Tuesday, December 6, 2022
spot_img
Homeಸುದ್ದಿಖಾದಿ ದೈನಂದಿನ ಬದುಕಿನ ಭಾಗವಾಗಲಿ : ಸುನೀಲ್‌ ಕುಮಾರ್‌

ಖಾದಿ ದೈನಂದಿನ ಬದುಕಿನ ಭಾಗವಾಗಲಿ : ಸುನೀಲ್‌ ಕುಮಾರ್‌

ಕಾರ್ಕಳ ಪುರಸಭೆ ಕಟ್ಟಡದಲ್ಲಿ ಖಾದಿ ಮಳಿಗೆ ಉದ್ಘಾಟನೆ

ಕಾರ್ಕಳ : ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನಾಚರಣೆ ಪ್ರಯುಕ್ತ ಸೇವಾ ಪಾಕ್ಷಿಕದಡಿ ಖಾದಿ ಬಟ್ಟೆಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆ ಭಾನುವಾರ ಉದ್ಘಾಟನೆಗೊಂಡಿತು. ಕಾರ್ಕಳ ಬಸ್ ನಿಲ್ದಾಣ ಬಳಿಯ ಪುರಸಭೆ ಕಟ್ಟಡದಲ್ಲಿ ಖಾದಿ ಬಟ್ಟೆ ಪ್ರದರ್ಶನ ಮತ್ತು ಮಾರಾಟ ಮಳಿಗೆಗೆ ಸಚಿವ ಸುನೀಲ್‌ ಕುಮಾರ್‌ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಸ್ವಾತಂತ್ರ್ಯ ಚಳವಳಿಯಲ್ಲಿ ಬಹುಮುಖ್ಯ ಪಾತ್ರವಹಿಸಿದ್ದ ಖಾದಿಯನ್ನು ಮತ್ತೊಮ್ಮೆ ಜನಪ್ರಿಯಗೊಳಿಸಿ ಆ ಮೂಲಕ ನೇಕಾರರ ಬದುಕಿಗೆ ಆಸರೆಯಾಗಲು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ನಾವೆಲ್ಲ ಖಾದಿ ಉಡುಪು ಧರಿಸಿ, ನಮ್ಮ ದೈನಂದಿನ ಬದುಕಿನಲ್ಲಿ ಖಾದಿಗೊಂದು ಕಾಯಂ ಸ್ಥಾನ ನೀಡುವ ಮೂಲಕ ಪ್ರಧಾನಿಯವರ ಆಶಯವನ್ನು ಈಡೇರಿಸಬಹುದು. ದೇಸಿ ಸೊಗಡಿನ ಖಾದಿ ಈಗ ಮೌಲ್ಯ ವರ್ಧಿಸಿಕೊಂಡು ಆಧುನಿಕ ಶೈಲಿಯಲ್ಲೂ ಲಭ್ಯವಿದೆ. ಎಲ್ಲರೂ ಖಾದಿಯನ್ನು ಬಳಸುವುದರಿಂದ ಸಾವಿರಾರು ನೇಕಾರರ ಕುಟುಂಬಗಳಿಗೆ ಆಸರೆಯಾಗಬಹುದಾಗಿದೆ ಎಂದರು.
ಕಾರ್ಕಳ ಜನತೆಗೆ ಖಾದಿಯನ್ನು ಉಪಯೋಗಿಸಲು ಇದು ಒಂದು ಉತ್ತಮ ಅವಕಾಶವಾಗಿದ್ದು, ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಈ ಸಂದರ್ಭದಲ್ಲಿ ಸುನೀಲ್‌ ಕುಮಾರ್‌ ಮನವಿ ಮಾಡಿಕೊಂಡಿರು.
ಕಾರ್ಕಳ ಪುರಸಭೆ ಅಧ್ಯಕ್ಷೆ ಸುಮಾ ಕೇಶವ್‌, ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್‌, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ನಗರಾಧ್ಯಕ್ಷ ರವೀಂದ್ರ ಮೊಯ್ಲಿ, ಜಿಲ್ಲಾ ಕಾರ್ಯದರ್ಶಿ ರವೀಂದ್ರ ಕುಮಾರ್‌, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ವಿಖ್ಯಾತ್‌ ಶೆಟ್ಟಿ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಯೋಗೀಶ್‌ ದೇವಾಡಿಗ, ಕಾರ್ಕಳ ತಾಲೂಕು ಬಿಜೆಪಿ ಕಾರ್ಯದರ್ಶಿ ಅನಂತಕೃಷ್ಣ ಶೆಣೈ, ಬಿಜೆಪಿ ವಕ್ತಾರ ಹರೀಶ್‌ ಶೆಣೈ, ಆನಂದ್ರಾಯ ನಾಯಕ್‌, ಪುರಸಭೆ ಸದಸ್ಯರು ಮತ್ತು ಪಕ್ಷದ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

error: Content is protected !!