ಕಾರ್ಕಳ : ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದ ಆಟೋ ಚಾಲಕ, ಕಾರ್ಕಳ ಜೋಗುಲಬೆಟ್ಟು ಇಂದುಗುರಿಯ ಬ್ರೂನ ಸಲ್ದಾನ ಅ. 15ರಂದು ನಿಧನ ಹೊಂದಿದರು. ಅ. 7ರಂದು ಬ್ರೂನ ಸಲ್ದಾನ ಅವರ ಕಣ್ಣು ಸರಿಯಾಗಿ ಕಾಣಿಸುವುದಿಲ್ಲ ಎಂದು ಚಿಕಿತ್ಸೆಗಾಗಿ ನಿಟ್ಟೆ ಗಾಜ್ರಿಯಾ ಆಸ್ಪತ್ರೆಗೆ ಬಂದಿದ್ದರು. ಅಲ್ಲಿನ ವೈದ್ಯರು ಕಣ್ಣು ಆಪರೇಷನ್ ಆಗಬೇಕಿದೆ ಎಂದು ತಿಳಿಸಿದ್ದರು. ಆರೋಗ್ಯ ಸಮಸ್ಯೆಯಿಂದ ನೋಂದ ಬ್ರೂನ ಸಲ್ದಾನ ಅಂದೇ ಮದ್ಯದೊಂದಿಗೆ ವಿಷ ಸೇವನೆ ಮಾಡಿದ್ದರು. ಮರುದಿನ ಹೊಟ್ಟೆನೋವುಂಟಾಗಿ ಚಿಕಿತ್ಸೆಗಾಗಿ ಸಲ್ದಾನ ಅವರು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರು ವೆನ್ ಲಾಕ್ ಆಸ್ಪತ್ರೆ ತದನಂತರ ಅ. 9 ರಂದು ಎ.ಜೆ. ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದ ಸಲ್ದಾನ ಶನಿವಾರ ಬೆಳಗಿನ ಜಾವ ಮೃತಪಟ್ಟಿರುತ್ತಾರೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.