Tuesday, December 6, 2022
spot_img
Homeಸುದ್ದಿನಿವೃತ್ತ ಬ್ಯಾಂಕ್‌ ಅಧಿಕಾರಿಗೆ 9.75 ಲ.ರೂ. ವಂಚನೆ

ನಿವೃತ್ತ ಬ್ಯಾಂಕ್‌ ಅಧಿಕಾರಿಗೆ 9.75 ಲ.ರೂ. ವಂಚನೆ

ಮನೆಯಲ್ಲಿ ಆಶ್ರಯ ಪಡೆದವನಿಂದಲೇ ಎಟಿಎಂ ಕಾರ್ಡ್‌ ಬಳಸಿ ದ್ರೋಹ

ಉಡುಪಿ: ನಿವೃತ್ತ ಬ್ಯಾಂಕ್‌ ಅಧಿಕಾರಿಯೊಬ್ಬರಿಗೆ ಅವರ ಮನೆಯಲ್ಲೇ ಆಶ್ರಯ ಪಡೆದಿದ್ದ ವ್ಯಕ್ತಿಯೊಬ್ಬ ಎಟಿಎಂ ಕಾರ್ಡ್‌ ಕದ್ದು 9 ಲ.ರೂ.ವಂಚಿಸಿದ ಕುರಿತು ದೂರು ದಾಖಲಾಗಿದೆ. ಉಡುಪಿ ಬನ್ನಂಜೆಯ ಬಾಲಕೃಷ್ಣ ನಾಯಕ್‌ ವಂಚನೆಗೊಳಗಾದವರು.
ಪತ್ನಿ ತೀರಿಕೊಂಡ ಬಳಿಕ ಮನೆಯಲ್ಲೇ ಒಬ್ಬರೇ ವಾಸವಿದ್ದ ಬಾಲಕೃಷ್ಣ ನಾಯಕ್‌ ಸರಕಾರಿ ಆಸ್ಪತ್ರೆಯ ವಾರ್ಡ್‌ಬಾಯ್‌ ಆಗಿದ್ದ ಹಾವೇರಿ ಮೂಲದ ರಮೇಶ್‌ ಮತ್ತು ಆತನ ಪತ್ನಿಗೆ ಮನೆಯ ಒಂದು ಭಾಗದಲ್ಲಿ ಉಚಿತವಾಗಿ ವಸತಿ ವ್ಯವಸ್ಥೆ ಮಾಡಿಕೊಟ್ಟಿದ್ದರು. ಜು.4ರಿಂದ ಅ.10ರ ನಡುವೆ ರಮೇಶ್‌ ಎಟಿಎಂ ಕಾರ್ಡ್‌ ಮತ್ತು ಒಟಿಪಿ ಬಳಸಿಕೊಂಡು ಹಂತಹಂತವಾಗಿ 9.75 ಲ.ರೂ. ವಿದ್‌ಡ್ರಾ ಮಾಡಿ ವಂಚಿಸಿ ವಿಶ್ವಾಸ ದ್ರೋಹ ಮಾಡಿದ್ದಾನೆ. ಜತೆಗೆ ಬಾಲಕೃಷ್ಣ ನಾಯಕ್‌ ಅವರ ಮನೆಯಲ್ಲಿದ್ದ ಎರಡು ಚಿನ್ನದ ಉಂಗುರಗಳನ್ನು ಎಗರಿಸಿದ್ದಾನೆ. ಈ ಕುರಿತು ಬಾಲಕೃಷ್ಣ ನಾಯಕ್‌ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!