ಪಿಎಫ್‌ಐ ಪಾಯಿಸನ್‌ ಫ್ರಂಟ್‌ ಆಫ್‌ ಇಂಡಿಯಾ ಆಗಿತ್ತು : ಕಾಜಲ್ ಹಿಂದುಸ್ತಾನಿ

ಉಡುಪಿ : ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ದೇಶದ ಪಾಲಿಗೆ ಪಾಯಿಸನ್‌ ಫ್ರಂಟ್‌ ಆಫ್‌ ಇಂಡಿಯಾ ಆಗಿತ್ತು. ಪ್ರಧಾನಿ ನರೇಂದ್ರ ಮೋದಿ ಅದಕ್ಕೆ ಮದ್ದರೆದಿದ್ದಾರೆ. ದೇಶವನ್ನು ಇಸ್ಲಾಮೀಕರಣ ಮಾಡುವುದು ಆ ಸಂಘಟನೆಯ ಅಜೆಂಡಾ ಆಗಿತ್ತು ಎಂದು ಸಾಮಾಜಿಕ ಕಾರ್ಯಕರ್ತೆ ಕಾಜಲ್‌ ಹಿಂದುಸ್ತಾನಿ ಹೇಳಿದರು.
ಅವರು ಉಡುಪಿಯಲ್ಲಿ ಭಾನುವಾರ ನಡೆದ ಬೃಹತ್‌ ದುರ್ಗಾ ದೌಡ್‌ ಸಮಾವೇಶದಲ್ಲಿ ಮಾತನಾಡಿ, ಇಸ್ಲಾಂ ಆಕ್ರಮಣ ಈಗಲೂ ಭಾರತ ಎದುರಿಸುತ್ತಿರುವ ದೊಡ್ಡ ಸಮಸ್ಯೆ. ಆಕ್ರಮಣದ ಸ್ವರೂಪ ಬದಲಾಗಿದೆ. ಲವ್‌ ಜಿಹಾದ್‌, ಲ್ಯಾಂಡ್‌ ಜಿಹಾದ್‌ ರೂಪದಲ್ಲಿ ಅವರು ಆಕ್ರಮಣ ಎಸಗುತ್ತಿದ್ದಾರೆ. ಹಿಂದುಗಳ 13-14 ವರ್ಷದ ಹೆಣ್ಣುಮಕ್ಕಳನ್ನು ಅವರು ಪ್ರೀತಿಯ ನಾಟಕವಾಡಿ ಲವ್‌ ಜಿಹಾದ್‌ ಎಸಗುತ್ತಾರೆ. ಇದಕ್ಕೆ ಹಿಂದು ಸಮುದಾಯದಲ್ಲಿ ಮಕ್ಕಳಿಗೆ ಸಂಸ್ಕಾರ ನೀಡದಿರುವುದು ಕಾರಣವಾಗಿದೆ ಎಂದು ಕಾಜಲ್‌ ಅಭಿಪ್ರಾಯಪಟ್ಟರು.

ಎಚ್ಚೆತ್ತುಕೊಳ್ಳಬೇಕು
ಹಿಂದುಗಳ ಮಂದಿರ, ಮಠಗಳು, ಸಾರ್ವಜನಿಕ ಸ್ಥಳಗಳು, ರೈಲು ನಿಲ್ದಾಣ, ಬಸ್‌ ನಿಲ್ದಾಣ ಮತ್ತಿತರ ಸ್ಥಳಗಳನ್ನು ಆಕ್ರಮಿಸಿ ದರ್ಗಾ, ಮಸೀದಿ ನಿರ್ಮಿಸುತ್ತಿದ್ದಾರೆ. ಈ ಜಿಹಾದ್‌ ಬಗ್ಗೆ ನಾವು ಎಚ್ಚೆತ್ತುಕೊಳ್ಳಬೇಕು ಎಂದರು. ಹಿಂದುಗಳಲ್ಲಿ ತಂದೆ ದುಡಿಯುವುದರಲ್ಲಿ, ತಾಯಿ ಸೀರಿಯಲ್‌ ನೋಡುವುದರಲ್ಲಿ ವ್ಯಸ್ತರಾಗಿದ್ದಾರೆ. ಸೀರಿಯಲ್‌ಗಳು ಮತ್ತು ಬಾಲಿವುಡ್‌ ಸಿನೇಮಾಗಳು ಹಿಂದು ತಾಯಂದಿರ ದಿಕ್ಕುತಪ್ಪಿಸುತ್ತಿವೆ. ಸಂಸ್ಕಾರ ರಹಿತ, ಅವಾಸ್ತವಿಕ ಸೀರಿಯಲ್‌ಗಳನ್ನು ನೋಡುವ ಮಹಿಳೆಯರು ಅದನ್ನೇ ನಿಜವೆಂದು ನಂಬಿ ದಾರಿ ತಪ್ಪುತ್ತಿದ್ದಾರೆ. ಬಾಲಿವುಡ್‌ ಸಿನೇಮಾಗಳು ಲವ್‌ ಜಿಹಾದ್‌ ಅನ್ನು ಬಹಿರಂಗವಾಗಿ ಬೆಂಬಲಿಸುತ್ತಿವೆ. ಈ ಕಾರಣಕ್ಕೆ ಬಾಲಿವುಡ್‌ ಸಿನೇಮಾಗಳನ್ನು ಬಹಿಷ್ಕರಿಸಬೇಕೆಂದರು. ದಕ್ಷಿಣಕ್ಕೆ ಬಾಲಿವುಡ್‌ ಸಿನೇಮಾಗಳನ್ನು ಬರಲು ಬಿಡಬೇಡಿ, ದಕ್ಷಿಣದ ಸಂಸ್ಕೃತಿ ಭವ್ಯವಾಗಿದೆ. ಇಲ್ಲಿನ ಸಿನೇಮಾಗಳು ಉತ್ತಮವಾಗಿವೆ ಎಂದರು.

ಕೊರೊನಾದಂತೆ
ಜಾತೀಯತೆ ಹಿಂದುಗಳನ್ನು ವಿಭಜಿಸುತ್ತಿದೆ. ಇದರಿಂದ ಹಿಂದುಗಳು ದುರ್ಬಲರಾಗಿದ್ದಾರೆ. ಲವ್‌ ಜಿಹಾದ್‌ ಕೊರೊನಾದಂಥ ಇನ್ನೊಂದು ವೈರಸ್‌. ಮನೆಮನೆಗೆ ನುಗ್ಗಿ ನಮ್ಮನ್ನು ಹಾಳು ಮಾಡುತ್ತಿದೆ. ಇದರ ವಿರುದ್ಧ ಹಿಂದುಗಳನ್ನು ಎಚ್ಚರಿಸಬೇಕಾದ ಅಗತ್ಯವಿದೆ ಎಂದ ಕಾಜಲ್, ನೂಪುರ್‌ ಶರ್ಮ ಬೆಂಬಲಿಸಿದ್ದಕ್ಕಾಗಿ ಪ್ರವೀಣ್‌ ನೆಟ್ಟಾರು, ಶಿವಮೊಗ್ಗದ‌ ಶರತ್‌ ಹತ್ಯೆ ಮಾಡಿದರು. ಹಿಂದುಗಳ ಸಂಘರ್ಷ ಸಾವಿರಾರು ವರ್ಷಗಳಿಂದ ನಡೆಯುತ್ತಿದೆ. ಭಾಯಿಚಾರ್‌ ಹೆಸರಲ್ಲಿ ಹಿಂದುಗಳನ್ನು ವಂಚಿಸಲಾಗಿದೆ. ಟಿಪ್ಪು ಸುಲ್ತಾನ್‌ ಮಾನಸಿಕತೆ ಪಿಎಫ್‌ಐ ರೂಪದಲ್ಲಿ ಬಂದಿದೆ. ಹಿಂದುಗಳನ್ನು ಹತ್ಯೆ ಮಾಡುವುದೇ ಅವರ ಉದ್ದೇಶವಾಗಿದೆ ಎಂದರು.

ಭೋಪಾಲದಿಂದ ಪ್ರಜ್ಞಾ ಸಿಂಗ್‌ ಠಾಕೂರ್‌ ವೀಡಿಯೋ ಸಂದೇಶ
ಭಾರತ ಎಚ್ಚೆತ್ತರೆ ವಿಶ್ವ ಜಾಗೃತವಾಗುವುದು. ಹಿಂದು ಜಾಗೃತನಾದರೆ ವಿಶ್ವ ಜಾಗೃತಗೊಳ್ಳುವುದು. ಹಿಂದು ಜಾಗೃತಿಯಿಂದ ಜಗತ್ತಿಗೆ ಅಧ್ಯಾತ್ಮಿಕ ಸಂದೇಶ ರವಾನೆಯಾಗುವುದು. ರಾಷ್ಟ್ರ ಜಾಗೃತಿಯ ಕೆಲಸ ಉಡುಪಿಯಲ್ಲಿ ಆಗಿದೆ ಎಂದರು.

ಕೃತಿ ಬಿಡುಗಡೆ
ಇದೇ ಸಂದರ್ಭದಲ್ಲಿ ಶ್ರೀಕಾಂತ್‌ ಶೆಟ್ಟಿ ಬರೆದ ಯೆಹೂದಿ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.

ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘದ ಕಾರ್ಯಾಧ್ಯಕ ಅಣ್ಣಯ್ಯ ಕುಲಾಲ್‌ ಉಳ್ತೂರು ಅಧ್ಯಕ್ಷತೆ ವಹಿಸಿದ್ದರು, ಶ್ರೀಕ್ಷೇತ್ರ ಅತ್ತೂರು ಪರ್ಪಲೆಗಿರಿ ಪುನರುತ್ಥಾನ ಸಮಿತಿಯ ಅಧ್ಯಕ್ಷ ಮಹೇಶ್‌ ಶೆಟ್ಟಿ ಕುಡುಪುಲಾಜೆ, ಉದ್ಯಮಿ ವಿಶ್ವನಾಥ ಪೂಜಾರಿ ಮತ್ತಿತರ ಹಿಂದು ಮುಖಂಡರು ಉಪಸ್ಥಿತರಿದ್ದರು. ಶ್ರೀಕಾಂತ್‌ ಶೆಟ್ಟಿ ಪ್ರಾಸ್ತವಿಕ ಮಾತುಗಳನ್ನಾಡಿದರು.

ಭವ್ಯ ಮೆರವಣೆಗೆ
ಭವ್ಯ ಮೆರವಣಿಗೆ ಕಡಿಯಾಳಿ ಕ್ಷೇತ್ರದ ಆವರಣದವರೆಗೆ ಬೃಹತ್‌ ಮೆರವಣಿಗೆ ಸಾಗಿತು. ಸಾವಿರಾರು ಹಿಂದು ಕಾರ್ಯಕರ್ತರು ಕೇಸರಿ ಪೇಟ ತೊಟ್ಟು ಶುಭ್ರ ಬಿಳಿ ಉಡುಗೆಯಲ್ಲಿ ಪಾಲ್ಗೊಂಡರು. ಉಡುಪಿ ನಗರವಿಡೀ ಕೆಸರಿ ಧ್ವಜ ರಾರಾಜಿಸುತ್ತಿತ್ತು.





























































































































































































































error: Content is protected !!
Scroll to Top