ಜೈಶ್-ಎ-ಮುಹಮ್ಮದ್ ಉಗ್ರ ಸಂಘಟನೆ ಹೆಸರಿನಲ್ಲಿ ಬೆದರಿಕೆ ಪತ್ರ
ಹರಿದ್ವಾರ: ಉತ್ತರಖಂಡದ ಕೇದಾರನಾಥ, ಹರಿದ್ವಾರ ಸೇರಿ ಕೆಲವು ದೇವಸ್ಥಾನಗಳಿಗೆ ಬಾಂಬ್ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಹರಿದ್ವಾರ ರೈಲು ನಿಲ್ದಾಣದ ಸುಪರಿಂಟೆಂಡ್ಗೆ ಅಂಚೆ ಮೈಲಕ ಕಿಡಿಗೇಡಿಗಳು ದೇವಸ್ಥಾನಗಳನ್ನು ಸ್ಫೋಟಿಸುವ ಬೆದರಿಕೆ ಪತ್ರ ರವಾನಿಸಿದ್ದಾರೆ. ಜೈಶ್- ಎ. ಮುಹಮ್ಮದ್ ಉಗ್ರ ಸಂಘಟನೆಯ ಹೆಸರಿನಲ್ಲಿ ಈ ಪತ್ರ ಇರುವುದರಿಂದ ಪೊಲೀಸರು ಮತ್ತು ಗುಪ್ತಚರ ಪಡೆ ತೀವ್ರ ತಲಾಶೆಯಲ್ಲಿ ತೊಡಗಿದೆ. ಜೈಶ್ನ ಕಮಾಂಡರ್ ಜಮೀರ್ ಅಹಮ್ಮದ್ ಎಂದು ಪತ್ರ ಬರೆದ ವ್ಯಕ್ತಿ ತನ್ನನ್ನು ಪರಿಚಯಿಸಿಕೊಂಡಿದ್ದಾನೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನೆ ನಡೆಸಿರುವ ಜಿಹಾದಿಗಳ ಹತ್ಯೆಗೆ ಪ್ರತಿಕಾರವಾಗಿ ಹರಿದ್ವಾರ, ಕೇದಾರನಾಥ ಮತ್ತಿತರ ದೇವಸ್ಥಾನಗಳನ್ನು ಅ.25 ಮತ್ತು 27ರಂದು ಬಾಂಬಿಟ್ಟು ಸ್ಫೋಟಿಸುವುದಾಗಿ ಆತ ಬೆದರಿಕೆಯೊಡ್ಡಿದ್ದಾನೆ.