Tuesday, December 6, 2022
spot_img
Homeಸುದ್ದಿನಾಳೆ ಐತಿಹಾಸಿಕ ದುರ್ಗಾ ದೌಡ್‌: ಉಡುಪಿಯಲ್ಲಿ ಭರದ ಸಿದ್ಧತೆ

ನಾಳೆ ಐತಿಹಾಸಿಕ ದುರ್ಗಾ ದೌಡ್‌: ಉಡುಪಿಯಲ್ಲಿ ಭರದ ಸಿದ್ಧತೆ

50 ಸಾವಿರಕ್ಕೂ ಅಧಿಕ ಹಿಂದು ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ

ಕಾರ್ಕಳ: ಹಿಂದು ಜಾಗರಣ ವೇದಿಕೆಯ ಆಶ್ರಯದಲ್ಲಿ ಅ.2ರಂದು ಉಡುಪಿಯಲ್ಲಿ ನಡೆಯಲಿರುವ ದುರ್ಗಾ ದೌಡ್‌ ಕಾರ್ಯಕ್ರಮಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ಉಡುಪಿ ನಗರದಲ್ಲಿ ಮಧ್ಯಾಹ್ನ 2 ಗಂಟೆಗೆ ಬೃಹತ್‌ ಕಾರ್ಯಕ್ರಮ ನಡೆಯಲಿದ್ದು, ಭೋಪಾಲದ ಸಂಸದೆ, ಹಿಂದು ಫಯರ್‌ಬ್ರಾಂಡ್‌ ನಾಯಕಿ ಪ್ರಜ್ಞಾಸಿಂಗ್‌ ಠಾಕೂರ್‌ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಇದಕ್ಕೂ ಮೊದಲು ಕಡಿಯಾಳಿ ಮಹಿಷ ಮರ್ದಿನಿ ದೇವಸ್ಥಾನದಿಂದ ಉಡುಪಿ ಕೃಷ್ಣ ಮಠದ ಆವರಣದ ತನಕ ಬೃಹತ್‌ ಮೆರವಣಿಗೆ ನಡೆಯಲಿದೆ.
ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆಯಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮೂಲೆಮೂಲೆಯಿಂದ ಹಿಂದು ಕಾರ್ಯಕರ್ತರು ದುರ್ಗಾ ದೌಡ್‌ಗೆ ಆಗಮಿಸಲಿದ್ದಾರೆ. ಎಲ್ಲೆಡೆಯಿಂದ ನೂರಾರು ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ ಖಾಸಗಿ ವಾಹನಗಳು ಮತ್ತು ದ್ವಿಚಕ್ರ ವಾಹನಗಳಲ್ಲಿ ಕಾರ್ಯಕರ್ತರು ಆಗಮಿಸಲಿದ್ದಾರೆ.
ಕಾರ್ಕಳ ಮತ್ತು ಹೆಬ್ರಿಯಿಂದ ಬಸ್ಸಿನ ವ್ಯವಸ್ಥೆ
ಕಾರ್ಕಳದಿಂದ ದುರ್ಗಾ ದೌಡ್‌ಗೆ ಕಾರ್ಯಕರ್ತರನ್ನು ಕೊಂಡೊಯ್ಯಲು 50ಕ್ಕೂ ಅಧಿಕ ಬಸ್ಸಿನ ವ್ಯವಸ್ಥೆಯನ್ನು ಸ್ವಯಂ ಪ್ರೇರಿತರಾಗಿ ಹಿಂಜಾವೇ ಮಾಡಿದೆ. ಕಾರ್ಕಳ ನಗರದಿಂದ 15, ತೆಳ್ಳಾರಿನಿಂದ 5, ಅಜೆಕಾರಿನಿಂದ 5, ಹೆಬ್ರಿ, ಮುದ್ರಾಡಿ, ಮುನಿಯಾಲಿನಿಂದ 5, ಬೆಳ್ಮಣ್‌, ಸಚ್ಚರಿಪೇಟೆ, ನಂದಳಿಕೆ ಸೂಡ, ಬೋಳದಿಂದ 4 , ನಿಟ್ಟೆಯಿಂದ 4, ಬೈಲೂರಿನಿಂದ 12, ಬಜಗೋಳಿ, ಮಾಳ ಭಜನಾ ಮಂದಿರದಿಂದ 2, ಕೆರ್ವಾಶೆಯಿಂದ 1, ಹೊಸ್ಮಾರಿನಿಂದ 3 ಬಸ್‌ಗಳು ಇವೆ ಎಂದು ಸಂಘಟಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಗುರುಪ್ರಸಾದ್‌ ನಾರಾವಿ ಅವರನ್ನು 9880559730 ನಂಬರಿನಲ್ಲಿ ಸಂಪರ್ಕಿಸಬಹುದು.
ಬಿಗಿ ಪೊಲೀಸ್‌ ಬಂದೋಬಸ್ತ್‌
ದುರ್ಗಾ ದೌಡ್‌ಗಾಗಿ ಪೊಲೀಸರು ಬಿಗಿ ಬಂದೋಬಸ್ತಿನ ಏರ್ಪಾಡು ಮಾಡಿದ್ದಾರೆ. ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಇಟ್ಟು ಕಣ್ಗಾವಲು ತಪಾಸಣೆ ಪ್ರಾರಂಭಿಸಲಾಗಿದೆ. ನಾಳೆ ಉಡುಪಿಯಲ್ಲಿ ಸಂಚಾರ ವ್ಯವಸ್ಥೆಯೂ ಬದಲಾಗಲಿದೆ. ಮಧ್ಯಾಹ್ನ 12 ಗಂಟೆಯೊಳಗೆಲ್ಲ ಕಾರ್ಯಕರ್ತರು ಆಗಮನವಾಗುವ ನಿರೀಕ್ಷೆಯಿದೆ.

LEAVE A REPLY

Please enter your comment!
Please enter your name here

Most Popular

error: Content is protected !!