ಚಿದರು. ಕೊನೆಯ ಹಂತದಲ್ಲಿ ದಿನೇಶ್‌ ಕಾರ್ತಿಕ್‌ 14 ಎಸೆತಗಳಲ್ಲಿ 20 ರನ್‌ ಗಳಿಸಿದರು.

ಆಸ್ಟ್ರೇಲಿಯಾ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ ಕೇನ್‌ ರಿಚರ್ಡ್ಸನ್‌ 4 ಓವರ್‌ಗಳಿಗೆ 30 ರನ್‌ ನೀಡಿ 4 ವಿಕೆಟ್‌ಗಳನ್ನು ಕಬಳಿಸಿದರು. ಮಿಚೆಲ್‌ ಸ್ಟಾರ್ಕ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ , ಆಷ್ಟನ್‌ ಎಗರ್ ತಲಾ ಒಂದೊಂದು ವಿಕೆಟ್‌ಗಳನ್ನು ಕಬಳಿಸಿದರು.
ಸಂಕ್ಷಿಪ್ತ ಸ್ಕೋರ್‌
ಭಾರತ: 20 ಓವರ್‌ಗಳಿಗೆ 186-7 (ಕೆ.ಎಲ್‌ ರಾಹುಲ್‌ 57, ಸೂರ್ಯಕುಮಾರ್‌ ಯಾದವ್‌ 50, ದಿನೇಶ್‌ ಕಾರ್ತಿಕ್‌ 20; ಕೇನ್‌ ರಿಚರ್ಡ್ಸನ್‌ 30ಕ್ಕೆ 4. ಮಿಚೆಲ್‌ ಸ್ಟಾರ್ಕ್‌ 20ಕ್ಕೆ 1, ಆಷ್ಟನ್‌ ಎಗರ್‌ 36ಕ್ಕೆ 1).

LEAVE A REPLY

Please enter your comment!
Please enter your name here

Most Popular

error: Content is protected !!