ಕಾರ್ಕಳ : ವಿದ್ಯುತ್ ಗ್ರಾಹಕರ ಸಮಸ್ಯೆ ಆಲಿಸುವ ನಿಟ್ಟಿನಲ್ಲಿ ಕಾರ್ಕಳ ಮೆಸ್ಕಾಂ ಕಚೇರಿಯಲ್ಲಿ ಶನಿವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ 28 ದೂರು ಸ್ವೀಕಾರವಾಗಿದೆ. ಅವುಗಳಲ್ಲಿ 14 ದೂರು ವಿಲೇವಾರಿ ಮಾಡಲಾಗಿದೆ.
ಮಧ್ಯಾಹ್ನ 3:30ರಿಂದ 4:30ರವರೆಗೆ ಉಡುಪಿ ವೃತ್ತ ಮೆಸ್ಕಾಂನ ಅಧೀಕ್ಷಕ ಇಂಜಿನಿಯರ್ ದಿನೇಶ್ ಉಪಾಧ್ಯಾಯ, ಕವಿಪ್ರನಿನಿ ಮಂಗಳೂರು ವೃತ್ತ ಅಧೀಕ್ಷಕ ಇಂಜಿನೀಯರ್ ರವಿಕಾಂತ್ ಕಾಮತ್, ಕಾರ್ಕಳ ಮೆಸ್ಕಾಂ ವಿಭಾಗದ ಕಾರ್ಯಪಾಲಕ ಇಂಜಿನೀಯರ್ ನರಸಿಂಹ ಸೇರಿದಂತೆ ಕಾರ್ಕಳ ಹೆಬ್ರಿ ತಾಲೂಕಿನ 12 ಶಾಖೆಗಳ ಶಾಖಾಧಿಕಾರಿಗಳು ಭಾಗವಹಿಸಿದ್ದರು.