Tuesday, December 6, 2022
spot_img
Homeಸುದ್ದಿಒಎನ್‌ಜಿಸಿ ತೈಲಬಾವಿಯಲ್ಲಿ ಭಾರಿ ಸ್ಫೋಟ

ಒಎನ್‌ಜಿಸಿ ತೈಲಬಾವಿಯಲ್ಲಿ ಭಾರಿ ಸ್ಫೋಟ

ಅಹ್ಮದಾಬಾದ್‌: ಗುಜರಾತಿನ ಮೆಹಸಾನ ಜಿಲ್ಲೆಯ ಕಸಲ್‌ಪುರ ಎಂಬಲ್ಲಿರುವ ಒಎನ್‌ಜಿಸಿ ತೈಲ ಬಾವಿಯಲ್ಲಿ ಭಾರಿ ಸ್ಫೋಟ ಸಂಭವಿಸಿ ಸುಮಾರು 2 ಕಿ.ಮೀ. ವ್ಯಾಪ್ತಿಯಲ್ಲಿ ಅನಿಲ ಸೋರಿಕೆ ಭೀತಿ ಕಾಣಿಸಿಕೊಂಡಿದೆ. ಗುರುವಾರ ತಡರಾತ್ರಿ ಸ್ಫೋಟ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸುಮಾರು 4 ಕಿ.ಮೀ. ದೂರದ ತನಕ ಸ್ಫೋಟದ ಸದ್ದು ಕೇಳಿಸಿದೆ. ಒಎನ್‌ಜಿಸಿ ತಂಡ ಅನಿಲ ಸೋರಿಕೆ ತಡೆಯಲು ಪ್ರಯತ್ನಿಸುತ್ತಿದ್ದು, ಭಾಗಶಃ ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ತುರ್ತು ನೆರವು ಮತ್ತು ವೈದ್ಯಕೀಯ ತಂಡವನ್ನು ಸಜ್ಜಾಗಿಡಲಾಗಿದೆ.

LEAVE A REPLY

Please enter your comment!
Please enter your name here

Most Popular

error: Content is protected !!