Tuesday, December 6, 2022
spot_img
Homeಸ್ಥಳೀಯ ಸುದ್ದಿಭೂತಾನ್‌ನಿಂದ ಅಡಿಕೆ ಆಮದು - ಮಾರ್ಕೆಟ್‌ನಲ್ಲಿ ಬದಲಾವಣೆ ಆಗದು

ಭೂತಾನ್‌ನಿಂದ ಅಡಿಕೆ ಆಮದು – ಮಾರ್ಕೆಟ್‌ನಲ್ಲಿ ಬದಲಾವಣೆ ಆಗದು

ಕಾರ್ಕಳ : ನಮ್ಮ ದೇಶದಲ್ಲಿ ಬಳಕೆಯಾಗುತ್ತಿರುವ ಅಡಿಕೆ ಪ್ರಮಾಣ 1.5 ಲಕ್ಷ ಟನ್‌. ಭೂತಾನ್‌ ದೇಶದಲ್ಲಿ ಕೇವಲ 17 ಸಾವಿರ ಮೆಟ್ರಿನ್ ಟನ್ ಅಡಿಕೆ ಬೆಳೆಯಲಾಗುತ್ತಿದೆ.‌ ಇದು ನಮ್ಮ ದೇಶದ ಬೆಳೆಯ 0.02 ಪ್ರಮಾಣ. ಹಾಗಾಗಿ ಇಲ್ಲಿಯ ಮಾರ್ಕೆಟ್‌ನಲ್ಲಿ ಯಾವೊಂದು ಬದಲಾವಣೆಯಾಗಲು ಸಾಧ್ಯವಿಲ್ಲ‌ ಎಂದು ಕೇಂದ್ರ ಕೃಷಿ ಮತ್ತು ಕಲ್ಯಾಣ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಶುಕ್ರವಾರ ಕಾರ್ಕಳ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನೆರೆ ರಾಷ್ಟ್ರ ಭೂತಾನ್‌ನೊಂದಿಗಿನ ಒಪ್ಪಂದ ಮತ್ತು ಅಲ್ಲಿನ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿರುವ ಕಾರಣ ಭೂತಾನ್ ಕೇಂದ್ರ ಸರಕಾರಕ್ಕೆ ಮಾಡಿಕೊಂಡ ಕೋರಿಕೆಯಂತೆ ಒಂದು ವರ್ಷದ ಮಟ್ಟಿಗೆ ಅಡಿಕೆ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ಕೃಷಿ ಮತ್ತು ಕಲ್ಯಾಣ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಅಡಿಕೆ ಆಮದಿನ ಮೇಲೆ ಕೇಂದ್ರ ಸರಕಾರ ಅಧಿಕ ತೆರಿಗೆ ಹೇರಿರುವ ಕಾರಣ ಅಡಿಕೆಗಿಂದು 450 ರಿಂದ 500 ರೂ. ಬೆಲೆಗೆ ಮಾರಾಟವಾಗುತ್ತಿದೆ. ಕೇಂದ್ರ ಸರಕಾರ ಅಡಿಕೆ ಸೇರಿದಂತೆ ಎಲ್ಲ ಬೆಳೆಗಾರರ ರಕ್ಷಣೆಗೆ ಬದ್ಧವಾಗಿದೆ ಎಂದು ಶೋಭಾ ಭರವಸೆ ನೀಡಿದರು.
ನರೇಂದ್ರ ಮೋದಿ ಸರಕಾರ ಮೂಲಭೂತ ಸೌಕರ್ಯಕ್ಕಾಗಿ ವಿಶೇಷ ಒತ್ತು ನೀಡುತ್ತಿದೆ. ರೈಲ್ವೇ, ರಸ್ತೆ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ಒದಗಿಸಿದೆ. ದೇಶದ 80 ಶೇ. ದಷ್ಟು ಮಂದಿಗೆ ಕೇಂದ್ರದ ವಿವಿಧ ಯೋಜನೆಯ ಪ್ರಯೋಜನ ಪಡೆಯುವಂತಾಗಿದೆ ಎಂದು ಶೋಭಾ ತಿಳಿಸಿದರು.

ಹಲವಾರು ಬಾರಿ ಮನವಿ ಸಲ್ಲಿಸಿದ್ದೆ

2001ರಲ್ಲಿ ಸಿಮಿ ಸಂಘಟನೆಯನ್ನು ವಾಜಪೇಯಿ ಸರಕಾರ ನಿಷೇಧ ಮಾಡಿತ್ತು. ಅದರ ಬಳಿಕ ಸಿಮಿ ಮಾದರಿಯಲ್ಲಿ ಪ್ಯಾಪುಲರ್‌ ಫ್ರಂಟ್‌ ಆಫ್‌ ಇಂಡಿಯಾ ಹುಟ್ಟುಹಾಕಲಾಯಿತು. ಈ ಸಂಘಟನೆಯನ್ನು ಬ್ಯಾನ್‌ ಮಾಡುವಂತೆ ಹಲವಾರು ಬಾರಿ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದೆ. ಇದೀಗ ಎಎನ್‌ಐ ದಾಳಿ ವೇಳೆ ಪಿಎಫ್‌ಐ ಸಂಘಟನೆ ನಡೆಸುತ್ತಿರುವ ಭಯೋತ್ಪಾದನೆ, ಕೋಮುಗಲಭೆಗೆ ಪ್ರಚೋದನೆ, ದೇಶ ದ್ರೋಹಿ ಕಾರ್ಯ ಸಾಕ್ಷಿ ಸಹಿತ ಸಾಬೀತಾಗಿದೆ. ಹೀಗಾಗಿ ಕೇಂದ್ರ ಸರಕಾರ ಪಿಎಫ್‌ಐಯನ್ನು ನಿಷೇಧ ಮಾಡಿದೆ. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರನ್ನು ಅಭಿನಂದಿಸುವುದಾಗಿ ಶೋಭಾ ಹೇಳಿದರು.

27 ಕಡೆ ತರಬೇತಿ ಕೇಂದ್ರ
ಪಿಎಫ್‌ಐ ಸಂಘಟನೆ 27 ಕಡೆಗಳಲ್ಲಿ ತರಬೇತಿ ಕೇಂದ್ರ ಸ್ಥಾಪಿಸಿತ್ತು. ತುಂಗ ನದಿಯಲ್ಲಿ ಪ್ರಯೋಗಾರ್ಥ ಬಾಂಬ್‌ ಸ್ಫೋಟ ನಡೆಸಿದ್ದು, ಈ ವೇಳೆ ದೇಶದ ರಾಷ್ಟ್ರಧ್ವಜ ಸುಟ್ಟು ಸಂಭ್ರಮಿಸಿದ್ದರು. ಯಾರು ಹಿಂದೂ ಯುವಕರು ಚುರುಕಿನಿಂದ ಕಾರ್ಯನಿರ್ವಹಿಸುತ್ತಿದ್ದರೋ ಅವರನ್ನು ಹತ್ಯೆ ಮಾಡುತ್ತಿದ್ದರು. ಮಕ್ಕಳನ್ನು ದಾರಿತಪ್ಪಿಸುವ ಕಾರ್ಯ ಮಾಡುತ್ತಿದ್ದರು. ಇಂತಹ ಸಂಘಟನೆಗಳಿಗೆ ಶಿಕ್ಷೆಯಾಗಲೇಬೇಕು ಎಂದು ಶೋಭಾ ಹೇಳಿದರು.

ಸಿದ್ಧರಾಮಯ್ಯ ಕಾರಣ
ಸಿದ್ದರಾಮಯ್ಯ ಸರಕಾರ ಪಿಎಫ್‌ಐ ಸಂಘಟನೆಯ ಅಪರಾಧಿಗಳ ಕೇಸ್‌ ವಾಪಸ್‌ ಪಡೆದಿರುವುದು ಮತ್ತು ಜೈಲಿನಲ್ಲಿದ್ದ ಪಿಎಫ್‌ಐ ಕಾರ್ಯಕರ್ತರನ್ನು ಬಿಡುಗಡೆ ಮಾಡಿದ್ದೇ ಇಂದು ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿತ್ತು. ಜಾತಿ, ಧರ್ಮ ನೋಡಿ ಸಿದ್ದರಾಮಯ್ಯ ಸರಕಾರ ಯೋಜನೆ ರೂಪಿಸಿತ್ತು ಎಂದು ಶೋಭಾ ಟೀಕಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಬಿಜೆಪಿ ಹಿರಿಯ ನಾಯಕ ಎಂ.ಕೆ. ವಿಜಯ ಕುಮಾರ್‌, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ರೇ‍ಶ್ಮಾ ಉದಯ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ರವೀಂದ್ರ ಕುಮಾರ್‌, ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ನವೀನ್‌ ನಾಯಕ್‌, ಜಯರಾಮ್‌ ಸಾಲ್ಯಾನ್‌ ಉಪಸ್ಥಿತರಿದ್ದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಆನೆಕೆರೆ ಬಸದಿ ಮತ್ತು ಮಾರಿಗುಡಿ ದೇಗುಲ ಬೇಟಿ ನೀಡಿ, ಜೀರ್ಣೊದ್ಧಾರ ಕಾರ್ಯ ವೀಕ್ಷಿಸಿದರು.

LEAVE A REPLY

Please enter your comment!
Please enter your name here

Most Popular

error: Content is protected !!