Tuesday, December 6, 2022
spot_img
Homeಸುದ್ದಿಕಾನೂನು ಪಾಲಿಸುವ ಸಲುವಾಗಿ ಧ್ವನಿವರ್ಧಕ ಬಳಸದೆ ಭಾಷಣ ಮಾಡಿದ ಮೋದಿ

ಕಾನೂನು ಪಾಲಿಸುವ ಸಲುವಾಗಿ ಧ್ವನಿವರ್ಧಕ ಬಳಸದೆ ಭಾಷಣ ಮಾಡಿದ ಮೋದಿ

ರಾತ್ರಿ 10 ಗಂಟೆಯ ಬಳಿಕ ಮಾಡಿದ ಭಾಷಣ ಭಾರಿ ವೈರಲ್‌

ಜೈಪುರ: ಸಾಮಾನ್ಯವಾಗಿ ಪ್ರಧಾನಿಯ ಭಾಷಣ ಎಂದರೆ ಅತ್ಯುತ್ತಮ ಧ್ವನಿವರ್ಧಕ ವ್ಯವಸ್ಥೆ ಮಾಡಿರುತ್ತಾರೆ.ಅದರ ಸಬ್ಬರವೂ ಜೋರಾಗಿರುತ್ತದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಧ್ವನಿವರ್ಧಕ ಬಳಕೆ ನಿಯಮ ಪಾಲಿಸುವ ಸಲುವಾಗಿ ರಾತ್ರಿ ಧ್ವನಿವರ್ಧಕ ಬಳಸದೆ ಭಾಷಣ ಮಾಡಿದ ವೀಡಿಯೊ ಈಗ ವೈರಲ್‌ ಆಗುತ್ತಿದೆ. ಶುಕ್ರವಾರ ರಾತ್ರಿ ರಾಜಸ್ಥಾನದ ಸಿರೋಹಿಯ ಅಬು ರೋಡ್‌ ಎಂಬಲ್ಲಿ ಮೋದಿ ಧ್ವನಿವರ್ಧಕ ಇಲ್ಲದೆ ಭಾಷಣ ಮಾಡಿದ್ದಾರೆ.
ಈ ಕಾರ್ಯಕ್ರಮಕ್ಕೆ ಮೋದಿ ಆಗಮಿಸುವಾಗ ತಡವಾಗಿತ್ತು. ಆಗ ಧ್ವನಿವರ್ಧಕ ಬಳಸುವ ಸಮಯ ಮಿತಿ ಮೀರಿದ ಕಾರಣ ಕಾನೂನು ಪಾಲಿಸುವ ಸಲುವಾಗಿ ಮೋದಿ ಮೈಕ್‌ ಇಲ್ಲದೆಯೇ ಭಾಷಣ ಮಾಡಿದ್ದಾರೆ. ಇದಕ್ಕಾಗಿ ಮೊದಲು ಕ್ಷಮೆ ಯಾಚಿಸಿದ ಮೋದಿ ಬಳಿಕ ಉಚ್ಚ ಸ್ವರದಲ್ಲಿ ಭಾಷಣ ಪ್ರಾರಂಭಿಸಿದರು. ಈ ಕಿರು ಭಾಷಣದ ವೀಡಿಯೊ ತುಣುಕು ಕ್ಷಣಾರ್ಧದಲ್ಲಿ ವೈರಲ್‌ ಆಗಿದೆ. ನಿಮ್ಮನ್ನು ಭೇಟಿಯಾಗುವ ಸಲುವಾಗಿ ಇನ್ನೊಮ್ಮೆ ಸಿರೋಹಿಗೆ ಬರುತ್ತೇನೆ ಎಂದು ಮೋದಿ ಜನರಿಗೆ ಭರವಸೆ ನೀಡಿದ್ದಾರೆ.
ನಾನು ಬರುವಾಗ ತಡವಾಯಿತು. ಇದೀಗ ರಾತ್ರಿ 10 ಗಂಟೆ ದಾಟಿರುವುದರಿಂದ ನಾನು ಕಾನೂನು ಪಾಲಿಸಬೇಕಾಗುತ್ತದೆ. ಹೀಗಾಗಿ ನಿಮ್ಮ ಕ್ಷಮೆ ಯಾಚಿಸುತ್ತೇನೆ ಎಂದು ಮೋದಿ ಹೇಳಿದರು.

LEAVE A REPLY

Please enter your comment!
Please enter your name here

Most Popular

error: Content is protected !!