Sunday, October 2, 2022
spot_img
Homeಸುದ್ದಿಪತ್ರಕರ್ತೆಗೆ ರಾಹುಲ್‌ ಗಾಂಧಿ ಅವಮಾನ

ಪತ್ರಕರ್ತೆಗೆ ರಾಹುಲ್‌ ಗಾಂಧಿ ಅವಮಾನ

ತಿರುವನಂತಪುರ: ಭಾರತ್‌ ಜೋಡೋ ಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇರಳದಲ್ಲಿ ಪತ್ರಕರ್ತೆಯೊಬ್ಬರನ್ನು ಅವಮಾನಿಸಿದ ಆರೋಪಕ್ಕೊಳಗಾಗಿದ್ದಾರೆ.
ಎನ್‌ಡಿಟಿವಿ ಮಹಿಳಾ ಪತ್ರಕರ್ತೆಯನ್ನು ರಾಹುಲ್‌ ಗಾಂಧಿ ಅವಮಾನಿ ಘಟನೆ ನಡೆದಿದೆ. ಎರ್ನಾಕುಲಂನಲ್ಲಿ ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ರಾಹುಲ್ ಗಾಂಧಿಯನ್ನು ಎನ್‌ಡಿಟಿವಿಯ ಪತ್ರಕರ್ತೆ ಪ್ರಶ್ನಿಸಿದರು. ಆದರೆ ಪ್ರಶ್ನೆಗೆ ಯಾವುದೇ ಉತ್ತರ ನೀಡದ ರಾಹುಲ್ ಗಾಂಧಿ ನಿಮಗೆ ಹೊಸ ಮಾಲೀಕರು ಸಿಕ್ಕಿರಬೇಕಲ್ವಾ ಎಂದು ಹೇಳಿ ಪದೇ ಪದೆ ಅವಮಾನಿಸಿದ್ದಾರೆ. ಇತ್ತೀಚಿಗಷ್ಟೇ ಎನ್‌ಡಿಟಿವಿ ಮಾಧ್ಯಮ ಸಂಸ್ಥೆಯನ್ನು ಅದಾನಿ ಗ್ರೂಪ್​ ಖರೀದಿಸಿದೆ. ಪತ್ರಿಕಾಗೋಷ್ಠಿಯಲ್ಲಿ, ಪತ್ರಕರ್ತೆ ಮುಂಬರುವ ಪಕ್ಷದ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಏಕೆ ಸ್ಪರ್ಧಿಸುತ್ತಿಲ್ಲ ಎಂದು ರಾಹುಲ್ ಗಾಂಧಿಯನ್ನು ಪ್ರಶ್ನಿಸಿದ್ದಾರೆ. ಆದರೆ ಆಕೆಯ ಪ್ರಶ್ನೆಗೆ ಉತ್ತರಿಸುವ ಬದಲು ರಾಹುಲ್ ಗಾಂಧಿ ನಿಮಗೆ ಹೊಸ ಮಾಲೀಕರು ಸಿಕ್ಕಿದ್ದಾರಲ್ವಾ ಎಂದು ಅವರು ನಗುತ್ತ ಪ್ರತಿಕ್ರಿಯಿಸಿದರು.
ಪತ್ರಕರ್ತೆ ಮತ್ತೆ ತನ್ನ ಪ್ರಶ್ನೆಯನ್ನು ಕೇಳಿದರು. ಆದರೆ ರಾಹುಲ್ ಗಾಂಧಿ ಆ ಮಹಿಳಾ ಪತ್ರಕರ್ತೆಯನ್ನು ಅವಮಾನಿಸಲು ನಿರ್ಧರಿಸಿದ್ದರೆಂದು ಕಾಣುತ್ತದೆ. ಹಿಗಾಗಿ ಪ್ರಶ್ನೆಗೆ ಉತ್ತರ ನೀಡದೆ ಮತ್ತೆ ನಿಮಗೆ ಹೊಸ ಮಾಲೀಕರಿದ್ದಾರಾ ಎಂದು ಪ್ರಶ್ನಿಸಿದರು. ಆಗ ಕಾಂಗ್ರೆಸ್ ಸಂಸದರೊಬ್ಬರು ಈ ಹಿಂದೆ ಕೇಳಿದ್ದ ಪ್ರಶ್ನೆಗೆ ಉತ್ತರಿಸಿ, ಈ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ ಎಂದು ಹೇಳಿದರು. ಬಳಿಕ ಎನ್‌ಡಿಟಿವಿ ಪತ್ರಕರ್ತೆ ಮತ್ತೆ ಪ್ರಶ್ನೆ ಕೇಳಿದಾಗ, ಮತ್ತೊಂದು ಅಂಬಾನಿ-ಅದಾನಿ ಜಿಬೆ ಮಾಡಲು ಇದು ಸೂಕ್ತ ಅವಕಾಶವಾಗಿದೆ ಎಂದರು. ಪತ್ರಕರ್ತೆ ಈಗ ತಾನು ಆರೋಪಿಸುತ್ತಿದ್ದ ಮಾಧ್ಯಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಳೆ ಎಂದು ಅರಿತುಕೊಂಡ ರಾಹುಲ್ ಗಾಂಧಿ, ಮಾಲೀಕತ್ವವು ಅಪ್ರಸ್ತುತವಲ್ಲ ಎಂದು ಹೇಳಿದರು. ಪತ್ರಿಕೆಗಳ ಮಾಲೀಕತ್ವವು ಪತ್ರಿಕೆಗಳು ಏನು ಮಾಡುತ್ತವೆ ಎಂಬುದನ್ನು ವ್ಯಾಖ್ಯಾನಿಸುತ್ತದೆ ಎಂದು ಹೇಳಿದರು. ಇದರೊಂದಿಗೆ, ಅದಾನಿ ಸಮೂಹದ ಸ್ವಾಧೀನದ ನಂತರ ಎನ್‌ಡಿಟಿವಿಯ ಸಂಪಾದಕೀಯ ನಿಲುವು ಬದಲಾಗಲಿದೆ ಎಂದು ಅವರು, ಪತ್ರಕರ್ತೆ ಭಾರತ್ ಜೋಡೋ ಯಾತ್ರೆಯನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

LEAVE A REPLY

Please enter your comment!
Please enter your name here

Most Popular

error: Content is protected !!