Tuesday, December 6, 2022
spot_img
Homeಸುದ್ದಿಪಿಎಫ್‌ಐ ಸಿದ್ದರಾಮಯ್ಯನವರ ಪಾಪದ ಕೂಸು: ಯಡಿಯೂರಪ್ಪ ತಿರುಗೇಟು

ಪಿಎಫ್‌ಐ ಸಿದ್ದರಾಮಯ್ಯನವರ ಪಾಪದ ಕೂಸು: ಯಡಿಯೂರಪ್ಪ ತಿರುಗೇಟು

ಶಿವಮೊಗ್ಗ: ಪಿಎಫ್ಐ ಸಂಘಟನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಾಪದ ಕೂಸು. ಪಿಎಫ್ಐ ಸಂಘಟನೆಗೆ ಹೇರಲಾಗಿದ್ದ ನಿಷೇಧವನ್ನು ತೆಗೆದುಹಾಕಿದ್ದು ಅವರು ಮುಖ್ಯಮಂತ್ರಿಯಾಗಿದ್ದಾಗ. ಇವತ್ತು ಕೇಂದ್ರ ನಿಷೇಧಿಸಿದಾಗ ಏನೂ ತೋಚದೆ ಸಿದ್ದರಾಮಯ್ಯನವರು ಬಾಯಿಗೆಬಂದಂತೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆರೋಪಿಸಿದ್ದಾರೆ.
ತಪ್ಪುಗಳಿಗೆಲ್ಲಾ ಮೂಲ ಕಾರಣ ಸಿದ್ದರಾಮಯ್ಯನವರು. ಇಂದು ಅವರಿಗೆ ತಪ್ಪಿನ ಅರಿವಾಗಿ ಪ್ರಾಮಾಣಿಕವಾಗಿ ಮಾತನಾಡುವುದು ಬಿಟ್ಟು ಹಗುರವಾಗಿ ಮಾತನಾಡುತ್ತಿರುವುದು ಅಚ್ಚರಿಯಾಗುತ್ತದೆ. ಈಗಲಾದರೂ ಅವರು ಸ್ವಲ್ಪ ಜಾಗರೂಕರಾಗಿ ಮಾತನಾಡಬೇಕೆಂದರು.
ವಿಪಕ್ಷಗಳ ಪೈಕಿ ಇಂದು ಸಿದ್ದರಾಮಯ್ಯನವರೇ ಪಿಎಫ್ಐ ಬ್ಯಾನ್ ಬಗ್ಗೆ ಹಗುರವಾಗಿ ಮಾತನಾಡುತ್ತಿರುವುದು. ಅವರು ಮಾಡಿದ ಅಪರಾಧಗಳಿಂದ ಇಷ್ಟೆಲ್ಲ ಅನಾಹುತಗಳಾಯಿತು ಎಂದು ಆರೋಪಿಸಿದರು.
ಇಡೀ ದೇಶದ ಜನ ನಮ್ಮ ಜತೆಗಿದ್ದಾರೆ. ಅದನ್ನು ನೋಡಿ ಸಿದ್ದರಾಮಯ್ಯನವರಿಗೆ ಸಹಿಸಲಾಗುತ್ತಿಲ್ಲ. ಏನೂ ತೋಚದೆ ಹುಚ್ಚರಂತೆ ಮಾತನಾಡುತ್ತಿದ್ದಾರೆ. ತಮ್ಮ ತಪ್ಪಿನ ಅರಿವಾಗಿ ನಾಡಿನ ಜನರಿಗೆ ಕ್ಷಮೆ ಕೇಳಬೇಕಿತ್ತು. ಈಗಲಾದರೂ ಸಿದ್ದರಾಮಯ್ಯನವರು ಜಾಗೃತರಾಗಬೇಕು ಎಂದು ಹೇಳಿದರು.

LEAVE A REPLY

Please enter your comment!
Please enter your name here

Most Popular

error: Content is protected !!