ಆನೆಕೆರೆ ಬಸದಿ, ಜೈನಮಠಕ್ಕೆ ಡಿ. ಸುರೇಂದ್ರ ಕುಮಾರ್‌ ಭೇಟಿ

ಕಾರ್ಕಳ : ಕಾರ್ಕಳ ಆನೆಕೆರೆ ಬಸದಿ ಹಾಗೂ ಜೈನಮಠಕ್ಕೆ ಶನಿವಾರ ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್‌ ಭೇಟಿ ನೀಡಿ ಕಾಮಗಾರಿ ಪ್ರಗತಿ ಪರಿಶೀಲಿಸಿದರು. ಸುರೇಂದ್ರ ಕುಮಾರ್‌ ಅವರ ಪತ್ನಿ ಅನಿತಾ ಸುರೇಂದ್ರ ಕುಮಾರ್, ಕುಲದೀಪ್ ಮೂಡಬಿದ್ರಿ ಅರಮನೆ, ನೇಮಿರಾಜ್ ಅರಿಗ, ಮಹೇಂದ್ರ ವರ್ಮ ಜೈನ್, ರಾಜೇಶ್ ಜೈನ್, ಸಂಪತ್ ಜೈನ್, ಪ್ರಮೋದ್ ಜೈನ್, ಅಭಿನಂದನ್ ಜೈನ್, ದೀಕ್ಷಿತ್ ಜೈನ್, ಶೀತಲ್ ಜೈನ್, ಧನಕೀರ್ತಿ ಕಡಂಬ, ಅಕ್ಷತಾ ಜೈನ್, ಶಾಂತಿನಾಥ ಇಂದ್ರ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸುರೇಂದ್ರ ಕುಮಾರ್ ದಂಪತಿ ಜೈನ ಮಠಕ್ಕೆ ಭೇಟಿ ನೀಡಿ‌ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಅವರ ಆಶೀರ್ವಾದ ಪಡೆದರು.

Latest Articles

error: Content is protected !!