Saturday, December 10, 2022
spot_img
Homeಸುದ್ದಿಬಾಂಬ್‌ ಹಾಕುವ ಆಡಿಯೊ ವೈರಲ್‌: ಇಬ್ಬರು ಪೊಲೀಸ್‌ ವಶ

ಬಾಂಬ್‌ ಹಾಕುವ ಆಡಿಯೊ ವೈರಲ್‌: ಇಬ್ಬರು ಪೊಲೀಸ್‌ ವಶ

ಮಡಿಕೇರಿ: ಪೆಟ್ರೋಲು ಬಾಂಬ್‌ ಹಾಕಿ ಸಮಾಜದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಬೇಕೆಂದು ಫೋನಿನಲ್ಲಿ ಮಾತಾಡಿಕೊಂಡ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಚುನಾಯಿತ ಪ್ರತಿನಿಧಿ ಇನ್ನೊಬ್ಬ ವ್ಯಕ್ತಿಯ ಜತೆ ಪೆಟ್ರೋಲು ಬಾಂಬ್‌ ಹಾಕಬೇಕೆಂದು ಹೇಳಿದ ಆಡಿಯೊ ವೈರಲ್‌ ಆಗಿತ್ತು. ಈ ಸಂಬಂಧ ತನಿಖೆ ನಡೆಸಿದ ಮಡಿಕೇರಿ ಪೊಲೀಸರು ಚುನಾಯಿತ ಪ್ರತಿನಿಧಿಯ ಸಹಿತ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಇದು ಯಾವಾಗ ಮಾತನಾಡಿದ ಆಡಿಯೊ ತುಣುಕು ಎನ್ನುವುದು ಸ್ಪಷ್ಟವಾಗಿಲ್ಲ. ಮಾತಾಡಿಕೊಂಡವರಿಬ್ಬರು ಬಿಜೆಪಿಗೆ ಸೇರಿದವರು ಎನ್ನಲಾಗಿದೆ. ಈ ಆಡಿಯೊ ಬಹಳ ವೈರಲ್‌ ಆದ ಬಳಿಕ ಪೊಲೀಸರು ತನಿಖೆ ಪ್ರಾರಂಭಿಸಿದ್ದರು.

LEAVE A REPLY

Please enter your comment!
Please enter your name here

Most Popular

error: Content is protected !!