Saturday, December 10, 2022
spot_img
Homeಸುದ್ದಿಕಾರ್ಕಳದಲ್ಲಿ ಆಯುಷ್ಮಾನ್‌ ಕಾರ್ಡ್‌ ನೋಂದಣಿ

ಕಾರ್ಕಳದಲ್ಲಿ ಆಯುಷ್ಮಾನ್‌ ಕಾರ್ಡ್‌ ನೋಂದಣಿ


ಕಾರ್ಕಳ: ಕೇಂದ್ರ ಹಾಗೂ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಆಯುಷ್ಮಾನ್ (ಆಭಾ ) ಕಾರ್ಡ್ ಉಚಿತ ನೋಂದಣಿ ಕಾರ್ಕಳ ನಗರ ಭಾರತೀಯ ಜನತಾ ಪಾರ್ಟಿ ವತಿಯಿಂದ ಶ್ರೀ ಕಾಳಿಕಾಂಬ ದೇವಸ್ಥಾನದ ಬಳಿಯ ಜ್ಯೋತಿ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ನ್ಯಾಯವಾದಿ ಎಂ. ಕೆ. ವಿಜಯಕುಮಾರ್ ಮಾತನಾಡಿ, ಶ್ರೀಮಂತ ಬಡವರು ಎನ್ನುವ ಬೇಧಭಾವವಿಲ್ಲದೆ ಸರಕಾರದಿಂದ ನೀಡಿರುವ ಯೋಜನೆಯನ್ನು ಜನಸಾಮಾನ್ಯರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಬಿಜೆಪಿ ಮಂಡಲ ಕಾರ್ಯದರ್ಶಿ ಪ್ರಕಾಶ್ ರಾವ್, ಕಾರ್ಕಳ ಪುರಸಭೆ ನಾಮನಿರ್ದೇಶಿತ ಸದಸ್ಯ ಸಂತೋಷ್ ರಾವ್, ಜ್ಯೋತಿ ಯುವಕ ಮಂಡಲದ ನಿರ್ದೇಶಕ ಕೆ. ರವೀಂದ್ರನಾಥ ಹೆಗ್ದೆ, ಅಧ್ಯಕ್ಷ ಹಿತೇಶ್ ಕೋಟ್ಯಾನ್, ಪೆರ್ವಾಜೆ ಪತ್ತೊಂಜಿ ಕಟ್ಟೆ ಮಹಾಲಿಂಗೇಶ್ವರ ಯುವಕ ಮಂಡಲದ ಅಧ್ಯಕ್ಷ ಪ್ರಸಾದ್ ದೇವಾಡಿಗ, ನಿವೃತ್ತ ಶಿಕ್ಷಕಿ ಇಂದಿರಾ ಆಚಾರ್ಯ, ಆಶಾ ಕಾರ್ಯಕರ್ತೆ ಪ್ರಮೀಳಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

error: Content is protected !!