Tuesday, December 6, 2022
spot_img
Homeಸುದ್ದಿ450 ರೂಪಾಯಿಯಲ್ಲಿ ಮಂಗಳೂರು, ಉಡುಪಿ ದೇಗುಲಗಳ ದರ್ಶನ

450 ರೂಪಾಯಿಯಲ್ಲಿ ಮಂಗಳೂರು, ಉಡುಪಿ ದೇಗುಲಗಳ ದರ್ಶನ

ಕೆಎಸ್‌ಆರ್‌ಟಿಸಿಯಿಂದ ದಸರಾ ಟೂರ್‌ ಪ್ಯಾಕೇಜ್‌

ಮಂಗಳೂರು: ದಸರಾ ಪ್ರಯುಕ್ತ ಕೆಎಸ್‌ಆರ್‌ಟಿಸಿ ಮಂಗಳುರು ಮತ್ತು ಉಡುಪಿಯ ಪ್ರಮುಖ ದೇವಿ ದೇವಸ್ಥಾನಗಳನ್ನು ಸಂದರ್ಶಿಸುವ ಸಲುವಾಗಿ ವಿಶೇಷ ಬಸ್‌ಗಳನ್ನು ಪ್ರಾರಂಭಿಸಿದೆ. ಮಂಗಳೂರು ಉಡುಪಿಯ ಒಂಭತ್ತು ನವದುರ್ಗೆಯರ ಕ್ಷೇತ್ರಕ್ಕೆ ದಸರಾ ದರ್ಶನ ಪ್ಯಾಕೇಜ್‌ಗೆ ಕೆಎಸ್ಆರ್‌ಟಿಸಿ ಬಸ್ ಪ್ರಾರಂಭಿಸಿ ಕೇವಲ 450 ರೂ. ಟಿಕೆಟ್‌ ದರ ನಿಗದಿ ಮಾಡಲಾಗಿದೆ.
ಉಡುಪಿಯ ಐದು ಪ್ರಖ್ಯಾತ ದೇವಸ್ಥಾನಗಳ ದರ್ಶನವನ್ನು ಕೆಎಸ್ಆರ್‌ಟಿಸಿ ಮಾಡಿಸಲಿದೆ. ಅಕ್ಟೋಬರ್ 1ರಿಂದ 4ರ ವರೆಗೆ ದಸರಾ ದರ್ಶನ ಬಸ್ ಸಂಚಾರ ಮಾಡಲಿದೆ. ಮಂಗಳೂರು ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಿಂದ ಪ್ರತಿ ದಿನ ಬೆಳಗ್ಗೆ 8 ಗಂಟೆಗೆ ಬಸ್ ಉಡುಪಿಗೆ ಹೊರಡಲಿದೆ. ಉಡುಪಿ-ಕುಂದಾಪುರ ಮಾರ್ಗವಾಗಿ ಮಾರಣಕಟ್ಟೆ ಮಹಾಲಿಂಗೇಶ್ವರ ದೇವಸ್ಥಾನ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಉಡುಪಿ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಈ ಬಸ್ ತೆರಳಲಿದೆ. ಉಟೋಪಚಾರವನ್ನು ಹೊರತುಪಡಿಸಿ ಟಿಕೆಟ್ ದರ ವಯಸ್ಕರಿಗೆ 450 ರೂಪಾಯಿ, ಆರು ವರ್ಷದಿಂದ ಹನ್ನೆರಡು ವರ್ಷದ ಒಳಗಿನ ಮಕ್ಕಳಿಗೆ 400 ರೂಪಾಯಿ ಟಿಕೆಟ್ ದರ ಮಾಡಲಾಗಿದೆ.
ಬೆಳಗ್ಗೆ 8 ಗಂಟೆಗೆ ಮಂಗಳೂರಿನಿಂದ ಬಸ್ ಕುಂದಾಪುರ ಮಾರ್ಗವಾಗಿ ಮಾರಣಕಟ್ಟೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಲಿದೆ. ಬೆಳಗ್ಗೆ 11:30ಕ್ಕೆ ಅಲ್ಲಿಂದ ಹೊರಟು 12:30ಕ್ಕೆ ಮಾರಣಕಟ್ಟೆ ದೇವಸ್ಥಾನದಲ್ಲಿ ಇರಲಿದೆ. ಬಳಿಕ ಜಡ್ಕಲ್ ಮಾರ್ಗವಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳುವ ಬಸ್ ಮಧ್ಯಾಹ್ನ 1:15ರವರೆಗೆ ಅಲ್ಲಿರುತ್ತದೆ. ಬಳಿಕ ಊಟದ ಸಮಯಕ್ಕೆ ಜಡ್ಕಲ್, ಹಳ್ಳಿಹೊಳೆ ಮಾರ್ಗವಾಗಿ ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳುವ ಬಸ್ ಮಧ್ಯಾಹ್ನ 3 ಗಂಟೆಯ ತನಕ ಕಮಲಶಿಲೆಯಲ್ಲಿ ಇರಲಿದೆ. ಸಂಜೆ‌ 4:15ರ ಹೊತ್ತಿಗೆ ಜಡ್ಕಲ್, ಸಿದ್ದಾಪುರ, ಶಂಕರನಾರಾಯಣ, ಹಾಲಾಡಿ, ಬಿದ್ಕಲ್ ಕಟ್ಟೆ, ಸ್ಯಾಬರ ಕಟ್ಟೆ, ಬಾರ್ಕೂರು, ಬ್ರಹ್ಮಾವರ, ಸಂತೆಕಟ್ಟೆ ಮಾರ್ಗವಾಗಿ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ತೆರಳಲಿದೆ. ಸಂಜೆ 6.3ಒಕ್ಕೆ ಗಂಟೆ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣವನ್ನು ತಲುಪಲಿದೆ.

LEAVE A REPLY

Please enter your comment!
Please enter your name here

Most Popular

error: Content is protected !!